ಯುವತಿಯರೇ ಲಿವ್ ಇನ್ ರಿಲೇಶನ್ ಶಿಪ್ ಬೆಳೆಸುವ ಮುನ್ನ ಈ ಸ್ಟೋರಿ ನೋಡಿ; ಲಿವ್ ಇನ್ ನಲ್ಲಿದ್ದ ಸಂಗಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ; ವಿಡಿಯೋ ವೈರಲ್

ಯುವತಿಯರೇ ಲಿವ್ ಇನ್ ರಿಲೇಶನ್ ಶಿಪ್ ಬೆಳೆಸುವ ಮುನ್ನ ಈ  ಸ್ಟೋರಿ  ನೋಡಿ; ಲಿವ್ ಇನ್ ನಲ್ಲಿದ್ದ ಸಂಗಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ; ವಿಡಿಯೋ ವೈರಲ್

ಈಗ ಕಾಲ ತುಂಬಾ ಬದಲಾಗಿದೆ . ಹಿಂದೆಲ್ಲ ಹೆಣ್ಣು ಮಕ್ಕಳು ದೊಡ್ಡವರಾದ ತಕ್ಷಣ ಅಂದರೆ ೧೭ ಅಥವಾ  ೧೮ ವರ್ಷಕ್ಕೆಲ್ಲ ಮದುವೆ ಮಾಡಿ ಕಲಿಸುತ್ತಿದ್ದರು . ಆದರೆ ಈಗ ಯುವತಿಯರು ತಮ್ಮ ಓದು ಮುಗಿದು ಕೆಲಸಕ್ಕೆ ಸೇರಿ ನಂತರ ತಮಗೆ ಇಷ್ಟ ಇರುವರ ಜೊತೆ ಮದುವೆ ಮಾಡಿ ಕೊಳ್ಳದೆ ಹಾಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುತ್ತಾರೆ . ನಂತರ ಸ್ವಲ್ಪ ದಿವಸ ಕಳೆದ ನಂತರ ಅವರಿಗೆ ಇಷ್ಟ ಆಗಲಿಲ್ಲ ಅಂದರೆ ಅದನ್ನು ಬ್ರೇಕ್ ಅಪ್ ಮಾಡಿ ಕೊಳ್ಳುತ್ತಾರೆ . ಆದರೆ ಅದು ಅವರ ಜೀವನಕ್ಕೆ ಮುಳುವಾಗುತ್ತೆ ಎಂದು ಅವರಿಗೆ ಗೊತ್ತಿರುವುದಿಲ್ಲ
 ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಈ ಯುವತಿಯ ಕಥೆ ಏನಾಗಿದೆ ನೋಡಣ ಬನ್ನಿ .

ಈ ಘಟನೆಯು ಕಳೆದ ಬುಧವಾರ ರಾತ್ರಿ ಬೆಳಕಿಗೆ ಬಂದಿದೆ. ಹಂತಕ ವ್ಯಕ್ತಿಯನ್ನು ಮನೋಜ್ ಸಾನೆ ಎಂದು ಗುರುತಿಸಲಾಗಿದೆ. ಇನ್ನು ಈ ಹಂತಕ 56 ವರ್ಷದವನಾಗಿದ್ದು ಅವನು ಸಾಯಿಸಿದ ಸರಸ್ವತಿ  36 ವರ್ಷದ ಮಹಿಳೆ ಆಗಿದ್ದಾಳೆ. ದೆಹಲಿಯ ಶ್ರದ್ಧಾ ವಾಕರ್ ಹತ್ಯೆಗಿಂತಲೂ ಅತೀ ಕ್ರೋರವಾಗಿ ನಡೆದ ಘಟನೆ ಇದಾಗಿದೆ. ಇಬ್ಬರು ಕೂಡಿಯೇ ಸುಮಾರು ಮೂರು ವರ್ಷಗಳಿಂದ ಮುಂಬೈನ್ ಮೀರಾ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ ವೊಂದರ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.   

ಕಳೆದ ಜೂನ್ 04 ರಂದು ಇಬ್ಬರ ಮಧ್ಯೆ ಜಗಳ ಉಂಟಾಗಿದೆ. ಈ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಂದ ಬಳಿಕ ಮರ ಕಡಿಯುವ ಯಂತ್ರದ ಸಹಾಯದಿಂದ ಮೃತ ಸಂಗಾತಿಯ ದೇಹವನ್ನು 20 ತುಂಡುಗಳನ್ನಾಗಿ ಮಾಡಿದ್ದಲ್ಲದೇ ಅದನ್ನು ಕುಕ್ಕರ್‌ನಲ್ಲಿ ಬೇಯಿಸಿ ಮೂಲಕ ವಿಕೃತಿ ಮೆರೆದಿದ್ದಾನೆ. ಬೇಯಿಸಿದ ತುಂಡುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿಟ್ಟು ವಿಲೇವಾರಿ ಮಾಡುವ ಉದ್ದೇಶ ಆತ ಹೊಂದಿದ್ದ. ಅಷ್ಟರಲ್ಲಾಗಲೇ ಕೊಳೆದ ಸ್ಥಿತಿಯಲ್ಲಿದ ಮೃತ ದೇಹದ ದುರ್ವಾಸನೆ ಲಿವ್ ಇನ್ ಜೋಡಿಗಳಿದ್ದ ಫ್ಲಾಟ್ ಸುತ್ತಮುತ್ತಲಿನ ಮನೆಗಳಿಗೂ ಬರಲಾರಂಭಿಸಿದೆ.  ( video credit : third eye )

ಆಗ ಅಕ್ಕ ಪಕ್ಕದ ಮನೆಯವರು ಎಚ್ಚೆತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ನೋಡಿದ್ದಾರೆ. ಮೂರು ಬಕೆಟ್‌ಗಳಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇದೀಗ ಹಂತಕನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. . ಈ ಘಟನೆ ಕೇಳಿದ ಮೇಲಾದರೂ ಯುವತಿಯರು ಎಚ್ಚತ್ತು ಕೊಳ್ಳುವುದು ಒಳ್ಳೇದು ನೀವೇನಂತೀರಾ 
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.