ನಟಿ ಮೀರಾ ಜಾಸ್ಮಿನ್‌ ಕಷ್ಟ ಯಾರಿಗೂ ಬೇಡ ಕಣ್ರೀ. ಈಗ ಹೇಗಿದ್ದಾರೆ ನೋಡಿ :ವಿಡಿಯೋ ವೈರಲ್

ನಟಿ ಮೀರಾ ಜಾಸ್ಮಿನ್‌ ಕಷ್ಟ ಯಾರಿಗೂ ಬೇಡ ಕಣ್ರೀ. ಈಗ ಹೇಗಿದ್ದಾರೆ ನೋಡಿ :ವಿಡಿಯೋ ವೈರಲ್

ತೆಲುಗು ಪಿಲ್ಲಾ ಆಗಿ ಕನ್ನಡಿಗರ ಮನಸ್ಸಿನಲ್ಲಿ 2000 ದಶಕದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು ನಟಿ ಮೀರಾ ಜಾಸ್ಮಿನ್. ಈಗ ಅವರ ಬದುಕು ಮೂರಾಬಟ್ಟೆಯಾಗಿದೆ. ಚಿತ್ರರಂಗದಲ್ಲಿ ಕೆಲವೇ ಕೆಲ ವರ್ಷಗಳು ಮಾತ್ರ ಮಿಂಚಿ ಮರೆಯಾದರು. ಚಿತ್ರರಂಗಕ್ಕೆ ಬರಲು ಯಾವುದೇ ಅಪೇಕ್ಷೆಯನ್ನು ಹೊಂದಿರದ ಮೀರಾ ಜಾಸ್ಮಿನ್, ತಾನು ವೈದ್ಯರಾಗಬೇಕು ಎಂಬ ಕನಸನ್ನು ಕಂಡಿದ್ದರು. ಆದರೆ ಆಗಿದ್ದೇ ಬೇರೆ. 2000 ದಶಕ, ಮೀರಾ ಪರೀಕ್ಷೆ ಬರೆಯಲು ಕಾಲೇಜಿಗೆ ಹಾಜರಾಗಿದ್ದರು. ಅಂದು ಮಲೆಯಾಳಂನ ಖ್ಯಾತ ನಿರ್ದೇಶಕರಾಗಿದ್ದ ಲೋಹಿತ್ ದಾಸ್ ಎಂಬುವರು ಆಕೆಯ ಮುದ್ದು ಮುಖವನ್ನು ನೋಡಿ ತನ್ನ ಚಿತ್ರದಲ್ಲಿ ಅಭಿನಯಿಸಲು ಇವಳೇ ಸರಿಯಾದ ಪಾತ್ರಧಾರಿ ಎಂದು ನಿರ್ಧರಿಸಿ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು. ಅಂತೆಯೇ ಮೀರಾ 2001 ರಲ್ಲಿ ಸೂತ್ರಧಾರನ್ ಎಂಬ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.  

ನಂತರ ಮೀರಾ ಹಿಂದಿರುಗಿ ನೋಡಿದ ಇತಿಹಾಸವೇ ಇಲ್ಲ. 2010 ರ ಹೊತ್ತಿಗೆ ಮಲಯಾಳಂ, ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದ ಜನಪ್ರಿಯ ನಟಿ ಎಂದೆನಿಸಿಕೊಂಡರು. ಮೀರಾ ದುಡಿದ ಹಣವೆಲ್ಲವೂ ಅವರ ಪೋಷಕರೇ ಪಡೆಯುತ್ತಿದ್ದರು. ಈ ಬಗ್ಗೆ ಒಮ್ಮೆ ಬಹಿರಂಗವಾಗಿ ಹೇಳಿದ್ದರೂ ಕೂಡ. ಮೀರಾ, ತಮ್ಮ ಸಿನಿ ವೃತ್ತಿಜೀವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ತಮಿಳು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಅತ್ಯುತ್ತಮ ನಟಿಯಾಗಿ ಫಿಲ್ಮ್ಫೇರ್ ಪ್ರಶಸ್ತಿ, ವಿ. ಶಾಂತಾರಾಮ್ ಚಲನಚಿತ್ರ ಪ್ರ ಪ್ರಶಸ್ತಿ, ವನಿತಾ ಚಲನಚಿತ್ರ ಪ್ರಶಸ್ತಿ, ಮಾತೃಭೂಮಿ ಚಲನಚಿತ್ರ ಪ್ರಶಸ್ತಿಗಳು, ಹೀಗೆ ಪ್ರಶಸ್ತಿಯ ಸರಮಾಲೆಗಳನ್ನು ಮೀರಾ ಮುಡಿಗೇರಿಸಿಕೊಂಡರು.   

ಇನ್ನು ಈಕೆ ಕನ್ನಡದಲ್ಲಿ ನಟಿಸಿದ್ದು, ಕೇವಲ ಐದು ಚಿತ್ರ . ಆದರೆ ಐದು ಚಿತ್ರದಲ್ಲಿಯೇ ಕನ್ನಡಿಗರ ಮನೆ ಮಾತಾಗಿ ಬಿಟ್ಟಿದ್ದರು. ಚಿತ್ರರಂಗದಲ್ಲಿ ಒಳ್ಳೆಯ ಅಭಿನಯ ಮಾಡುತ್ತಾ ಎಲ್ಲರ ಮನಸ್ಸನ್ನು ಗೆದ್ದಿದ್ದ ಈ ನಟಿಯ ವೈವಾಹಿಕ ಜೀವನ ಘೋರವಾದ ಸ್ಥಿತಿಗೆ ತಲುಪಿ ಬಿಟ್ಟಿದೆ. ಹೌದು, ಮೀರಾ ಜಾಸ್ಮಿನ್ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದಾಗ ದುಬೈನಲ್ಲಿದ್ದ ಸಾಫ್ಟ್ ವೇರ್ ಉದ್ಯಮಿ ಅನಿಲ್ ಜಾನ್ ಅವರನ್ನು ವಿವಾಹವಾದರು. ಕಾರಣಾಂತರಗಳಿಂದ ಇಬ್ಬರೂ ಬೇರೆಯಾದರು. ಇನ್ನೇನು ಸಿನಿಮಾ ಕ್ಷೇತ್ರದಿಂದ ದೂರ ಉಳಿದರು ಎನ್ನುಷ್ಟರಲ್ಲೇ ಮೀರಾ ಮತ್ತೆ ಸಿನಿ ರಂಗಕ್ಕೆ ಪಾದರ್ಪಣೆ ಮಾಡಿದರು. ಹಾಗೋ ಹೀಗೋ ಕಷ್ಟ ಪಟ್ಟು ಮೀರಾ ಈಗ ಮತ್ತೆ ನಟಿಸುತ್ತಿದ್ದಾರೆ. ದುರಂತವೆಂದರೆ ಅವರಿಗೆ ಒಳ್ಳೆಯ ಅವಕಾಶಗಳು ಸಹ ಸಿಗುತ್ತಿಲ್ಲ. ಪೋಷಕರೇ ಮಗಳಿಂದ ದುಡಿಸಿಕೊಂಡು ಈಗ ದೂರ ಮಾಡಿರುವುದು ನಿಜಕ್ಕೂ ದುರಾದೃಷ್ಟಕರ.( video credit : third eye )