ಬ್ಯಾಟಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಈ ಬಾಬರ್ ಅಸಲಿಗೆ ಯಾರು ಗೊತ್ತಾ..? ಈತನ ಲೈಫ್ ಸ್ಟೈಲ್ ಆಸ್ತಿ ಪಾಸ್ತಿ ಎಷ್ಟಿದೆ ನೋಡಿ

By Infoflick Correspondent

Updated:Monday, October 25, 2021, 21:08[IST]

ಬ್ಯಾಟಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಈ ಬಾಬರ್ ಅಸಲಿಗೆ ಯಾರು ಗೊತ್ತಾ..? ಈತನ ಲೈಫ್ ಸ್ಟೈಲ್ ಆಸ್ತಿ ಪಾಸ್ತಿ ಎಷ್ಟಿದೆ ನೋಡಿ

ಹೌದು ಸ್ನೇಹಿತರೆ ಬಾಬರ್ ಅಜಮ್ ಇದೀಗ ಬ್ಯಾಟಿಂಗ್ ವಿಭಾಗದಲ್ಲಿ ವಿಶ್ವದ ನಂಬರ್ ವನ್ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಕಡಿಮೆ ಇಂನಿಂಗ್ಸ್ ನಲ್ಲಿ ಹೆಚ್ಚು ಶತಕ ಬಾರಿಸಿರುವ ಬಾಬರ್ ಅಜಮ್ 84 ಇನಿಂಗ್ಸ್ನಲ್ಲಿ 14 ಸೆಂಚುರಿ ಬಾರಿಸಿದ್ದಾರೆ. ಈಗಾಗಲೇ ಟಿ20ವಿಶ್ವಕಪ್ ಆರಂಭವಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಈ ಬಾರಿ ಎಲ್ಲಾ ಯಂಗ್ಸ್ಟರ್ ಮೂಲಕ ತಂಡ ಕಟ್ಟಿದೆ. ಹಾಗೆ ಒಳ್ಳೆ ಪ್ರದರ್ಶನ ಕೂಡ ಕೊಡಲು ತಯಾರಾಗಿದೆ. ಎಲ್ಲಾ ಮಾದರಿಗಳಲ್ಲೂ ಟೆಸ್ಟ್ ಒನ್ ಡೇ ಮತ್ತು ಟಿ 20 ಗೆ ಬಾಬರ್ ಅಜಮ್ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಆಗಿ ಹೊರಹೊಮ್ಮಿದ್ದಾರೆ.

ಬಾಬರ್ 1996ರಲ್ಲಿ ಲಾಹೋರ್ ನಲ್ಲಿ ಜನಿಸುತ್ತಾರೆ. ಇದೀಗ ಇವರಿಗೆ 27 ವರ್ಷ ಬಬರ್ ಅಜಮ್ ಗೆ ಆರ್ಸಿಬಿ ಆಪತ್ಬಾಂಧವ ಮಿಸ್ಟರ್ 360, ಸೌತ್ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವ್ರು ತುಂಬಾನೇ ಫೇವರೆಟ್ ಆಟಗಾರ ಎಂದು ಹೇಳಿಕೊಂಡಿದ್ದಾರೆ. ಹಾಗೆ ಮಹೇಂದ್ರ ಸಿಂಗ್ ಧೋನಿಯವರ ದಿ ಅನ್ ಟೋಲ್ಡ್ ಸ್ಟೋರಿ ಸಿನಿಮಾ ಇವರ ಫೇವರೆಟ್ ಸಿನಿಮಾವಂತೆ. ಹಾಗೂ ವಿರಾಟ್ ಕೊಹ್ಲಿ ಅವರನ್ನು ಸಹ ಇಷ್ಟಪಡುವ ಈ ಬಾಬರ್ ಅಜಂ ಇದೀಗ ಕ್ರಿಕೆಟ್ ಜಗತ್ತಿನಲ್ಲಿ ತುಂಬಾನೇ ಸದ್ದು ಮಾಡುತ್ತಿದ್ದಾರೆ.

ಹಲಾಲ್ ಊಟದ ಪದಾರ್ಥ ಹೆಚ್ಚು ಇಷ್ಟಪಡುವ ಇವರು ಯಾವುದೇ ದುಶ್ಚಟಗಳಿಗೆ ಒಳಗಾಗಿಲ್ಲ, ಮತ್ತು ಯಾವುದೇ ಹುಡುಗಿಯ ಹಿಂದೆ ಇವರು ಬಿದ್ದಿಲ್ಲ ಎಂದು ತಿಳಿದುಬಂದಿದೆ. ಇವರ ವಾರ್ಷಿಕ ಆದಾಯ ಕ್ರಿಕೆಟ್ ವೃತ್ತಿಯಲ್ಲೇ 4 ಕೋಟಿ ಹಾಗೆ ಲಾಹೋರ್ನಲ್ಲಿ 45 ಕೋಟಿ ಮನೆಯನ್ನು ಹೊಂದಿದ್ದಾರೆ..ಬಾಬರ್ ಅಜಮ್ ಅವರಿಗೆ ಹೆಚ್ಚು ಕಾರುಗಳ ಕ್ರೇಜ್ ಇದೆಯಂತೆ ಇವರ ಬಳಿ ಆಡಿ ಇನೋವಾ ಬೆಂಚ್ ಕಾರ್ ಹಾಗೂ ಬಿ ಎಂ ಡಬ್ಲ್ಯೂ ಕಾರ್ ಇದೆಯಂತೆ. ಇನ್ನು ಭಾರತದ ಶಾರುಖ್ ಖಾನ್ ಹಾಗೂ ನಟಿ ಅಲಿಯಾ ಭಟ್ ಇವರ ನೆಚ್ಚಿನ ನಾಯಕ ಹಾಗೂ ನಾಯಕಿ ಎಂದಿದ್ದಾರೆ.

ಹಾಗೆ ರಾಜಕೀಯಕ್ಕೆ ಬರುವುದಾದರೆ ಬಾಬರ್ ಅಜಮ್ ಅವರ ದೇಶದ ಇಮ್ರಾನ್ ಖಾನ್ ಅವರನ್ನು ಇವರು ಹೆಚ್ಚು ಇಷ್ಟಪಡುತ್ತಾರಂತೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...