2021 ರ ಐಪಿಎಲ್ ನಡೆಯೋದು ತಮಾಷೆಯಲ್ಲ..! ಈ ಹತ್ತು ನಿಯಮ ಪಾಲಿಸಲೇಬೇಕಂತೆ..?

Updated: Monday, March 29, 2021, 11:23 [IST]

ಹೌದು ಸ್ನೇಹಿತರೆ, ಈ ಬಾರಿಯ ಐಪಿಎಲ್ ಟೂರ್ನಿಯೂ ಕೋರೋನ ವೈರಸ್ ಆತಂಕದ ನಡುವೆಯೂ ಸಹ, ಬಿಸಿಸಿಐ ಭಾರತದಲ್ಲಿ ಆಯೋಜಿಸುವುದಕ್ಕೆ ನಿರ್ಧಾರ ಮಾಡಿದೆ.  ಜೊತೆಗೆ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಮಿಲಿಯನ್ ಡಾಲರ್ ಟೂರ್ನಿ ನಡೆಯಲಿದೆ.. ಹಾಗೆ ಪಂದ್ಯಗಳು ಸೀಮಿತ ಗ್ರೌಂಡ್ ಗಳಲ್ಲಿ ನಡೆಯಲಿವೆ ಇದೆ ಮೊದಲ ನಿಯಮ. ಕೇವಲ ಆರು ಸ್ಟೇಡಿಯಂಗಳಲ್ಲಿ ಎಲ್ಲಾ 60 ಪಂದ್ಯಗಳನ್ನು ಆಡಿಸಲಾಗುತ್ತದಂತೆ. ಇದೆಲ್ಲ ಕಾರಣಕ್ಕೆ ಬಿಸಿಸಿಐ ಸಂಪೂರ್ಣ ಟೂರ್ನಿಗಾಗಿ ಒಟ್ಟು 10 ಕಠಿಣ ಕ್ರಮಗಳನ್ನು ಜಾರಿ ಮಾಡಿದೆಯಂತೆ.. ಐಪಿಎಲ್ ಟೂರ್ನಿಯ ಪ್ರತಿಯೊಂದು ತಂಡದ ಆಟಗಾರರು ಮತ್ತು  ಸದಸ್ಯರು ಈ ನಿಯಮವನ್ನು ಪಾಲಿಸುವುದು ಕಡ್ಡಾಯ ಆಗಿದೆ...    

ಮೊದಲನೆ ನಿಯಮ, ಆಟಗಾರರು ಹಾಗೂ ಅವರ ಕುಟುಂಬಗಳ ಜೊತೆಗೆ, ತಂಡಗಳ ಮಾಲೀಕರು ಕೂಡ ಬಯೋಬಬಲ್ ಗೆ ಪ್ರವೇಶ ಮಡಬಹುದು. ಆದ್ರೆ  ಇದಕ್ಕೂ ಮುನ್ನವೇ ಮುಖ್ಯ ವೈದ್ಯಕೀಯ ಅಧಿಕಾರಿಗಳ ಬಳಿ ಬಿಸಿಸಿಐ ಅನುಮತಿ ಪಡೆದುಕೊಳ್ಳಬೇಕು. ಮತ್ತು ತಮ್ಮ ತಂಡದ ಆಟಗಾರರ ಸುರಕ್ಷತೆಗೆ ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ಇಡೀ ಹೋಟೆಲನ್ನು ಕಾಯ್ದಿರಿಸಬೇಕು ಇದು ಎರಡನೇ ನಿಯಮವಾಗಿದೆ. ಇದು ಒಂದು ವೇಳೆ ಸಾಧ್ಯ ಆಗದಿದ್ದರೆ, ಬೇರೇಕಡೆ  ಆಟಗಾರರು ಪ್ರವೇಶ ಮಾಡದಂತೆ ಅಥವಾ ಬೇರೆಯವರು ಭೇಟಿಯಾಗುವಂತೆ ಉಳಿದ ಭಾಗದ ಪ್ರವೇಶವನ್ನ ಮುಚ್ಚಬೇಕಾಗುತ್ತದೆ..  

ವಿದೇಶಿ ಆಟಗಾರರಿಗೆ ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು ಇದು ಕಡ್ಡಾಯವಾಗಿದೆ. ಇದರ ಖರ್ಚನ್ನ  ಆಟಗಾರರೇ ಹೊರಬೇಕು ಎನ್ನಲಾಗಿದೆ. ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಚೆಂಡು ಮೈದಾನದ ಹೊರಗೆ ಹೋದಲ್ಲಿ ಅದನ್ನು ತಕ್ಷಣವೇ ಬದಲಿಸಿ, ಬಳಿಕ ಅದನ್ನು ಸ್ವಚ್ಛಗೊಳಿಸಿ ಮತ್ತೆ ಬಳಕೆ ಮಾಡಲಾಗುತ್ತದೆ. ಮುಂದಿನ ನಿಯಮ ಏನೆಂದರೆ, ಚೆನ್ನೈಗೆ ಆಗಮನ ಮಾಡುವ  ಆಟಗಾರರು ತಮಿಳುನಾಡು ಸರ್ಕಾರವು ನೀಡುತ್ತಿರುವ ವಿಶೇಷ ಪಾಸ್ ಒಂದನ್ನ ತೆಗೆದುಕೊಳ್ಳಬೇಕಾಗುತ್ತದೆ. ಕೊರೋನಾ ವೈರಸ್ ಕಾಯಿಲೆ ಹಿನ್ನೆಲೆ, ತಮಿಳುನಾಡು ಸರ್ಕಾರ ಇಂತಹದೊಂದು ನಿಯಮ ಜಾರಿಗೆ ತಂದಿದೆ ಎಂದು ಮಾದ್ಯಮ ಮೂಲಕ ತಿಳಿದುಬಂದಿದೆ..  

ಇನ್ನು ಐಪಿಎಲ್ ಆಟಗಾರರಿಗಾಗಿ ಹೋಟೆಲುಗಳಲ್ಲಿ ಪ್ರತ್ಯೇಕ ಚಕ್ ಇನ್ ಕೌಂಟರ್ಗಳು ಹೊಂದಿರುತ್ತವೆ. ಕೊಠಡಿಯಿಂದ ಹೊರಟರೆ ಮೈದಾನಕ್ಕೆ ಅಲ್ಲಿಂದ ಬಂದರೆ ಚೆಕ್ ಇನ್ ನಲ್ಲಿ ಆಟಗಾರರಿಗೆ ಮಾತ್ರ ನೇಮಿಸಲಾದ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು. ಇನ್ನು ಕೊನೆಯದಾಗಿ ಬಿಸಿಸಿಐ ಉನ್ನತ ಅಧಿಕಾರಿಗಳು ಬಯೋಬಬಲ್ ಪ್ರವೇಶಿಸುವಂತಿಲ್ಲ. ಅಲ್ಲದೆ ಬಿಸಿಸಿಐ ನಲ್ಲಿರುವ ಯಾವುದೇ ಸದಸ್ಯರಾಗಲಿ ಆಟಗಾರರನ್ನು ಭೇಟಿಯಾಗುವುದಿಲ್ಲ. ಇಷ್ಟು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಈ ಬಾರಿಯ ಐಪಿಎಲ್ ಯಶಸ್ವಿಯಾಗಲು ಸಾಧ್ಯ.