ಕ್ಯಾಪ್ಟನ್ ಶಿಪ್ ನಿಂದ ಹೊರ ಬಂದ ವಿರಾಟ್ ಕೊಹ್ಲಿ: ಆರ್‌ಸಿಬಿಗೆ ನಾಯಕ ಯಾರಾಗುತ್ತಾರೆ..?

By Infoflick Correspondent

Updated:Thursday, February 24, 2022, 09:14[IST]

ಕ್ಯಾಪ್ಟನ್ ಶಿಪ್ ನಿಂದ ಹೊರ ಬಂದ ವಿರಾಟ್ ಕೊಹ್ಲಿ: ಆರ್‌ಸಿಬಿಗೆ ನಾಯಕ ಯಾರಾಗುತ್ತಾರೆ..?

ಕಳೆದ ಹತ್ತು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ(Virat Kohli)  ಈಗ ಕ್ಯಾಪ್ಟನ್ ಶಿಪ್ ನಿಂದ ಹೊರ ನಡೆದಿದ್ದಾರೆ. ಫುಲ್ ಟೈಮ್ ಬ್ಯಾಟರ್ ಆಗಿರಲು ವಿರಾಟ್ ಕೊಹ್ಲಿ ಅವರು ಇಚ್ಛಿಸಿದ್ದಾರೆ ನಂತರ ಎಬಿ ಡಿವಿಲಿಯರ್ಸ್ ಅವರು ನಿವೃತ್ತಿ ಘೋಷಿಸಿದ್ದು, ಇವರನ್ನು ಕೂಡ ನಾಯಕರನ್ನಾಗಿ ಮಾಡಲು ಸಾಧ್ಯವಿಲ್ಲ. IPL 2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ನಾಯಕತ್ವದ ಆಯ್ಕೆಯನ್ನು ಮುಂದೂಡಿತ್ತು. ಈಗ ಆರ್‌ಸಿಬಿಗೆ ಕ್ಯಾಪ್ಟನ್ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.     

ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ನಾಯಕರನ್ನಾಗಿ ಮಾಡುವ ಸಾಧ್ಯತೆ ಇತ್ತು. ಆದರೆ ಅವರು ಭಾರತೀಯ ಮೂಲದ ಯುವತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲುಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾಕ್ಸ್‌ವೆಲ್ ಅವರು ಐಪಿಎಲ್ ನ ಮೊದಲ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿ ಮಾಡುವ ಸಾಧ್ಯತೆ ತೀರ ಕಡಿಮೆ ಇದೆ. ಇನ್ನು ಆರ್ಸಿಬಿಗೆ ಯಾರು ನಾಯಕನಾಗಿ ಬರುತ್ತಾರೆ ಎಂಬುದಕ್ಕೆ ಇಲ್ಲಿದೆ ಉತ್ತರ. 

ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಆರ್ಸಿಬಿಗೆ ನೂತನ ನಾಯಕ ಎಂದು ಹೇಳಲಾಗುತ್ತಿದೆ.  ಪ್ಲೆಸಿಸ್ (Placis)ಅವರನ್ನೇ RCB ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಆದಷ್ಟು ಬೇಗ ಪ್ಲೇಸಿಸ್ ಅವರನ್ನು ನಾಯಕ ಎಂದು ಆರ್ಸಿಬಿ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸುವುದಷ್ಟೇ ಬಾಕಿ ಉಳಿದಿದೆ. ಇತ್ತೀಚಿಗೆ ಐಪಿಎಲ್ ಮೆಗಾ ಹರಾಜು ನಡೆದಿತ್ತು. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಪೈಪೋಟಿಗೆ ಇಳಿದ ಆರ್ಸಿಬಿ ಫ್ರಾಂಚೈಸಿ ಪ್ಲೆಸಿಸ್ ಅವರಿಗೆ 7 ಕೋಟಿ ರೂಪಾಯಿಯನ್ನು ನೀಡಿ ಖರೀದಿಸಿದೆ. ಇನ್ನು ಆರ್ಸಿಬಿಗೆ ಹೊಸ ನಾಯಕ ಬರಲಿದ್ದು, ತಂಡದಲ್ಲಿ ಹೊಸ ಪರ್ವ ಆರಂಭವಾಗಲಿದ್ಯಾ ಎಂದು ಕಾದು ನೋಡಬೇಕಿದೆ.