ಏನ್ ರಶ್ಮಿಕಾ ಮಂದಣ್ಣ ನಿನ್ನ ಅವತಾರ ಗುರು, ನೀವೇ ನೋಡಿ ನಿಮ್ಮ ಕಣ್ಣಾರೆ ;ವಿಡಿಯೋ ವೈರಲ್

ಏನ್  ರಶ್ಮಿಕಾ ಮಂದಣ್ಣ  ನಿನ್ನ ಅವತಾರ ಗುರು,  ನೀವೇ ನೋಡಿ ನಿಮ್ಮ ಕಣ್ಣಾರೆ ;ವಿಡಿಯೋ ವೈರಲ್

ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕ ಮಂದಣ್ಣ ಮೊದಲಿಗೆ ಕನ್ನಡ ಚಿತ್ರರಂಗದಿಂದ ಸಿನಿ ಕೆರಿಯರ್ ಆರಂಭಿಸಿ ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡದ ಬೆಡಗಿ ರಶ್ಮಿಕಾ ಎಲ್ಲೆಡೆ ಇಷ್ಟು ಜನಪ್ರಿಯತೆ ನಮಗೆಲ್ಲ ಹೆಮ್ಮೆ. ಆಗಾಗ ಕೆಲವು ವಿಚಾರಗಳಿಂದ ಸುದ್ದಿಯಾಗುತ್ತಾರೆ ರಶ್ಮಿಕಾ ಮಂದಣ್ಣ.2016ರ ಅಂತ್ಯದಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ಕನ್ನಡದಲ್ಲಿ ಗಣೇಶ್ ಅವರ ಜೊತೆ ಚಮಕ್ ಸಿನಿಮಾದಲ್ಲಿ ನಟಿಸಿಜ್ ಟಾಲಿವುಡ್ ಗೆ ಹಾರಿದರು.

ಕನ್ನಡದಲ್ಲಿ ಅಂಜನಿಪುತ್ರ, ಯಜಮಾನ ಮತ್ತು ಪೊಗರು ಸಿನಿಮಾದಲ್ಲಿ ನಟಿಸಿದ ರಶ್ಮಿಕಾ, ತೆಲುಗಿನಲ್ಲಿ ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ಸರಿಲೇರು ನೀಕೇವ್ವರು, ಭೀಷ್ಮ ಸಿನಿಮಾಗಳಲ್ಲಿ ನಟಿಸಿದರು. ಸುಲ್ತಾನ್ ಸಿನಿಮಾ ಮೂಲಕ ಕಾಲಿವುಡ್ ಗು ಎಂಟ್ರಿ ಕೊಟ್ಟಿದ್ದಾರೆ ರಶ್ಮಿಕಾ. ಬಾಲಿವುಡ್ ಗೆ ಟಾಪ್ ಟಕರ್ ಹಾಡಿನ ಮೂಲಕ ಎಂಟ್ರಿ ಕೊಟ್ಟು, ಈಗ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಸಿನಿಮಾ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆಯಲ್ಲಿ ಗುಡ್ ಬೈ ಸಿನಿಮಾದಲ್ಲಿ ನಟಿಸಿದ್ದಾರೆ. 

ಇತ್ತೀಚೆಗೆ ರಶ್ಮಿಕಾ ಅವರು ಬಾಲಿವುಡ್ ನ ಒಂದು ಫ್ಯಾಷನ್ ಶೋನಲ್ಲಿ ಸಹ ಕಾಣಿಸಿಕೊಂಡರು. ಈ ಶೋನಲ್ಲಿ ಕೆಂಪು ಬಣ್ಣದ ಡಿಸೈನರ್ ತುಂಡುಡುಗೆ ಧರಿಸಿ ಬಂದಿದ್ದರು ರಶ್ಮಿಕಾ ಮಂದಣ್ಣ. ಈ ಡ್ರೆಸ್ ಎಲ್ಲರ ಕಣ್ಣುಕುಕ್ಕುವ ಹಾಗೆ ಇದ್ದಿದ್ದಂತೂ ನಿಜ. ಶಾರ್ಟ್ ಡ್ರೆಸ್ ನಲ್ಲಿ ರಾಂಪ್ ವಾಕ್ ಮಾಡಿದ ರಶ್ಮಿಕಾ ಸ್ಟೈಲ್ ಗೆ ಅಲ್ಲಿ ನೆರೆದಿದ್ದವರು ಹಾಗೂ ಬಾಲಿವುಡ್ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲಿದ್ದ ಜನ ರಶ್ಮಿಕಾ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಂತೂ ನಿಜ. ರಶ್ಮಿಕಾ ಜೊತೆಗೆ ಸೆಲ್ಫಿಗಾಗಿ ನೂಕಾಟ ತಳ್ಳಾಟ ಸಹ ನಡೆದಿತ್ತು..

ಇತ್ತೀಚೆಗೆ ರಶ್ಮಿಕಾ ಅವರು zee  ಸಿನಿಮಾ ಅವಾರ್ಡ್ಸ್ ನಡೆಸು ಕೊಡುವ ಕಾರ್ಯ ಕ್ರಮದಲ್ಲಿ ತುಂಬಾ ಹಾಟ್ ಆಗಿ ಡ್ರೆಸ್ ಮಾಡಿ ಕೊಂಡು ಕಾಣಿಸಿ ಕೊಂಡಿದ್ದಾರೆ . ಇದನ್ನು ನೋಡಿದ ನೆಟ್ಟಿಗರು ರಶ್ಮಿಕಾ ನಿನಗೆ ಇದೆಲ್ಲ ಬೇಕಿತ್ತಾ . ನೀನು ಎಷ್ಟೇ ಹಾಟ್ ಆಗಿ ಡ್ರೆಸ್ ಹಾಕಿದರೂ ನಿನಗೆ ಯಾರು ಬಾಲಿವುಡ್ ನಲ್ಲಿ ಚಾನ್ಸ್ ಕೊಡುವುದಿಲ್ಲ ಬಿಡು ಎಂದು ಕಾಲ್   ಎಳೆದಿದ್ದಾರೆ. ನೀವೇನಂತೀರಾ