ಗಬ್ಬಾ ಟೆಸ್ಟ್ನಲ್ಲಿ ಭಾರತಕ್ಕೆ ಐತಿಹಾಸಿಕ ಜಯ :ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದ ಟೀಮ್ ಇಂಡಿಯಾ
Updated: Tuesday, January 19, 2021, 17:09 [IST]

ಹೌದು ಭಾರತ 32 ವರ್ಷಗಳ ಬಳಿಕ ಆಸ್ಟ್ರೇಲಿಯಾ ದ ಗಬ್ಬಾ ಕ್ರೀಡಾಂಗಣದಲ್ಲಿ ಐತಿಹಾಸಿಕ ಜಯ ಸಾಧಿಸಿದೆ . ಅದು ಸಹ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಯಶಸ್ವಿಯಾಗಿ ಮುನ್ನಡೆಸಿದರು. ಭಾರತ ತಂಡಕ್ಕೆ ಅಬಿನಂದನೆಯ ಸುರಿಮಳೆ ಬರುತ್ತಿದೆ . ಪ್ರಧಾನಿ ನರೇಂದ್ರ ಮೋದಿ ಅವರು ಸಹ ಭಾರತ ತಂಡಕ್ಕೆ ಅಬಿನಂದನೆ ಸಲ್ಲಿಸಿದ್ದಾರೆ .ಕಾಯಂ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಯಶಸ್ವಿಯಾಗಿ ಮುನ್ನಡೆಸಿದರು. ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳಿಂದ ಒಂದು ಡ್ರಾ ಮಾಡಿ ಕೊಂಡು ಮಿಕ್ಕ ಎರಡು ಪಂದ್ಯಗಳನ್ನು ಗೆದ್ದು ಟೆಸ್ಟ್ ಸರಣಿಯನ್ನು ಭಾರತ ವಸ ಪಡಿಸಿ ಕೊಂಡಿದೆ
ತೀಯ ಇನಿಂಗ್ಸ್ನಲ್ಲಿ 97 ಓವರ್ಗಳ ಮುಕ್ತಾಯಕ್ಕೆ ಭಾರತ ತಂಡ, 7 ವಿಕೆಟ್ ಕಳೆದುಕೊಂಡು 329 ರನ್ ಗಳಿಸಿ ಮೂರು ವಿಕೆಟ್ಗಳ ಸ್ಮರಣೀಯ ಜಯ ಸಾಧಿಸಿತು. ಅಲ್ಲದೆ, ಇಲ್ಲಿನ ದಿ ಗಬ್ಬಾ ಅಂಗಳದಲ್ಲಿ 32 ವರ್ಷಗಳ ಬಳಿಕ ಆಸ್ಟ್ರೇಲಿಯಾ ಮೊಟ್ಟ ಮೊದಲ ಬಾರಿ ಸೋಲಿನ ಆಘಾತ ಅನುಭವಿಸಿತು
ಇಲ್ಲಿ ದಿ ಗಬ್ಬಾ ಕ್ರೀಡಾಂಗಣದಲ್ಲಿ ವಿಕೆಟ್ ನಷ್ಟವಿಲ್ಲದೆ 4 ರನ್ನಿಂದ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಮಂಗಳವಾರ ಗೆಲುವು ಸಾಧಿಸಿಲು 324 ರನ್ ಅಗತ್ಯವಿತ್ತು. ಕ್ರೀಸ್ಗೆ ಆಗಮಿಸಿದ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಜೋಡಿ ದೊಡ್ಡ ಜತೆಯಾಟವಾಡಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ ಕೇವಲ 7 ರನ್ ಗಳಿಸಿ ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ಮಯಾಂಕ್ ಅಗರ್ವಾಲ್ ಸ್ಥಾನಕ್ಕೆ ಬಡ್ತಿ ಪಡೆದು ಕ್ರೀಸ್ಗೆ ಬಂದ ರಿಷಭ್ ಪಂತ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್ ಮಾಡಿದರೂ, ನಂತರ ತಮ್ಮ ಇನಿಂಗ್ಸ್ಗೆ ವೇಗವನ್ನು ತುಂಬಿದರು. 138 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 89 ರನ್ ದಾಖಲಿಸಿ, ಭಾರತಕ್ಕೆ ಐತಿಹಾಸಿ ಗೆಲುವು ತಂದುಕೊಟ್ಟರು.
32 ವರ್ಷಗಳಿಂದ ಗಬ್ಬಾ ಕ್ರಿಕೆಟ್ ಅಂಗಳದಲ್ಲಿ ಅಜೇಯವಾಗಿದ್ದ ಕಾಂಗರೂಗಳನ್ನು ಬಗ್ಗು ಬಡಿದು ಐತಿಹಾಸಿಕ ಸರಣಿ ಜಯಿಸಿದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭರ್ಜರಿ ಐದು ಕೋಟಿ ಬೋನಸ್ ಘೋಷಣೆ ಮಾಡಿದೆ. ಗಬ್ಬಾ ಟೆಸ್ಟ್ ಪಂದ್ಯವನ್ನು ಗೆದ್ದ ಕೆಲವೇ ನಿಮಿಷಗಳಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ಟ್ವಿಟ್ಟರ್ ಮೂಲಕ ಈ ಬಹುಮಾನ ಘೋಷಣೆ ಮಾಡಿದ್ದಾರೆ.
ಇದೊಂದು ಅಸಾಧಾರಣ ಗೆಲುವು, ಆಸ್ಟ್ರೇಲಿಯಾಗೆ ತೆರಳಿ ಈ ರೀತಿಯಾಗಿ ಟೆಸ್ಟ್ ಜಯಿಸಿರುವುದು ಗಮನಾರ್ಹ. ಇದು ಭಾರತೀಯ ಕ್ರಿಕೆಟ್ ಇತಿಹಾಸಲ್ಲಿ ಯಾವತ್ತೂ ಅಜರಾಮರವಾಗಿ ಉಳಿಯಲಿದೆ. ಬಿಸಿಸಿಐ ತಂಡಕ್ಕೆ ಐದು ಕೋಟಿ ಬೋನಸ್ ಘೋಷಿಸಿದೆ.