MS Dhoni : ಬ್ಯಾಟ್ಯಿಂಗ್ ಗೆ ತೆರಳುವ ಮುಂಚೆ ಬ್ಯಾಟ್ ತಿನ್ನುತ್ತಾರಾ ಧೋನಿ ?

By Infoflick Correspondent

Updated:Tuesday, May 10, 2022, 22:00[IST]

MS Dhoni : ಬ್ಯಾಟ್ಯಿಂಗ್ ಗೆ ತೆರಳುವ ಮುಂಚೆ ಬ್ಯಾಟ್ ತಿನ್ನುತ್ತಾರಾ ಧೋನಿ ?

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಕೊನೆಗೂ ಗೆಲುವಿನ ದಾರಿಗೆ ಮರಳಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಜಯ ಸಾಧಿಸಿತು. ಈ ಪಂದ್ಯದ ವೇಳೆಯಲ್ಲಿ ಒಂದು ದೃಶ್ಯದ ವೀಡಿಯೋ ಭಾರೀ ವೈರಲ್ ಆಗಿದೆ. 

ಬ್ಯಾಟಿಂಗ್ ಬರೋಕು ಮುಂಚೆ ಡ್ರೆಸ್ಸಿಂಗ್ ರೂಂನಲ್ಲಿ ಬ್ಯಾಟ್ ಹಿಡಿದು ಕುಳಿತ್ತಿದ್ದ ಧೋನಿ, ತನ್ನ ಬ್ಯಾಟ್‌ ಅನ್ನು ಕಚ್ಚಿರುವ ಫೋಟೋ ಸೆರೆಯಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಮಾಹಿ ಹೀಗೆ ಏಕೆ ಮಾಡಿರಬಹುದು ಎಂಬ ಚರ್ಚೆ 

ಇದಕ್ಕೆ ಭಾರತದ ಮಾಜಿ ಅನುಭವಿ ಸ್ಪಿನ್ನರ್ ಉತ್ತರ ನೀಡಿದ್ದಾರೆ. ಮಿಶ್ರಾ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಧೋನಿಯ ಈ ವಿಭಿನ್ನ ಅಭ್ಯಾಸವನ್ನು ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್‌ನಲ್ಲಿ ತಿಳಿಸಿದ್ದಾರೆ. "ಧೋನಿ ಆಗಾಗ ಅವರ ಬ್ಯಾಟ್ ಅನ್ನು ಏಕೆ ಕಚ್ಚುತ್ತಾರೆ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಆದರೆ ಅವರು ತನ್ನ ಬ್ಯಾಟ್ ಸ್ವಚ್ಛವಾಗಿಡಲು ಇಷ್ಟಪಡುವ ಕಾರಣ ಬ್ಯಾಟ್‌ಗೆ ಅಂಟಿಸಿರುವ ಟೇಪ್‌ ಅನ್ನು ನೀಟ್ ಆಗಿ ತೆಗೆದುಹಾಕಲು ಆ ರೀತಿ ಮಾಡುತ್ತಾರೆ. ಎಂದು ನೆಟ್ಟಿಗರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.