ಕೊನೆಗೂ 2021 ರ ಐಪಿಎಲ್ ಡೇಟ್ ಫಿಕ್ಸ್..! ಯಾವಾಗಿಂದ ಶುರು ಗೊತ್ತಾ..?
Updated: Monday, March 8, 2021, 09:12 [IST]

ಹೌದು ಸ್ನೇಹಿತರೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಐಪಿಎಲ್ ಆಟವು ಮತ್ತೆ ಶುರು ಆಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಕೂಡ ಚುಟುಕು ಕ್ರಿಕೆಟ್ ಐಪಿಎಲ್ ಹೆಚ್ಚು ನಿರೀಕ್ಷೆ ಮೂಡಿಸಿದೆ. ಸಾಕಷ್ಟು ಕ್ರಿಕೆಟ್ ಪ್ರೇಮಿಗಳು ಈ ಬಾರಿಯ ಐಪಿಎಲ್ ಯಾವಾಗ ಆರಂಭವಾಗುತ್ತದೆ ಎಂದು ತುದಿಗಾಲಲ್ಲಿ ಎದುರುನೋಡುತ್ತಿದ್ದರು. ನಮ್ಮ ಆರ್ಸಿಬಿ ಅಭಿಮಾನಿಗಳಿಗಂತೂ ಐಪಿಎಲ್ ಕ್ರಿಕೆಟ್ ಆರಂಭವಾದರೇ ಸಾಕು, ಒಂದು ಹಬ್ಬದ ರೀತಿಯಲ್ಲೇ ಸಂಭ್ರಮದ ವಾತಾವರಣ ನಿರ್ಮಾಣವಾಗಿರುತ್ತದೆ 2020 ಕೊರೋನ ಹಿನ್ನೆಲೆಯಲ್ಲಿ ದುಬೈನಲ್ಲಿ 13ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ನಡೆದಿದ್ದು, ಕಳೆದ ವರ್ಷ ಚಾಂಪಿಯನ್ ಪಟ್ಟವನ್ನು ಮುಂಬೈ ಇಂಡಿಯನ್ಸ್ ತಂಡ ತನ್ನದಾಗಿಸಿಕೊಂಡಿತು. ಆದರೆ ಈ ಬಾರಿ 14ನೇ ಸೀಸನ್ ಇಷ್ಟರಲ್ಲೇ ಆರಂಭವಾಗುತ್ತಿದ್ದು, ಐಪಿಎಲ್ ಆಕ್ಷನ್ ಕೂಡ ಮೊನ್ನೆ ನಡೆಯಿತು. ಇದೀಗ ಐಪಿಎಲ್ ಯಾವಾಗಿನಿಂದ ಶುರು ಆಗಲಿದೆ ಎನ್ನುವ ಸುದ್ದಿ ತಿಳಿದುಬಂದಿದೆ.
ಐಪಿಎಲ್ 2021 ಟೂರ್ನಿಗೆ ಆರ್ಸಿಬಿ ತಂಡ ಹೀಗಿದೆ
ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ'ವಿಲಿಯರ್ಸ್, ಯುಜ್ವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆಡಮ್ ಝಾಂಪ, ಜಾಶ್ ಫಿಲಿಪ್, ಶಹಬಾಝ್ ಅಹ್ಮದ್, ಪವನ್ ದೇಶಪಾಂಡೆ, ಕೈಲ್ ಜೇಮಿಸನ್, ಗ್ಲೆನ್ ಮ್ಯಾಕ್ಸ್ವೆಲ್, ಡ್ಯಾನ್ ಕ್ರಿಸ್ಟಿಯನ್, ಸಚಿನ್ ಬೇಬಿ, ರಜತ್ ಪತ್ತಿದಾರ್, ಮೊಹಮ್ಮದ್ ಅಝರುದ್ದೀನ್, ಸುಯಶ್ ಪ್ರಭುದೇಸಾಯಿ, ಕೆಎಸ್ ಭರತ್, ಡೇನಿಯಲ್ ಸ್ಯಾಮ್ಸ್, ಹರ್ಷಲ್ ಪಟೇಲ್.
ಹೌದು ಮುಂದಿನ ತಿಂಗಳು ಏಪ್ರಿಲ್ ಒಂಬತ್ತರಿಂದ ಐಪಿಎಲ್ ಆರಂಭವಾಗುತ್ತಿದ್ದು, ಮೇ 30ಕ್ಕೆ ಫೈನಲ್ ಇರುತ್ತದೆ ಎಂದು ಕೇಳಿಬಂದಿದೆ. ಈ ಖುಷಿ ವಿಷಯ ಕೇಳಿ ಕ್ರಿಕೆಟ್ ಪ್ರೇಮಿಗಳಿಗೆ ಸಂತಸವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಮತ್ತು ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...