ಅವಾಚ್ಯ ಪದ ಬಳಸಿದ ಆರ್ ಸಿಬಿ ಆರಂಭಿಕ..! ಒಂದು ಪಂದ್ಯದಿಂದ ಹೊರಗುಳಿಯುತ್ತಾರ ಫಿಂಚ್.?

Updated: Thursday, October 15, 2020, 20:53 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, ಮೊನ್ನೆಯಷ್ಟೇ ಆರ್ಸಿಬಿ ಕೆಕೆಆರ್ ವಿರುದ್ಧ ಮ್ಯಾಚ್ ಆಡಿದ್ದು ಭರ್ಜರಿ ಜಯಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಒಂದು ಒಳ್ಳೆ ಸಂತಸದ ಕ್ಷಣ ನೀಡಿದರು. ಇದೇ ಪಂದ್ಯದಲ್ಲಿ ಏಲಿಯನ್ ಎಬಿಡಿ, ಕ್ರೀಡಾಂಗಣದಲ್ಲಿ ಸಿಕ್ಸ್ ಫೋರ್ ಗಳ ಸುರಿಮಳೆಯನ್ನೇ ಸುರಿಸಿದರು, ಮತ್ತು ಈ ಪಂದ್ಯದಲ್ಲಿ ಎಬಿಡಿ ಮಿಂಚಿದ್ದು ಬಿಟ್ಟರೆ, ತಕ್ಕ ಮಟ್ಟಿಗೆ ಮಿಂಚಿದ್ದು ನಮ್ಮ ಓಪನರ್ ಪಿಂಚ್ ಅವರು.  

Advertisement

ಹೌದು ಕಲ್ಕತ್ತದ ವಿರುದ್ಧ 82 ರನ್ ಗಳ ಭರ್ಜರಿ ಜಯಗಳಿಸಿದ ನಂತರ, ಆರ್ಸಿಬಿ ಟೀಮ್  ಓಪನರ್ ಪಿಂಚ್ ಈ ಪಂದ್ಯದಲ್ಲಿ ಅವಾಚ್ಯ ಪದ ಬಳಸಿದ್ದಾರೆ ಎಂಬುದಾಗಿ ಇದೀಗ ಬೆಳಕಿಗೆ ಬಂದಿದೆ. ಹೌದು ಕೆಕೆಆರ್ ನ ಆಟಗಾರ ರಸ್ಸೆಲ್ ಅವರು ಆರನೇ ಓವರ್'ನಲ್ಲಿ ನಾಲ್ಕನೇ ಬಾಲ್ ಎಸೆದ ಸಮಯದಲ್ಲಿ ತುಂಬಾ ಸ್ಲೋ ಆಗಿ ಬಂದು, ಆ ಬಾಲನ್ನು ಪಿಂಚ್ ಎದುರಿಸುವಲ್ಲಿ ವಿಫಲವಾಗುವಂತೆ ಮಾಡಿದ್ದು, ತದನಂತರ ಓ ಯು ಬಾಸ್ಟರ್ಡ್ ಎಂದು ಪಿಂಚ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿರುವುದಾಗಿ ವಿಕೆಟ್ ಮೈಕ್ ಮೂಲಕ ಸ್ಪಷ್ಟವಾಗಿ ಕೇಳಿಬಂದಿದೆಯಂತೆ.   

Advertisement

ಇದೇ ವಿಚಾರವನ್ನು ಕಮೆಂಟೇಟರ್ ಗಳು ಚರ್ಚಿಸುತ್ತಿದ್ದು, ಒಂದು ವೇಳೆ ಕೆಕೆಆರ್ ಟೀಮ್ ನವರು ರೆಫ್ರಿಗೆ ದೂರು ನೀಡಿದಲ್ಲಿ, ಆರ್ಸಿಬಿ ಆರಂಭಿಕ ಬ್ಯಾಟ್ಸ್ಮನ್ ಪಿಂಚ್ ಅವರಿಗೆ ದಂಡ ವಿಧಿಸಲಾಗುತ್ತದೆ,ಅಥವಾ ಒಂದು ಮ್ಯಾಚ್ ನಿಂದ ನಿಷೇಧ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಕೆಕೆಆರ್ ಟೀಮ್ ನವರು ಪಿಂಚ್ ಆಡಿದ ಮಾತನ್ನು ಹತಾಶೆಯ ನುಡಿ ಎಂಬುದಾಗಿ ಪರಿಗಣಿಸಿದರೆ ಫಿಂಚ್ ಇದರಿಂದ ಪಾರಾಗಲಿದ್ದಾರೆ.  

Advertisement

ಏನೇ ಇರಲಿ ಮೈದಾನದಲ್ಲಿ ಇಂತಹ ಭಾವೋದ್ವೇಗ ನುಡಿಗಳನ್ನು ಆಡುವ ಮುಂಚೆ, ಸ್ವಲ್ಪ ನಮ್ಮ ಮಾತಿನ ಮೇಲೆ ಗಮನ ಇಟ್ಟುಕೊಂಡರೆ,ತುಂಬಾ ಒಳ್ಳೆಯದು,ಜೊತೆಗೆ ಮೊನ್ನೆ ಅಷ್ಟೇ ರಾಹುಲ್ ಕೂಡ ಈ ತಪ್ಪು ಮಾಡಿದ್ದು,ಒಬ್ಬರನ್ನು ನೋಡಿ ಒಬ್ಬರು ತಿದ್ದಿಕೊಳ್ಳಬೇಕು. ಮೇಲಿನ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ. ಜೊತೆಗೆ ಶೇರ್ ಮಾಡಿ ಧನ್ಯವಾದಗಳು...