ನಿಲ್ಲದ ಮಳೆಯಾರ್ಭಟ: ಇನ್ನು 3 ದಿನ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್

By Infoflick Correspondent

Updated:Tuesday, September 6, 2022, 16:32[IST]

ನಿಲ್ಲದ ಮಳೆಯಾರ್ಭಟ: ಇನ್ನು 3 ದಿನ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸಂಜೆ ಮಳೆ ಆರ್ಭಟ ಜೋರಾಗಿದೆ. ಕಳೆದ ಮೂರು ದಿನಗಳೀಂದ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಸೆಪ್ಟೆಂಬರ್ 9 ರವರೆಗೆ ಮಳೆ ಹೀಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಆರು ದಿನಗಳ ಕಾಲ ರಾಜ್ಯದಲ್ಲಿ ವರುಣಾರ್ಭಟ ಜೋರಾಗಿರಲಿದೆ. ಗುಡುಗು ಸಿಡಿಲು ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.  

ವರುಣಾರ್ಭಟ ಇನ್ನಷ್ಟು ದಿನ ಮುಂದುವರೆಯಲಿದ್ದು, ಜನರು ಆತಂಕಗೊಂಡಿದ್ದಾರೆ. ಈಗಾಗಲೇ ಕೆಲ ಏರಿಯಾಗಳು ಮುಳುಗಡೆಯಾಗಿದ್ದು, ಜನರು ಮನೆಯಲ್ಲಿರಲಾಗದೇ ಆಶ್ರಯ ಕೇಂದ್ರಗಳ ಮೊರೆ ಹೋಗಿದ್ದಾರೆ. ಲಕ್ಷಾಂತರ ಬೆಲೆ ಬಾಳುವ ವಸ್ತುಗಳು, ಕಾರು, ಬೈಕ್ ಎಲ್ಲವೂ ನೀರಿನಲ್ಲಿ ಮುಳುಗಡೆಯಾಗಿವೆ. ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳ ಬದಲು ಬೋಟ್ ಗಳು ಸಂಚರಿಸುವಂತಾಗಿದೆ. ಬೆಳಗಿನ ಹೊತ್ತಲ್ಲಿ ಬಿಸಿಲಿದ್ದರೂ, ಮಧ್ಯಾಹ್ನದ ವೇಳೆಗೆ ಮೋಡ ಕವಿದು ಸಂಜೆಗೆ ಮಳೆ ಶುರುವಾಗುತ್ತದೆ. ರಾತ್ರೀ ಪೂರಾ ಮಳೆ ಸುರಿದು ನಗರದಲ್ಲಿ ಅವಾಂತರ ಸೃಷ್ಟಿಯಾಗಿದೆ. 

ಕಳೆದ ಐದು ದಿನಗಳಿಂದ ಸುರಿದ ಮಳೆಗೆ ರಾಜ್ಯದ 17 ಜಿಲ್ಲೆಗಳಲ್ಲಿ ಭಾರೀ ನಷ್ಟ ಉಂಟಾಗಿದೆ. ಬೆಂಗಳೂರಿನ, ಇಂದಿರಾನಗರ, ಸಿಲ್ಕ್ ಬೋರ್ಡ್, ಜೆಪಿ ನಗರ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನರಿಗೆ ತೊಂದರೆಯಾಗಿದೆ. ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ಜನ ಸಾಮಾನ್ಯರು ಪರದಾಡುವಂತಾಗಿದೆ.  ಬೆಂಗಳೂರು ಸೇರಿದಂತೆ ರಾಮನಗರ, ಚಾಮರಾಜನಗರ, ಮಂಡ್ಯ, ಚಿಕ್ಕಮಗಳೂರು, ಮೈಸೂರಿನಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಮಳೆಯಿಂದ ಪ್ರವಾಹ ಸೃಷ್ಟಿಯಾಗಿದ್ದು, ಜನ ಕಂಗಾಲಾಗಿದ್ದಾರೆ. ಲಕೊಡಗು, ಶಿವಮೊಗ್ಗ, ಕರಾವಳಿ ಪ್ರದೇಶಗಳೂ ಸೇರಿದಂತೆ. ಬೆಳಗಾವಿ, ಧಾರವಾಡ, ತುಮಕೂರು, ಹಾಸನ ಜಿಲ್ಲೆಗಳಲ್ಲೀ ಮಳೆ ಅಬ್ಬರ ಹೆಚ್ಚಿರಲಿದ್ದು, ನದಿ ಹಾಗೂ ಸಮುದ್ರ ದಡದ ಜನರಿಗೆ ಸುರಕ್ಷತ ಸ್ಥಳಗಳಿಗೆ ತೆರಳುವಂತೆ ಮುನ್ಸೂಚನೆ ನೀಡಲಾಗಿದೆ.