ಬ್ರೇಕಿಂಗ್ ನ್ಯೂಸ್; ಕೊರೊನಾಗೆ ಬಲಿಯಾದ ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರ..! ಕಣ್ಣೀರಿಟ್ಟ ಇಡೀ ತಂಡ

By Infoflick Correspondent

Updated:Monday, May 10, 2021, 11:13[IST]

ಬ್ರೇಕಿಂಗ್ ನ್ಯೂಸ್; ಕೊರೊನಾಗೆ ಬಲಿಯಾದ ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರ..! ಕಣ್ಣೀರಿಟ್ಟ ಇಡೀ ತಂಡ

ಹೌದು ರಾಜಸ್ಥಾನದ ಪ್ರತಿಭಾವಂತ ಸ್ಪಿನ್ನರ್ ವಿವೇಕ್ ಯಾದವ್ (36) ಅವರು ಮೊನ್ನೆ ಬುಧವಾರ ಜಗತ್ತಿಗೆ ವಿದಾಯ ಹೇಳಿದರು. ವಿವೇಕ್ ಅವರು ಇತ್ತೀಚೆಗೆ  ಪಿತ್ತಜನಕಾಂಗದ ಕ್ಯಾನ್ಸರ್ ಗೆ ಒಳಗಾಗಿದ್ದು ಈ ವಿರುದ್ಧ ಹೋರಾಡುತ್ತಿದ್ದರು. ಜೊತೆಗೆ ಈ ಕರೋನಾ ಸೋಂಕಿಗೆ ಸಹ ಒಳಗಾಗಿದ್ದರು ಅನ್ನೋ ವಿಚಾರ ಕೇಳಿ ಬಂದವು. ಈ ಎಲ್ಲಾ ಕಾರಣದಿಂದಾಗಿಯೇ ಜೈಪುರದಲ್ಲಿ ವಿವೇಕ್ ಕೊನೆಯುಸಿರೆಳೆದರು ಎಂದು ಮಾಧ್ಯಮವೊಂದರ ಮೂಲಕ ಕೇಳಿಬಂದಿದೆ. ಭಾರತೀಯ ತಂಡದ ಮಾಜಿ ಖ್ಯಾತ ಕ್ರಿಕೆಟ್ ಆಟಗಾರ ಹಾಗೂ ನಿರೂಪಕ ಆಕಾಶ್ ಚೋಪ್ರಾ ಸಹ ಈ ವಿವೇಕ್ ಅವರ ಸಾವಿನ ಸುದ್ದಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ವಿವೇಕ್ ಯಾದವ್ ಅವರ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ, 2008 ರಲ್ಲಿ ವಿವೇಕ್ ಅವ್ರು ಪ್ರಥಮ ದರ್ಜೆ ಆಟಕ್ಕೆ ರಾಜಸ್ಥಾನಕ್ಕೆ ಪಾದಾರ್ಪಣೆ ಮಾಡಿದ್ದರು. 2010-11ರ ಸಾಲಿನ ರಣಜಿ ಟ್ರೋಫಿ ವಶಪಡಿಸಿಕೊಂಡ ತಂಡದಲ್ಲಿ ಈ ವಿವೇಕ್ ಸಹ ಇದ್ದರು. ಹೌದು ಫೈನಲ್ ಪಂದ್ಯದಲ್ಲಿ ಬರೋಡಾ ತಂಡವನ್ನು ಸೋಲಿಸಿ, ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ಮೂಲಕ ವಿವೇಕ್ ಅವ್ರು ನಾಲ್ಕು ವಿಕೆಟ್‌ಗಳನ್ನು ಸಹ ಪಡೆದುಕೊಂಡಿದ್ದರು.  

ವಿವೇಕ್ ಅವರ ಪ್ರದರ್ಶನ ನೋಡಿದ ಐಪಿಎಲ್ ದೆಹಲಿ  ಡೇರ್‌ಡೆವಿಲ್ಸ್ ತಂಡವು 2012 ರಲ್ಲಿ ಇವರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡರು. ಆದ್ರೆ ತುಂಬಾನೇ ಹೆಚ್ಚು ಕಾಂಪಿಟೇಶನ್ ಇದ್ದ ಕಾರಣಕ್ಕೋ ಏನೋ ಒಂದು ಪಂದ್ಯದಲ್ಲಿಯೂ ಸಹ ಇವರಿಗೆ ಐಪಿಎಲ್ ಅಲ್ಲಿ ಆಡಲು ಅವರಿಗೆ ಅವಕಾಶ ಸಿಗಲಿಲ್ಲ...

ಹೌದು ಇತ್ತಿಚೆಗೆ ವಿವೇಕ್ ಯಾದವ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ. ಹಾಗೆ ಕೀಮೋಥೆರಪಿಗಾಗಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಸಹ ಹೋಗಿದ್ದರು ಎಂದು ಕೇಳಿ ಬಂದಿದೆ. ನಂತರ ವಿವೇಕ್ ಅವರಿಗೆ ಅಲ್ಲಿ ಪರೀಕ್ಷೆ  ಮಾಡಿಸಿದಾಗ ಈ ಕೊರೊನ ಪಾಸಿಟಿವ್ ಇದೆ ಎಂದು ಕಂಡುಬಂದಿದೆ. ಈ ಬಳಿಕ ವಿವೇಕ್ ಯಾದವ್ ಅವರ ಸ್ಥಿತಿ ತುಂಬಾನೇ ಹದಗೆಟ್ಟಿತು ಅದಕ್ಕೆ ಸಾವನ್ನಪ್ಪಿದ್ದಾರೆ ಎಂದು ಕೇಳಲಾಗಿದೆ. ಹಾಗೆ ಕ್ರಿಕೆಟಿಗ ಯಾದವ್ ಅವರ ನಿಧನದ ಸುದ್ದಿ ಕೇಳಿ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ದಿಗ್ಗಜರು ಸಹ ನೊಂದುಕೊಂಡಿದ್ದಾರೆ.  ಹಾಗು ಇನ್ನು ಅನೇಕರು ಪೋಸ್ಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.