ಅಶ್ಲೀಲವಾಗಿ ಮಾತಾಡಿದ ಅಧಿಕಾರಿಗೆ ಕಚೇರಿಯಲ್ಲೆ ಬಿತ್ತು ಮಹಿಳೆಯರಿಂದ ಧರ್ಮದೇಟು..! ವಿಡಿಯೋ ವೈರಲ್

Updated: Wednesday, July 21, 2021, 12:34 [IST]

    

ಹೌದು ಸ್ನೇಹಿತರೆ ಮೈಸೂರು ಮಹಾನಗರ ಪಾಲಿಕೆಯ ಜೋನಲ್ ಅಧಿಕಾರಿಯಾಗಿರುವ ವಿಷಕಂಠ ಒಬ್ಬ ಹೆಣ್ಣು ಮಗಳ ಜೊತೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಮತ್ತು ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆತನ ಮೇಲೆ ಕೆಲ ಮಹಿಳೆಯರು ಆರೋಪ ಮಾಡಿ ಧರ್ಮದೇಟು ಕೊಟ್ಟಿದ್ದು ಇದೀಗ ಮಹಿಳೆಯರು ವಿಷಕಂಠನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ..ಹೌದು ವಿಷಕಂಠ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಗೆ ಕೆಲಸದ ಅವಧಿ ಮುಗಿದ ಬಳಿಕ ಅವರಿಗೆ ಕಾಲ್ ಮಾಡಿ ಬರುತ್ತೀಯ ಎಂದು ಮಹಿಳೆಗೆ ಕಾಲ್ ಮಾಡಿದ್ದ ಎಂದು ಅಲ್ಲಿ ನೆರೆದಿದ್ದ ಸ್ಥಳೀಯರು ಹೇಳುತ್ತಿದ್ದಾರೆ.  

ಅಷ್ಟುಹೊತ್ತಿಗೆ ಆಕೆಯನ್ನು ಕಚೇರಿಗೆ ಕರೆಸಿಕೊಳ್ಳುವ ಉದ್ದೇಶ ಏನಿತ್ತು ಎಂದು ವಿಷಕಂಠ ಅವರ ಬಳಿ ಪ್ರಶ್ನೆ ಮಾಡಿ ಮಹಿಳೆಯರು ಪ್ರಶ್ನೆ ಮಾಡಿದ್ದು ಈ ವಿಷಕಂಠ ಅವರಿಗೆ ಧರ್ಮದೇಟು ಕೊಟ್ಟಿದ್ದಾರೆ. ವಿಷಕಂಠ ಮೈಸೂರು ಮಹಾನಗರ ಪಾಲಿಕೆಯ ಜೋನಲ್ ಅಧಿಕಾರಿ ಎಂದು ತಿಳಿದುಬಂದಿದೆ. ಶಾರದಾ ನಗರದ ವಲಯ ಕಚೇರಿಗೆ ನುಗ್ಗಿ ಕೆಲ ಮಹಿಳೆಯರು ಸಕ್ಕತಾಗಿ ಈತನಿಗೆ ಥಳಿಸಿದ್ದಾರೆ ಇದು ಈ ತಳಿತದ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ. ಹೌದು ಸರಸ್ವತಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದೀಗ ವಿಷಕಂಠನ ವಿರುದ್ಧ ಕೆಲವು ಮಹಿಳೆಯರು ಸೇರಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.

ಹೌದು ಈತ ಮಹಿಳೆಯರ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದ, ಅಶ್ಲೀಲವಾಗಿ ಮಹಿಳೆಯರ ಜೊತೆ ನಡೆದುಕೊಳ್ಳುತ್ತಿದ್ದ ಎಂದು ಆರೋಪ ಮಾಡಿ ಈತನಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ. ಈ ಥಳಿತದ ವಿಡಿಯೋ ತುಂಬಾ ವೈರಲ್ ಆಗಿದ್ದು, ವಿಡಿಯೋ ನೋಡಿ ಕೆಲ ಪರ ವಿರೋಧ ಅನಿಸಿಕೆಗಳು ಕೇಳಿಬಂದಿವೆ. ಮಹಿಳೆಯರು ಹೇಳುವುದನ್ನು ನಂಬಬೇಡಿ, ಸಾಕ್ಷಿ ನೋಡಿ ಅವರು ತಪ್ಪು ಮಾಡಿದ್ದೇ ಆದಲ್ಲಿ ಶಿಕ್ಷೆ ಕೊಡಿಸಿ ಎಂದು ಸಹ ವಿಡಿಯೋ ನೋಡಿದ ಬಳಿಕ ತಿಳಿಸಿದ್ದಾರೆ. ನೀವು ಕೂಡ ಒಂದು ಬಾರಿ ಧರ್ಮದೇಟಿನ ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು....  ಕೃಪೆ ಟಿವಿ 9 video