ಆರ್ ಸಿಬಿ ವರ್ಸಸ್ ಚೆನ್ನೈ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದೆಂದು ತಿಳಿಸಿದ ಖ್ಯಾತ ಕ್ರಿಕೆಟಿಗ..??

By Infoflick Correspondent

Updated:Friday, September 24, 2021, 18:48[IST]

ಆರ್ ಸಿಬಿ ವರ್ಸಸ್ ಚೆನ್ನೈ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದೆಂದು ತಿಳಿಸಿದ ಖ್ಯಾತ ಕ್ರಿಕೆಟಿಗ..??

ಸ್ನೇಹಿತರೆ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್ ಮ್ಯಾಚ್ ನಡೆಯಲಿದೆ. ಅದೇನೋ ಗೊತ್ತಿಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮ್ಯಾಚ್ ನಡೆಯುತ್ತಿದೆಯೆಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಹಬ್ಬದ ಊಟವೇ ಸರಿ. ಆ ದಿನ ಪಂದ್ಯ ಆರಂಭವಾಗುವವರೆಗೂ ತುಂಬಾನೇ ಕಾತುರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮನಿಗಳು ಕಾಯುತ್ತಿರುತ್ತಾರೆ.

ಇದೀಗ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನು ಯಾರು ಗೆಲ್ಲಬಹುದು ಎಂದು ಮಾಜಿ ಕ್ರಿಕೆಟಿಗ ಮತ್ತು ಮಾಜಿ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಮನಬಿಚ್ಚಿ ಮಾತನಾಡಿದ್ದಾರೆ. ಹೌದು ಸಂಜಯ್ ಅವರ ಪ್ರಕಾರ ಆರ್ಸಿಬಿ ವಿರುದ್ಧ ಚೆನ್ನೈ ಗೆಲ್ಲಲಿದೆ ಎಂದು ಹೇಳಿದ್ದಾರೆ. ಹಾಗೆ ಚೆನ್ನೈ ತಂಡ ಯಾವೊಬ್ಬ ಆಟಗಾರನ ಮೇಲೆಯೇ ಅವಲಂಬಿತವಾಗಿಲ್ಲ. ಚೆನ್ನೈ ತಂಡದಲ್ಲಿರುವ ಎಲ್ಲಾ ಕ್ರಿಕೆಟ್ ಆಟಗಾರರು ತುಂಬಾನೇ ಸ್ಟ್ರಾಂಗ್ ಆಗಿದ್ದಾರೆ. ಹಾಗಾಗಿ ಚೆನ್ನೈ ವಿನ್ ಆಗುತ್ತಿದೆ. ಆದರೆ ಬೆಂಗಳೂರು ಕೇವಲ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಹಾಗೂ ಮ್ಯಾಕ್ಸ್ವೆಲ್ ಮೇಲೆ ಅವಲಂಬಿತವಾಗಿದೆ, ಹಿಗಾಗಿ ಆರ್ಸಿಬಿ ಪದೇಪದೇ ಸೋಲನ್ನು ಅನುಭವಿಸುತ್ತಿದೆ ಎಂದರು.

ಈ ಬಾರಿ ಐಪಿಎಲ್ ನಲ್ಲಿ ಆರ್ಸಿಬಿ ಮೊದಲಾರ್ಧದಲ್ಲಿ ತುಂಬಾನೇ ಅದ್ಭುತ ಪ್ರದರ್ಶನ ನೀಡಿದೆ ಎಂದು ಸಹ ಹೇಳಿದ್ದಾರೆ. ಮುಂಬೈ ತಂಡದ ಮೇಲೆ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿರುವ ಚೆನ್ನೈ ತಂಡ ಇಂದು ಗೆಲ್ಲುವ ಫೆವರೇಟ್ ತಂಡ ಎಂದು ಹೇಳಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕೊಲ್ಕತ್ತಾ ವಿರುದ್ಧದ ಸೋಲನ್ನು ಬಿಟ್ಟರೆ ಈ ಬಾರಿ ನಮ್ಮ ಆರ್ಸಿಬಿ ತಂಡ ತುಂಬಾನೇ ಅದ್ಭುತ ಪ್ರದರ್ಶನ ನೀಡಿದೆ. ಇಂದೂ ಸಹ ಚೆನ್ನೈ ತಂಡದ ವಿರುದ್ಧ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳ್ತಿದ್ದಾರೆ. 

ನಿಮ್ಮ ಪ್ರಕಾರ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ತಂಡದಲ್ಲಿ ಯಾವ ತಂಡ ಗೆಲ್ಲಬಹುದು ಎಂದು ಕಾಮೆಂಟ್ ಮಾಡಿ ತಿಳಿಸಿ, ಹಾಗೆ ಈ ಮಾಹಿತಿಯ ಬಗ್ಗೆ ಅನಿಸಿಕೆಗಳನ್ನು ಕೂಡ ಕಮೆಂಟ್ ಮಾಡಿ, ಧನ್ಯವಾದಗಳು...