ಈ ಬಾರಿಯ ಐಪಿಎಲ್ ನ, ಅತ್ಯಂತ ಕಿರಿಯ ಅತ್ಯಂತ ಹಿರಿಯ ಆಟಗಾರರು ಯಾರು ಗೊತ್ತೇ..?

Updated: Tuesday, February 16, 2021, 14:59 [IST]

ಹೌದು ಸ್ನೇಹಿತರೆ, ಐಪಿಎಲ್ ಸೀಸನ್ 14 ಕ್ಕೆ ಈಗಾಗ್ಲೇ ಭರ್ಜರಿ ತಯಾರಿಗಳು ನಡೆಯುತ್ತಿವೆ. ಅಲ್ಲದೆ ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಕೂಡ ಶುರುವಾಗಿದೆ. ಇದೇ ಫೆಬ್ರವರಿ 18 ಕ್ಕೆ, ಚೆನ್ನೈನಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿ ಕೇಳಿಬರುತ್ತಿದೆ. ಮತ್ತು ಮಿನಿ ಹರಾಜಿನ ಡೇಟ್ ಹತ್ತಿರವಾಗುತ್ತಿದ್ದಂತೆ ಹೆಚ್ಚು ವಿಚಾರ ಮತ್ತು ಸಾಕಷ್ಟು ಆಟಗಾರರು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ಸಾರಿಯ ಹರಾಜಿನಲ್ಲಿ ಅಭಿಮಾನಿಗಳನ್ನ ಆಕರ್ಷಣೆ ಮಾಡ್ತಿರೋದು, ಅತಿ ಹಿರಿಯ ಮತ್ತು ಅತಿ ಕಿರಿಯ ಕ್ರಿಕೆಟ್ ಆಟಗಾರರು ಯಾರು ಎನ್ನೋದು...

ಇನ್ನು ಮೊದಲನೇದಾಗಿ ನಮ್ಮ ಭಾರತೀಯ ಕ್ರಿಕೆಟ್  ಮಾಜಿ ಸ್ಪಿನ್ನರ್ 'ದಿಲಿಪ್ ದೋಷಿ' ಯವರ ಮಗ 'ನಯನ್ ದೋಷಿ' 2021 ರ ಐಪಿಎಲ್ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ಈ ಬಾರಿಯ ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇವರಿಗೆ ಇದೀಗ 42 ವರ್ಷ ವಯಸ್ಸು, ಮತ್ತು ರಣಜಿಯಲ್ಲಿ ಸೌರಾಷ್ಟ್ರ ಪರವಾಗಿ ಆಡಿದ ನಯನ್ ದೋಷಿಯವರು, ಐಪಿಎಲ್ ತಂಡ ಸೇರುವಲ್ಲಿ ತುಂಬಾ ಉತ್ಸುಕರಾಗಿದ್ದಾರೆ..

ಆದರೆ ನಯನ್ ಅವರು, ಈ ಐಪಿಎಲ್ ತಂಡ ಸೇರಿಕೊಳ್ಳೋದು ಅಷ್ಟು ಸುಲಭವಾಗಿಲ್ಲ, ಯಾಕಂದರೆ 1097  ಆಟಗಾರರು ಅರ್ಜಿಯನ್ನು ಸಲ್ಲಿಸುತ್ತಾರೆ. ಇವರಲ್ಲಿ ಕೇವಲ 200 ರಿಂದ 300 ಆಟಗಾರರಿಗಾಗಿ ಸೆಣಸಾಟ ನಡೆಯುತ್ತದೆ. ಇದರಲ್ಲಿ ಕೇವಲ 50ರಿಂದ 60 ಮಂದಿ ಅಂತಿಮ ಹಂತದ ಹರಾಜಿಗೆ ಲಭ್ಯ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಈವರೆಗೂ 52 ಟಿ20 ಪಂದ್ಯಗಳನ್ನು ದೋಷಿಯವರು ಆಡಿದ್ದು, 68 ವಿಕೆಟ್ ಗಳನ್ನ ಗಳಿಸಿಕೊಂಡಿದ್ದಾರೆ. ಅಲ್ಲದೆ ಈ ಹಿಂದೆ ಆರ್ ಸಿಬಿ ತಂಡದಲ್ಲಿ ನಯನ್ ದೋಷಿ ಇದ್ದರು ಆದ್ರೂ ಆಡೋ ಅವಕಾಶ ಸಿಕ್ಕಿಲ್ಲ..

ಜೊತೆಗೆ ಆಫ್ಘಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹಮದ್ ಲಕನ್ ವಾಲ್, ಈತನೇ ಅತ್ಯಂತ ಕಿರಿಯ ಆಟಗಾರನಾಗಿದ್ದು, ಈ ಬಾರಿಯ ಹರಾಜಿನಲ್ಲಿ ಇದ್ದಾನೆ. ಈತನಿಗೆ ಇದೀಗ ಕೇವಲ 16 ವರ್ಷ. ಈ ಬಾರಿಯ ಹರಾಜಿನ ಕೇಂದ್ರಬಿಂದು ಈತನೇ ಆಗಿದ್ದಾನೆ. ಈ ಆಟಗಾರನನ್ನು ಯಾರು ಕರೆದಿ ಮಾಡುತ್ತಾರೋ ನಾವು ನೀವು ಕಾದು ನೋಡಬೇಕಿದೆ. ಇನ್ನುಳಿದಂತೆ ಸಚಿನ್ ತೆಂಡೂಲ್ಕರ್ ಅವರ ಮಗನಾದ ಅರ್ಜುನ್ ತೆಂಡೂಲ್ಕರ್ ಅವರು 20 ಲಕ್ಷದ ಬೆಸ್ಟ್ ಪ್ರೈಸ್ ನೊಂದಿಗೆ ಹರಾಜಿನ ಕಣಕ್ಕೆ ಇಳಿದಿದ್ದಾರೆ....