ಕ್ರಿಕೆಟ್ ಆಟಗಾರ್ತಿ ವೇಧಾ ಕೃಷ್ಣಮೂರ್ತಿಯ ತಾಯಿ ಕೋವಿಡ್'ಗೆ ಬಲಿ..! ಕಣ್ಣೀರಿಟ್ಟ ಮಗಳು

By Infoflick Correspondent

Updated:Saturday, April 24, 2021, 18:57[IST]

ಕ್ರಿಕೆಟ್ ಆಟಗಾರ್ತಿ ವೇಧಾ ಕೃಷ್ಣಮೂರ್ತಿಯ ತಾಯಿ ಕೋವಿಡ್'ಗೆ ಬಲಿ..! ಕಣ್ಣೀರಿಟ್ಟ ಮಗಳು

ಹೌದು ಕರ್ನಾಟಕದ ಹುಡುಗಿ ಭಾರತ ದೇಶದ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ತಾಯಿ ಚೆಲುವಾಂಬ ಅವರು ಕರೋನವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು  ಮಾಧ್ಯಮ ಮೂಲಕ ತಿಳಿದುಬಂದಿದೆ. ಹೌದು ವೇದ ಕೃಷ್ಣಮೂರ್ತಿ ತಾಯಿ ಚೆಲುವಾಂಬ ಅವರಿಗೆ ಇತ್ತೀಚೆಗೆ ಜ್ವರ ಕಾಣಿಸಿಕೊಂಡಿದ್ದು ಎಪ್ರಿಲ್ ಇಪ್ಪತ್ತಕ್ಕೆ ಕೊರನ ಟೆಸ್ಟ್ ಮಾಡಿಸಲಾಗಿತ್ತು. ಆ ಸಂದರ್ಭದಲ್ಲಿಯೇ ಇವರಿಗೆ ಕೊರೋನಾ ಇರುವುದಾಗಿ ದೃಢಪಟ್ಟಿತ್ತು. 

ಹೌದು ಚೆಲುವಾಂಬ ಅವರಿಗೆ ಈಗ 67 ವರ್ಷವಾಗಿದ್ದು, ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಕರೋನ ಇರುವುದು ಧೃಡಪಟ್ಟ ಮೇಲೆ ಮನೆಯಲ್ಲಿಯೇ ಚಿಕಿತ್ಸೆಯನ್ನ ವೇಧಾ ತಾಯಿಯವರು ಪಡೆದುಕೊಳ್ಳುತ್ತಿದ್ರು ಆದ್ರೆ ಮನೆಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣಕ್ಕೆ ಶುಕ್ರವಾರ ಚಿಕಿತ್ಸೆಗೆ ಅವರನ್ನ ದಾಖಲು ಮಾಡಲಾಗಿದೆ. ಆದ್ರೆ ಚೆಲುವಾಂಬ ಅವರಿಗೆ ಉಸಿರಾಟದ ತೊಂದರೆ ಹೆಚ್ಚಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕೇಳಿಬಂದಿದ್ದು, ಮಾಧ್ಯಮ ಒಂದರ ಮೂಲಕ ವರದಿಯಾಗಿದೆ. 

ಹೌದು ಇತ್ತೀಚಿಗಷ್ಟೇ ಜನವರಿ 12ಕ್ಕೆ ಚೆಲುವಾಂಬ ಅವರು ತಮ್ಮ ಮಗಳ ಹಾಗೂ ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, 67 ವರ್ಷಕ್ಕೆ ಕಾಲಿಟ್ಟಿದ್ದರು ಎನ್ನಲಾಗಿದೆ. ಆದರೆ ಇದೀಗ ಕರೋನವೈರಸ್ ನಿಂದ ಸಾವನ್ನಪ್ಪಿದ್ದಾರೆ. ಬಳಿಕ ಮೃತದೇಹವನ್ನು ತಮಗೆ ಒಪ್ಪಿಸಲು ವೇದ ಕೃಷ್ಣಮೂರ್ತಿ ಹಾಗೂ ಅವರ ತಂದೆ ಕೇಳಿದಾಗ, ತಾಲೂಕು ಆಡಳಿತದವರು ಕೊರೊನಾದಿಂದ ಸಾವನ್ನಪ್ಪಿರುವ ಕಾರಣಕ್ಕೆ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಆಗ ವೇಧಾ ಕುಟುಂಬ ತೋರಿಸುವ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ತಾಲೂಕು  ಆಡಳಿತ ಅವರು ಪ್ರತಿಕ್ರಿಯೆ ನೀಡಿದ್ದಾರೆ.