ಇಂದಿನ ಐಪಿಎಲ್ 2021ಆಕ್ಷನ್ ನಲ್ಲಿ 2 ಕೋಟಿ ಬೇಸ್ ಪ್ರೈಸ್ ಫಿಕ್ಸ್ ಮಾಡಿಕೊಂಡ ಆಟಗಾರರು..! ಯಾರು ಗೊತ್ತಾ ವಿಡಿಯೋ ನೋಡಿ

Updated: Thursday, February 18, 2021, 11:47 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ವರ್ಷ ಕರೊನ ಇದ್ದ ಕಾರಣಕ್ಕಾಗಿ ದುಬೈನಲ್ಲಿ ಐಪಿಎಲ್ ಆಟ ನಡೆಸಲಾಯಿತು. ಮತ್ತು ಮುಂಬೈ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಈ ಬಾರಿ ಹದಿನಾಲ್ಕನೆ ಆವೃತ್ತಿಯ ಐಪಿಎಲ್ ಪ್ರಾರಂಭವಾಗಲಿದ್ದು, ಇದೇ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದೆ. ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಈಗಾಗಲೇ ಹೆಚ್ಚಿನ ಮಟ್ಟದಲ್ಲಿ ಸುದ್ದಿಯಾಗಿದ್ದು, ಯಾವಾಗ ಈ ವರ್ಷದ ಐಪಿಎಲ್ ಆರಂಭವಾಗುತ್ತದೆ ಎಂದು ಸಾಕಷ್ಟು ಕ್ರಿಕೆಟ್ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. 

ಇಂದು ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಎರಡು ಕೋಟಿ ಹಣವನ್ನು ಬೇಸ್ ಪ್ರೈಸ್ ಆಗಿ ಫಿಕ್ಸ್ ಮಾಡಿಕೊಂಡಿರುವ ಆಟಗಾರರ ಹೆಸರಿನ ಪಟ್ಟಿ ಇದೀಗ ಹೊರಬಿದ್ದಿದೆ. ಮತ್ತು ಚುರುಕಿನ ಐಪಿಎಲ್ ಈ ಬಾರಿ ಸಾಕಷ್ಟು ನಿರೀಕ್ಷೆಯನ್ನು ಸಹ ಮೂಡಿಸಿದೆ. ಈಗಾಗಲೇ ಆಯಾ ಫ್ರಾಂಚೈಸಿಗಳು ಯಾವ ಯಾವ ಆಟಗಾರರನ್ನು ಖರೀದಿ ಮಾಡಬೇಕೆಂದು ಸನ್ನದ್ಧವಾಗಿ ಎಲ್ಲಾ ಸಿದ್ಧತೆಯನ್ನು ನಡೆಸಿಕೊಂಡೇ ಇಂದು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 11 ಜನರ ಪಟ್ಟಿ ಹರಾಜಿನಲ್ಲಿ ಎರಡು ಕೋಟಿ ಬೇಸ್ ಪ್ರೈಸ್ ಹಣ ಫಿಕ್ಸ್ ಆಗಿದ್ದು ಆಟಗಾರರ ಹೆಸರು ಹೀಗಿವೆ ನೋಡಿ.  

ಸ್ಟೀವನ್ ಸ್ಮಿತ್, ಮ್ಯಾಕ್ಸ್ವೆಲ್, ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಶಕಿಬ್ ಅಲ್ ಹಸನ್, ಮೊಯಿನ್ ಅಲಿ, ಜಾಸನ್ ರಾಯ್, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕ್ ವುಡ್, ಹಾಗೂ ಪ್ಲುನ್ಕೇಟ್, ಎಂದು ತಿಳಿದುಬಂದಿದೆ. ಹೌದು ಯಾವ ಆಟಗಾರ ಯಾವ ತಂಡಕ್ಕೆ ಸೇರಬೇಕು ಎಂದು ನಿಮ್ಮ ಅಭಿಪ್ರಾಯ ತಿಳಿಸಿ, ಈ ಮಾಹಿತಿಯನ್ನ ತಪ್ಪದೆ ಶೇರ್ ಮಾಡಿ ಧನ್ಯವಾದಗಳು...