ಖ್ಯಾತ ಮಾಜಿ ಕ್ರಿಕೆಟಿಗ ನಿಧನ..! ಸಂತಾಪ ಸೂಚಿಸಿದ ಕ್ರಿಕೆಟ್ ಗಣ್ಯರು..!

By Infoflick Correspondent

Updated:Saturday, April 24, 2021, 21:06[IST]

ಖ್ಯಾತ ಮಾಜಿ ಕ್ರಿಕೆಟಿಗ ನಿಧನ..! ಸಂತಾಪ ಸೂಚಿಸಿದ ಕ್ರಿಕೆಟ್ ಗಣ್ಯರು..!

ಹೌದು ಈಗ ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ ಹೈದ್ರಾಬಾದ್ ನ ಮಾಜಿ ವೇಗಿ ಅಶ್ವಿನ್ ಯಾದವ್ ಅವರು, ಶನಿವಾರ ಹೃದಯಾಘಾತದಿಂದ  ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೌದು ವೇಗಿ ಅಶ್ವಿನ್ ಅವರಿಗೆ 33 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗುತ್ತಿದೆ. ಹಾಗೆ ಅಶ್ವಿನ್ ಯಾದವ್ ಅವರಿಗೆ ಈಗಾಗ್ಲೇ ಮದುವೆಯಾಗಿದ್ದು, ಮೂವರು ಮಕ್ಕಳನ್ನು ಸಹ ಹೊಂದಿದ್ದರು. ಇದೀಗ ಹೆಂಡತಿ ಮತ್ತು ಮೂವರು ಮಕ್ಕಳನ್ನ ಅಗಲಿದ್ದಾರೆ..

ಅಶ್ವಿನ್ ಯಾದವ್ ಅವರು, 14 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 2007ರಲ್ಲಿ  ಪಂಜಾಬ್ ವಿರುದ್ಧದ ಪಂದ್ಯವನ್ನ ಮೊಹಾಲಿಯಲಿ ಆಡಿದ್ದು, ಈ ಪಂದ್ಯದ ಮೂಲಕ ಚೊಚ್ಚಲ ರಣಜಿ ಟ್ರೋಪಿಯಲ್ಲಿ ಒಟ್ಟು 34 ವಿಕೆಟ್ ಅನ್ನ ಪಡೆದುಕೊಂಡಿದ್ದರು.

2008-09 ಇಶ್ವಿಯಲ್ಲಿ ನಡೆದ ದೆಹಲಿ ವಿರುದ್ದದ ಪಂದ್ಯದಲ್ಲಿ ಉಪ್ಪಾಳ್ ಕ್ರೀಡಾಂಗಣದಲ್ಲಿ ಆಡಿದ್ದು, ಈ ಪಂದ್ಯದಲ್ಲಿ ಆರು ವಿಕೆಟ್ ಗಳನ್ನು ಪಡೆದು 52 ರನ್ ನೀಡಿದ್ದರು. ಹಾಗೆ ಮುಂಬೈ ವಿರುದ್ಧ 2009 ರಲ್ಲಿ ಅಶ್ವಿನ್ ಅವರು ಕೊನೆಯ ಪಂದ್ಯ ಆಡಿದ್ದು, ಇದೆ ಅವರ  ಕೊನೆ ರಣಜಿ ಟ್ರೋಫಿ ಪಂದ್ಯವಾಗಿತ್ತು. 

ಹಾಗೇನೇ ಜೊತೆಗೆ ಎಸ್ ಬಿಐ ಹೈದರಬಾದ್ ಮತ್ತು ಸ್ಥಳೀಯ ಲೀಗ್ ನಲ್ಲಿ ಅಶ್ವಿನ್ ಅವರು ಎಸ್ ಬಿಐ ಪರವಾಗಿ ಪಂದ್ಯಗಳಲ್ಲಿ ಆಡುವುದನ್ನ ಮುಂದುವರೆಸುತ್ತ ಹೋಗಿದ್ದರು. ಇದೀಗ ಅಶ್ವಿನ್ ಯಾದವ್ ಅವರು ನಿಧಾನರಾಗಿದ್ದು, ಇವರ ನಿಧನಕ್ಕೆ ಭಾರತ ದೇಶದ ಟೀಮ್ ಫೀಲ್ಡಿಂಗ್ ಕೋಚ್ ಆಗಿರುವ ಆರ್. ಶ್ರೀಧರ್ ಸಹ ಸಂತಾಪ ಸೂಚಿಸಿದ್ದಾರೆ....