ಬೆಂಗಳೂರಿನ ಸವಾರರಿಗೆ ದೊಡ್ಡ ಶಾಕ್ ಕೊಡಲು ಮುಂದಾದ ರಾಜ್ಯ ಸರಕಾರ..! ಮನೆ ಮುಂದೆ ಗಾಡಿ ನಿಲ್ಲಿಸಲು 5000 ಅಂತೆ

By Infoflick Correspondent

Updated:Wednesday, September 21, 2022, 15:43[IST]

ಬೆಂಗಳೂರಿನ ಸವಾರರಿಗೆ ದೊಡ್ಡ ಶಾಕ್ ಕೊಡಲು ಮುಂದಾದ ರಾಜ್ಯ ಸರಕಾರ..! ಮನೆ ಮುಂದೆ ಗಾಡಿ ನಿಲ್ಲಿಸಲು 5000 ಅಂತೆ

ಹೌದು ಇದೀಗ ಬೆಂಗಳೂರಿನ ಜನರಿಗೆ ಮತ್ತು ವಾಹನ ಸವಾರರಿಗೆ ರಾಜ್ಯ ಸರ್ಕಾರ ಒಂದು ಅತಿ ದೊಡ್ಡ ಶಾಕ್ ಸುದ್ದಿ ನೀಡಿದೆ. ನಿಮ್ಮ ವಾಹನವನ್ನು ಇನ್ನು ಮುಂದೆ ರಸ್ತೆಗಳ ಬದಿಗಳಲ್ಲಿ ಹಾಗೂ ನಿಮ್ಮ ಮನೆಯೇ ಮುಂದೆ ನಿಲ್ಲಿಸಲು ಇಂತಿಷ್ಟು ಹಣ ಎಂಬಂತೆ ಪಾರ್ಕಿಂಗ್ ನೂತನ ನಿಯಮದ ಪ್ರಕಾರ ಶುಲ್ಕವನ್ನು ಕಟ್ಟಬೇಕು ಎಂಬುದಾಗಿ ತಿಳಿದು ಬಂದಿದೆ. ಅಲ್ಲಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ಸಾಧ್ಯವಾಗದ ರಾಜ್ಯ ಸರ್ಕಾರ ಇದೀಗ ವಾಹನ ಸವಾರರ ಮೇಲೆ ಶುಲ್ಕದ ಮೂಲಕ ಲೂಟಿ ಮಾಡಲು ಮುಂದಾಗಿದೆ ಎಂದು ಹೇಳಿಕೊಂಡಿದ್ದು ಆಮ್ ಆದ್ಮಿ ಪಕ್ಷದ ಬೆಂಗಳೂರು ಅಧ್ಯಕ್ಷರಾದ ಮೋಹನ್ ದಾಸರಿ ಅವರು ಇದನ್ನು ವಿರೋಧ ಮಾಡಿದ್ದಾರೆ. ಹಾಗೆ ಸರಕಾರದ ಮೇಲೆ ಈ ಪಾರ್ಕಿಂಗ್ ನೀತಿ ಖಂಡಿಸಿ ಆರೋಪ ಮಾಡಿದ್ದಾರೆ..

ಬೆಂಗಳೂರಿನ ರಸ್ತೆಗಳಲ್ಲಿ ರಸ್ತೆ ಬದಿ ನಿಮ್ಮ ವಾಹನವನ್ನ ನಿಲ್ಲಿಸುವುದಾದರೆ ಒಂದು ಗಂಟೆಗೆ ಇಂತಿಷ್ಟು ಎಂಬಂತೆ ಶುಲ್ಕ ಪಾವತಿಸಬೇಕು ಗಂಟೆಗೆ 15 ರಿಂದ 30 ರೂಪಾಯಿ ಶುಲ್ಕವನ್ನು ನೀಡಬೇಕು, ಇದು ನೂತನ ಪಾರ್ಕಿಂಗ್ ನೀತಿ ಅಗಿದೆಯಂತೆ. ಜೊತೆಗೆ ನಿಮ್ಮ ಮನೆಯ ಬಳಿ ವಾಹನ ನಿಲ್ಲಿಸಲಿಕ್ಕೆ 3000 ದಿಂದ 5000 ಹಣವನ್ನು ಶುಲ್ಕವಾಗಿ ಕಟ್ಟಬೇಕು ಎಂದು ಹೊಸ ನಿಯಮವನ್ನ ಹೇಳಿಕೊಂಡಿದ್ದಾರೆ ಎನ್ನಲಾಗಿ ಪಾರ್ಕಿಂಗ್ ನೂತನ ನಿಯಮವನ್ನು ಈಗ ಎಎಪಿ ಅವರು ವಿರೋಧ ಮಾಡಿದ್ದಾರೆ. ಇದು ಜನಸಾಮಾನ್ಯರ ಹಾಗೂ ಜೀವನಕ್ಕೆ ವಾಹನ ಹೊಂದಿ ಜೀವನ ನಡೆಸುವವರ ಬದುಕು ಕಷ್ಟ ಆಗುತ್ತದೆ. ಬಡವರು ವಾಹನವನ್ನೆ ನಂಬಿ ಜೀವನ ನಡೆಸುವವರಿಗೆ ಮೊದಲೇ ಹೆಚ್ಚು ಕಷ್ಟ ಆಗಿರುತ್ತದೆ.  ಅಂತಹದರಲ್ಲಿ ಅವರು ರಸ್ತೆ ಬದಿ ಮತ್ತು ಅವರ ಮನೆ ಮುಂದೆ ವಾಹನ ನಿಲ್ಲಿಸಲಿಕ್ಕೆ ಶುಲ್ಕ ಕಟ್ಟಿಸಿಕೊಳ್ಳುವುದಾದರೆ ಅವರ ಜೇಬಿಗೆ ನೀವು ಕತ್ತರಿ ಹಾಕದಂತಾಗುತ್ತದೆ ಎಂದು ವಿರೋಧ ಮಾಡುತ್ತಿದ್ದಾರೆ.

ಕೂಡಲೇ ಈ ನಿಯಮವನ್ನು ಹಿಂತೆಗೆದುಕೊಳ್ಳಿ, ಸರಿಯಾಗಿ ರಸ್ತೆಗಳನ್ನ ಸರಿಪಡಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹೌದು ಈಗಿರುವ ಬಿಜೆಪಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ. ಬೆಂಗಳೂರಿನ ಜನರಿಗೆ ಹಾಗೇನೇ  ಮನೆಯ ಮುಂದೆ ವಾಹನ ನಿಲ್ಲಿಸುವವರೆಗೂ ಕೂಡ ಈ ಹೊಸ ಪಾರ್ಕಿಂಗ್ ನಿಯಮ ಅನ್ವಯ ಆಗಲಿದೆಯಂತೆ. ಹಾಗಾಗಿ ಎಎಪಿ ಅವರು ಈ ಬಗ್ಗೆ ಸುದ್ದಿಗೋಷ್ಟಿ ಮಾಡಿ ಮಾತನಾಡಿದ್ದು ಬೆಂಗಳೂರಿಗೆ ನೀವು ಇಂದು ಹೊಸದಾಗಿ ಬಂದ ಈ ಪಾರ್ಕಿಂಗ್ ನಿಯಮವನ್ನ ಪಾಲಿಸಿದ್ದೆ ಆದರೆ ಮುಂದೊಂದು ದಿನ ಇದೇ ಶುಲ್ಕವನ್ನು ಇನ್ನಷ್ಟು ಹೆಚ್ಚಿಗೆ ಮಾಡುತ್ತಾರೆ, ವರ್ಷಕ್ಕೆ ಎರಡು ನೂರು ಕೋಟಿ ಹಣವನ್ನು ಲೂಟಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ, ಹಾಗಾಗಿ ಬಿಜೆಪಿ ಸರ್ಕಾರ ಹೊಸ ನಿಯಮವನ್ನು ತಂದಿದೆ ಎಂದು ಬುದ್ಧಿವಾದ ಹೇಳುತ್ತಿದ್ದಾರೆ.

ಇದಕ್ಕೆ ನಮ್ಮ ಜೊತೆ ಕೈಜೋಡಿಸಿ ಇದನ್ನ ವಿರೋಧ ಮಾಡಿ ಇಲ್ಲವಾದಲ್ಲಿ ನೀವು ದುಡಿದ ದುಡ್ಡೆಲ್ಲ ಅಧಿಕಾರಿಗಳ ಮತ್ತು ಜನ ಪ್ರತಿನಿದಿಗಳ ಬೊಕ್ಕಣಕ್ಕೆ ಸೇರುವುದು ಪಕ್ಕ ಎಂದು ವಿರೋಧ ಮಾಡಿ ಮಾತನಾಡಿದ್ದಾರೆ. ಆಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಅವರು ಸಹ ಮಾತನಾಡಿದ್ದು, ಈ ಪಾರ್ಕಿಂಗ್ ನಿಯಮವನ್ನ ಈಗಲೇ ನಿಷೇಧ ಮಾಡಿ ಎಂದು ಹೇಳುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...