ಆರ್‌ಸಿಬಿ ತಂಡಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಡೇವಿಡ್‌ ವಾರ್ನರ್‌!

Updated: Monday, September 21, 2020, 17:54 [IST]

ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿ ಬಳಿಕ ಇದೀಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಲು ಮುಂದಾಗಿರುವ ಆಸ್ಟ್ರೇಲಿಯಾದ ಸ್ಟಾರ್‌ ಓಪನರ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆಡಲು ಬಹಳ ಕಾತುರದಿಂದ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.   

Advertisement

ಸೆಪ್ಟೆಂಬರ್‌ 21ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಆರ್‌ಸಿಬಿ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯದ ಬಗ್ಗೆ ವಾರ್ನರ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ."ಖಂಡಿತವಾಗಿಯೂ ಇದು ಅತ್ಯಂತ ಕಠಿಣ ಪಂದ್ಯ ಆಗಿರುತ್ತದೆ. ಅದರೆ, ನಮ್ಮ ತಂಡ ಸಕಲ ಸಿದ್ಧತೆ ಕೈಗೊಂಡಿದ್ದು ಟೂರ್ನಿಯನ್ನು ಆಡಲು ಕಾತುರದಿಂದ ಎದುರು ನೋಡುತ್ತಿದ್ದೇವೆ," ಎಂದು ಸ್ಫೋಟಕ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ   

Advertisement

"ಬಯೋ ಬಬಲ್‌ ಜೀವನ ನಿಜಕ್ಕೂ ಸವಾಲಿನ ಕೆಲಸ. ನಿಯಮಗಳು ಕಟ್ಟುನಿಟ್ಟಾಗಿರುವ ಕಾರಣ ಕುಟುಂಬದವರೊಟ್ಟಿಗೆ ಇರವುದು ಸಾಧ್ಯವಾಗುವುದಿಲ್ಲ. ಆದರೆ, ಕೊರೊನಾ ವೈರಸ್‌ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲೂ ಬಿಸಿಸಿಐ ಟೂರ್ನಿ ಆಯೋಜಿಸುವಲ್ಲಿ ಅದ್ಭುತ ಕೆಲಸ ಮಾಡಿದೆ," ಎಂದಿದ್ದಾರೆ.
"ಆದರೂ, ಮುಂದಿನ ಎರಡು ತಿಂಗಳು ಬಹಳ ಕಠಿಣವಾಗಿರಲಿದೆ. ಆಸ್ಟ್ರೇಲಿಯಾದಲ್ಲಿ ನಾವು ಹೊರಹೋಗಿ ಗಾಲ್ಫ್‌ ಅಥವಾ ಡ್ರೈವಿಂಗ್‌ ಏನಾದರೂ ಮಾಡುತ್ತಿದ್ದೆವು. ಇಲ್ಲಿಯೂ ನಮ್ಮ ಮನಸ್ಥಿತಿ ಬದಲಾಯಿಸಲು ಏನಾದರೂ ಬೇರೆ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇನೆ. ಆದರೆ ಮೊದಲಿಗೆ ಟೂರ್ನಿ ಅತ್ಯಂತ ಯಶಸ್ವಿಯುತವಾಗಿ ನಡೆಯಬೇಕಿದೆ," ಎಂದು ಹೇಳಿದ್ದಾರೆ.