ಪ್ರೀತಿಯಲ್ಲಿ ಬಿದ್ದಿದ್ದ ರತನ್ ಟಾಟಾ: ಆ ಹುಡುಗಿ ಯಾರು ಗೊತ್ತೇ..?

ಪ್ರೀತಿಯಲ್ಲಿ ಬಿದ್ದಿದ್ದ ರತನ್ ಟಾಟಾ: ಆ ಹುಡುಗಿ ಯಾರು ಗೊತ್ತೇ..?

ಟಾಟಾ ಟೀ, ಟಾಟಾ ಸ್ಟೀಲ್, ಟಾಟಾ ಉಪ್ಪು, ಇಂಡಿಕಾ ಕಾರು ಹೀಗೆ ಸಾಕಷ್ಟು ಹೆಸರನ್ನು ಕೇಳಿದ್ದೀರಾ. ಇದೆಲ್ಲವೂ ಟಾಟಾ ವಂಶಸ್ಥರದ್ದು. 150ವರ್ಷಕ್ಕೂ ಅಧಿಕ ಇತಿಹಾಸವಿರುವ ಈ ಟಾಟಾ ಕಂಪನಿ ಬೆಳದು ಬಂದ ಕಥೆ ಸುಲಭದ್ದೇನಲ್ಲ. ಜೀವನದಲ್ಲಿ ಬಹಳ ಕಷ್ಟಪಟ್ಟು ಇಂದು ರತನ್ ಟಾಟಾ ಸಕ್ಸಸ್ ಫುಲ್ ಉದ್ಯಮಿಯಾಗಿದ್ದಾರೆ. ಇನ್ನು ರತನ್ ಟಾಟಾ ಅವರು ತಮ್ಮ ಬಾಲ್ಯವನ್ನು ಅಷ್ಟೋದು ಎಂಜಾಯ್ ಏನು ಮಾಡಿಲ್ಲ. ಸ್ಥಿತಿವಂತ ಕುಟುಂಬವಾದರೂ, ಕಷ್ಟವನ್ನು ನೋಡಿದವರು. ರತನ್ ಟಾಟಾ ಕೂಡ ಪ್ರೀತಿ ಮಾಡಿ ಬ್ರೇಕಪ್ ಮಾಡಿಕೋಮಡವರು. ಈ ಬಗ್ಗೆ ಸ್ವತಃ ರತನ್ ಟಾಟಾ ಅವರೇ ಈ ಹಿಂದೆ ಹೇಳಿಕೊಂಡಿದ್ದರು. 

ಹೌದು.. ರತನ್ ಟಾಟಾ ಅವರು ಕಾಲೇಜಿನಲ್ಲಿ ಓದಿ ಮುಗಿಸಿದ ಮೇಲೆ ಕೆಲಸಕ್ಕೆಂದು  ಲಾಸ್ ಏಂಜಲೀಸ್ನ ಆರ್ಕಿಟೆಕ್ಚರ್ ಸಂಸ್ಥೆಗೆ ಸೇರಿಕೊಂಡರು. ಅಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆಗ ರತನ್ ಟಾಟಾ ಅವರ ಜೀವನ ತುಂಬಾ ಚೆನ್ನಾಗಿತ್ತು. ಸ್ವಂತ ಕಾರು, ಇಷ್ಟಪಟ್ಟ ಕೆಲಸ ಎಲ್ಲವೂ ರತನ್ ಟಾಟಾ ಅವರು ಬಯಸಿದಂತೆಯೇ ನಡೆಯುತ್ತಿತ್ತು. ಆಗಲೇ ರತನ್ ಅವರು ಪ್ರೀತಿಯಲ್ಲಿ ಬಿದ್ದದ್ದು, ಪ್ರೇಮಲೋಕದಲ್ಲೂ ಹಾಯಾಗಿದ್ದ ರತನ್ ಅವರು ಅದೇ ಹುಡುಗಿಯನ್ನು ಮದುವೆಯಾಗುವ ನಿರ್ಧಾರವನ್ನೂ ಮಾಡಿದ್ದರು. ಆಗ ರತನ್ ಅವರು ತವರಿಗೆ ಮರಳಲು ತೀರ್ಮಾನ ಮಾಡಿದ್ದರು.  

ಯಾಕೆಂದರೆ, ರತನ್ ಟಾಟಾ ಅವರು ಅವರ ಅಜ್ಜಿಯೊಂದಿಗೆ ಬಹಳ ಸುಂದರವಾದ ಬಾಂಧವ್ಯವನ್ನು ಹೊಂದಿದ್ದರು. ಕೆಲಸದ ನಿಮಿತ್ತ ಬಹಳ ವರ್ಷದಿಂದ ಅಜ್ಜಿಯೊಂದಿಗೆ ಇರಲು ಸಾಧ್ಯವಾಗಿರಲಿಲ್ಲ. ಅಜ್ಜಿ ಜೊತೆಗೆ ಕಾಲ ಕಳೆಯುವ ಆಸೆಯಿಂದ ಭಾರತಕ್ಕೆ ಮರಳಲು ಬಯಸಿದ್ದರು. ಇನ್ನು ತಾವು ಪ್ರೀತಿಸಿದ ಹುಡುಗಿಯೂ ಕೂಡ ತಮ್ಮೊಂದಿಗೆ ಭಾರತಕ್ಕೆ ಬರುತ್ತಾರೆ ಎಂದು ರತನ್ ಅವರು ಆಸೆ ಪಟ್ಟಿದ್ದರು. ಆದರೆ, 1962ರಲ್ಲಿ ನಡೆದಿದ್ದ ಇಂಡೋ ಚೀನಾ ಯುದ್ಧದ ಪರಿಣಾಮವಾಗಿ ತಮ್ಮ ಮಗಳನ್ನು ಎಲ್ಲಿಯೂ ಕಳಿಸುವುದಿಲ್ಲ ಎಂದು ಆಕೆಯ ಪೋಷಕರು ಹೇಳಿದ್ದರು. ಈ ಕಾರಣದಿಂದಾಗಿ ರತನ್ ಅವರ ಪ್ರೀತಿ ಬ್ರೇಕಪ್ ನಲ್ಲಿ ಕೊನೆಯಾಯ್ತು ಎಂದು ಹೇಳಿಕೊಂಡಿದ್ದಾರೆ. ಇಂದಿಗೂ ರತನ್ ಟಾಟಾ ಅವರು ಯಾರನ್ನೂ ಮದುವೆಯಾಗಿಲ್ಲ.