ಇಷ್ಟರಲ್ಲೇ ಮುಂದುವರಿಯಲಿದೆಯಂತೆ ಇದೆ ವರ್ಷದ ಐಪಿಎಲ್..! ಯಾವಾಗ ಗೊತ್ತಾ..?

By Infoflick Correspondent

Updated:Thursday, May 6, 2021, 19:43[IST]

ಇಷ್ಟರಲ್ಲೇ ಮುಂದುವರಿಯಲಿದೆಯಂತೆ ಇದೆ ವರ್ಷದ ಐಪಿಎಲ್..! ಯಾವಾಗ ಗೊತ್ತಾ..?

ಹೌದು ಸ್ನೇಹಿತರೆ 14ನೇ ಆವೃತ್ತಿಯ ಐಪಿಎಲ್ ಈ ಬಾರಿ ಒಳ್ಳೆಯ ಶುಭಾರಂಭವೆ ಪಡೆದುಕೊಂಡಿದ್ದವು. ಹಾಗೇನೇ ನಮ್ಮ ಹೆಮ್ಮೆಯ ಕರ್ನಾಟಕದ ಆರ್ಸಿಬಿ ತಂಡ ಈ ವರ್ಷ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿ ಟಾಪ್ ಅಲ್ಲೇ ಇರಲು ಪ್ರತಿ ಮ್ಯಾಚ್ ನಲ್ಲಿಯು ಸೆಣಸಾಟ ನಡೆಸಿ, ಅಭಿಮಾನಿ ವೃಂದಕ್ಕೆ ಒಳ್ಳೆಯ ಮನರಂಜನೆ ನೀಡಿತ್ತು. ಇದರ ನಡುವೆ ಆರ್ಸಿಬಿ ಹಾಗೂ ಕೋಲ್ಕತ್ತಾದ ನಡುವೆ ನಡೆಯಬೇಕಿದ್ದ ಪಂದ್ಯದ ದಿವಸ ಕೊಲ್ಕತ್ತಾ ತಂಡದಲ್ಲಿನ ಇಬ್ಬರು ಕ್ರಿಕೆಟ್ ಆಟಗಾರರು ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಗೆ ಅಂದಿನ ಮ್ಯಾಚನ್ನು ಮುಂದೂಡಲಾಗಿತ್ತು.

ನಂತರ ಸಿಎಸ್ಕೆ ಹಾಗು ಮುಂಬೈ ನಡುವೆ ನಡೆಯಬೇಕಿದ್ದ ಪಂದ್ಯದ ವೇಳೆಗೆ ಈ ವರ್ಷದ ಐಪಿಎಲ್ ಟೂರ್ನಿಯೆ ಕ್ಯಾನ್ಸಲ್ ಆಯಿತು ಎಂಬ ಸುದ್ದಿ ಹರಿದಾಡಿತು. ಹೌದು ಈ ಕರೋನ ಸಮಯಲ್ಲಿ ಈ ವರ್ಷದ ಐಪಿಎಲ್ ಬಾರಿ ಎಂಟರ್ಟೈನ್ಮೆಂಟ್ ನೀಡುತಿತ್ತು, ಆದರೆ ಈ ರೀತಿ ಬಿಸಿಸಿಐ ನಿರ್ಧಾರದಿಂದ ಸಾಕಷ್ಟು ಐಪಿಎಲ್ ಅಭಿಮಾನಿಗಳಿಗೆ ನಿರಾಸೆ ಆಗಿದ್ದಂತೂ ನಿಜ. ಆದರೆ ಇದೀಗ ಬಂದಿರುವ ಸುದ್ದಿ ಪ್ರಕಾರ, ಐಪಿಎಲ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಈಗ ಹೊರ ಬಿದ್ದಿದೆ. 

ಹೌದು ಈ ವಿಚಾರವಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಹೇಳಿದ್ದೇನು ಗೊತ್ತಾ.. ಮುಂದೆ ಓದಿ "ಎಲ್ಲಾ ಫ್ರಾಂಚೈಸಿಗಳು ಕೂಡ ಆಟಗಾರರ ಆ’ರೋಗ್ಯದ ಮೇಲೆ ಗಮನ ಹರಿಸಿದ್ದಾರೆ. ನಾವು ಎಲ್ಲಾ ಫ್ರಾಂಚೈಸಿಗಳ ಜೊತೆ ಮಾತನಾಡಿದ್ದೇವೆ. ಹೆಚ್ಚಿನ ಪ್ರ-ಕರಣಗಳು ಇಲ್ಲ. ಒಂದು ಅಥವಾ ಎರಡು ಫ್ರಾಂಚೈಸಿಗಳ ಮೇಲಷ್ಟೇ ಕರೊ-ನಾ ಪ’ರಿಣಾಮ ಬೀರಿದೆ. ಎಲ್ಲಾ ತಂಡಗಳಿಗೂ ಪರೀಕ್ಷೆಯನ್ನ ನಡೆಸಲಾಗುತ್ತಿದೆ. ಎಲ್ಲಾ ಆಟಗಾರರು ಸುರಕ್ಷಿತವಾಗಿದ್ದಾರೆ. ಪರಿಸ್ಥಿತಿ ಕೆಟ್ಟದಾಗಿಲ್ಲ. ಆದ್ರೆ ಮುಂದಿನ ಭವಿಷ್ಯವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ" ಎಂದು ರಾಜೀವ್ ಶುಕ್ಲ ಅವರು ಈ ವಿಚಾರವಾಗಿ ಮಾಧ್ಯಮದ ಮುಂದೆ ಮಾತಾಡಿದರು..

ಜೊತೆಗೆ ಮಾತು ಮುಂದುವರೆಸಿದ ರಾಜೀವ್ ಶುಕ್ಲ ಅವರು "ನಾನು ಸ್ಪಷ್ಟಪಡಿಸಲು ಇಷ್ಟಪಡುವ ವಿಚಾರ ಏನೆಂದರೆ, ಐಪಿಎಲ್ 2021 ರದ್ದಾಗಿಲ್ಲ. ಬದಲಾಗಿ ಪಂದ್ಯಗಳನ್ನು ಅಮಾನತು ಗೊಳಿಸಲಾಗಿದೆ, ಅಂದರೆ ಮುಂದೂಡಲಾಗಿದೆ ಎಂದು ಅರ್ಥ.. ಮುಂದಿನ ಪಂದ್ಯಗಳು ಇದೆ ವರ್ಷ ನಡೆಯಲಿದೆ. ಪರಿಸ್ಥಿತಿ ಸುಧಾರಿಸಿದ ನಂತರ ಈ ವಿಚಾರದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ." ಎಂದು ರಾಜೀವ್ ಶುಕ್ಲ ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿ ಕೇಳಿ ನಿಜಕ್ಕೂ ಎಲ್ಲಾ ಕ್ರಿಕೆಟ್ ಹಾಗು ಎಲ್ಲಾ ಐಪಿಎಲ್  ಅಭಿಮಾನಿಗಳಿಗೆ ಖುಷಿ ಆಗಿದೆ. ಇಂತಹ ಕೋವಿಡ್ ಕಷ್ಟದ ಸಮಯದಲ್ಲಿ ನಮಗೆ ಐಪಿಎಲ್ ಒಂದೇ ಹೆಚ್ಚು ಮನರಂಜನೆಯನ್ನ ನೀಡೋಕೆ ಸಾಧ್ಯ ಎಂದು ಈ ಬಗ್ಗೆ ಕೆಲವರು ಹೇಳುತ್ತಾರೆ...