ಇಂದಿನ ಹೈದರಾಬಾದ್ ವಿರುದ್ದದ ಪಂದ್ಯಕ್ಕೆ ಪಡಿಕ್ಕಲ್ ಆಡ್ತಾರ..? ಸ್ಪಿನ್ ಕೋಚ್ ಹೇಳಿದ್ದೇನು ನೋಡಿ..!

Updated: Wednesday, April 14, 2021, 19:22 [IST]

ಹೌದು ಸ್ನೇಹಿತರೆ ಐಪಿಎಲ್ 2021 ರ ಆರಂಭದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು  ಮುಂಬೈ ವಿರುದ್ಧ ಭರ್ಜರಿಯಾಗಿ ಗೆದ್ದು ಶುಭಾರಂಭ ಆರಂಭಿಸಿತು. ನೀವು ಮೊದಲ ಪಂದ್ಯವನ್ನ ಗಮನಿಸಿದ್ದೆ ಆದಲ್ಲಿ ಓಪನರ್ ಆಗಿ ವಾಷಿಂಗ್ಟನ್ ಸುಂದರ್ ಅವರು ಕಣಕ್ಕಿಳಿದಿದ್ದರು. ಇಂದು ಬುಧವಾರ ಬೆಂಗಳೂರು ತಂಡ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ಅಂದ ಹಾಗೆ ಒಪೆನರ್ ಪಡಿಕ್ಕಲ್ ಅವರು ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರು ಕಾರಣ ಕರೋನವೈರಸ್ ಪಾಸಿಟಿವ್ ಬಂದಿರುವ ಕಾರಣಕ್ಕಾಗಿ ಕ್ವಾರಂಟೈನ್ ಐಸೋಲೇಶನ್ ಇದ್ದರು ಎಂಬುದಾಗಿ ತಿಳಿದುಬಂದಿತ್ತು. 

ಇದೀಗ ಎಲ್ಲಾ ಐಸೋಲೇಶನ್ ಮುಗಿದಿದ್ದು, ಪಡಿಕಲ್ ಅವರು ಎರಡನೇ ಪಂದ್ಯಕ್ಕೆ ಸಿದ್ದರಾಗಿದ್ದಾರೆ ಎಂದು ಕೇಳಿ ಬಂದಿದೆ. ಅವರೇ ಹೇಳಿದ ಹಾಗೆ 14 ದಿನ ಕ್ವಾರೆಂಟೈನ್ ಅಲ್ಲಿಯೇ ಇದ್ದು, ಈಗ ಮತ್ತೆ ಮರಳಿ ತಂಡದ ಜೊತೆ ಕ್ರಿಕೆಟ್ ಪ್ರಾಕ್ಟೀಸ್ ಮಾಡುವುದಕ್ಕೆ  ಹಾಗೂ ಒಬ್ಬ ಕ್ರಿಕೆಟಿಗ ಖುಷಿ ಪಡುವುದು ಮತ್ತೆ ಫೀಲ್ಡಿಗೆ ಬಂದಮೇಲೆ, ಕ್ರಿಕೆಟ್ ಆಡುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಇಂದಿನ ಎರಡನೇ ಪಂದ್ಯದಲ್ಲಿ ಆಡುವುದರ ಬಗ್ಗೆ ಸುಳಿವು ಕೊಟ್ಟಿದ್ದಾರೆ ಪಡಿಕ್ಕಲ್. ಹೌದು ಇದಕ್ಕೆ ಪುಷ್ಟಿಯ ಹಾಗೆ ಆರ್ಸಿಬಿ ಸ್ಪಿನ್ ಕೋಚ್  ಶ್ರೀಧರನ್ ಶ್ರೀರಾಮ್ ಸಹ ಪಡಿಕ್ಕಲ್ ಬಗ್ಗೆ ಮಾತಾಡಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.. 

'ಕಳೆದ ಐಪಿಎಲ್ ಮುಗಿದಾಗ ಪಡಿಕ್ಕಲ್ ಯಾವ ಉತ್ಸಾಹದಲ್ಲಿದ್ದರೋ, ಅದೇ ಉತ್ಸಾಹ ಸಹ ಈಗ ಕಾಣಿಸುತ್ತಿದೆ. ಪಡಿಕಲ್ ಬ್ಯಾಟಿಂಗ್ ಬಗ್ಗೆ ತುಂಬಾ ನಂಬಿಕೆ ಇದೆ.  

ಹಾಗೆ ಮುಷ್ಟಾಖ್ ಅಲಿ ಮತ್ತು ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಪಡಿಕ್ಕಲ್ ಇದೀಗ ಜಸ್ಟ್ ಒಂದು ಸಣ್ಣ ಅರೆಸ್ಟ್ ಮುಗಿಸಿ ಬಂದಿದ್ದಾರೆ ಅಷ್ಟೇ, ಆನ್ ಫೀಲ್ಡ್ ಯುದ್ಧಕ್ಕೆ ಅವರು ಹಂಡ್ರೆಡ್ ಪರ್ಸೆಂಟ್ ರೆಡಿಯಾಗಿದ್ದಾರೆ' ಎಂದು ಹೇಳಿ ಹೈದ್ರಾಬಾದ್ ವಿರುದ್ಧ ನಡೆಯುವ ಎರಡನೇ ಪಂದ್ಯಕ್ಕೆ ಪರ್ಮನೆಂಟ್ ಓಪನರ್ ಎಂಟ್ರಿ ಆಗಲಿದೆ ಎಂಬ ಸುಳಿವು ಹಾಗೂ ಮುನ್ಸೂಚನೆಯನ್ನು ನೀಡಿದ್ದಾರೆ. ಹೌದು ನೀವು ಪಡಿಕ್ಕಲ್ ಅವರನ್ನ ಓಪನರ್ ಆಗಿ ನೋಡೋದಕ್ಕೆ ಇಂದು ಕಾಯುತ್ತಿದ್ದಾರೆ ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ...