ಅಂಬಾರಿ ಮೇಲೆರಿ ಬಂದ ಮಧುಮಗ.! ಆನೆ ರಂಪಾಠಕ್ಕೆ ಎಲ್ಲಾ ಛಿದ್ರ ಛಿದ್ರ..! ವಿಡಿಯೋ ವೈರಲ್

Updated: Sunday, June 13, 2021, 19:15 [IST]

    

ಹೌದು ಸ್ನೇಹಿತರೆ ಸಾಮಾನ್ಯವಾಗಿ ಮದುವೆ ಎಂದರೆ ತುಂಬಾನೇ ಸಂತೋಷದಿಂದ ಎಲ್ಲಾ ಗ್ರಾಂಡ್ ಆಗಿ ಅವರವರ ಸ್ಟೇಟಸ್ ಗೆ ತಕ್ಕ ಹಾಗೆ ಮಾಡಿಕೊಳ್ಳುತ್ತಾರೆ ಅಂದಹಾಗೆ ಮದುಮಗನ ಗ್ರ್ಯಾಂಡ್ ಎಂಟ್ರಿ ಲಕ್ಸುರಿ ಕಾರ್, ಹೆಲಿಕಾಪ್ಟರ್, ಬಸ್ಸು , ಹೀಗೆ ಇರುತ್ತದೆ. ಆದ್ರೆ ಇಲ್ಲೊಬ್ಬ ಮಧುಮಗ ಆನೆ ಮೇಲೆ ಬಂದು ಅವಘಡ ಮಾಡಿಕೊಂಡಿದ್ದಾನೆ. ಹೌದು ಉತ್ತರ ಪ್ರದೇಶದ ಪ್ರಯಾಗ ರಾಜ್ ನಗರದ ಅಮಲಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಧುಮಗ ಜೂನ್ 11 ಕ್ಕೆ ರಾತ್ರಿ ಆರತಕ್ಷತೆಯನ್ನ ರೆಡಿ ಮಾಡಿಕೊಂಡಿದ್ದ, ಹಾಗಾಗಿ ಆನೆ ಮೇಲೆ ಬಂದಿದ್ದ ,ಅಲ್ಲಿಗೆ ಬರುವವರೆಗೂ ಎಲ್ಲಾ ಚೆನ್ನಾಗಿಯೇ ಇತ್ತು, ಆನೆಯಿಂದ ಇಳಿದು ಸೀದಾ ರೇಸ್ಪ್ಶನ್ ಹಾಲ್ ಗೆ ಹೊರಟಿದ್ದ,ಆ ವೇಳೆ
ಮದುವೆಗೆ ಬ್ಯಾಂಡ್ ಸ್ಟಿಕರ್ ಸಾಕಷ್ಟು ಸೌಂಡು ಆನೆಗೆ ಕೇಳಿಬಂದಿದ್ದು, ಬೆಚ್ಚಿ ಬಿದ್ದಿದೆ. ಆ ವೇಳೆ ಆನೆಗೆ ಸಾಕಷ್ಟು ಮದವೇರಿದೆ ಬಳಿಕ ಅಲ್ಲಿರುವ 4 ಲಕ್ಸುರಿ ಕಾರುಗಳನ್ನು ಎತ್ತಿ ಬಿಸಾಡಿದೆ. ಈ ದೃಶ್ಯ ನೋಡಿದ ಮದುವೆಗೆ ಬಂದಿದ್ದ ಸಂಬಂಧಿಕರು ಬೆಚ್ಚಿಬಿದ್ದಿದ್ದಾರೆ. 

ಹಾಗೆ ರಿಸೆಪ್ಶನ್ ಗೆ ತಯಾರಿಸಿದ ಎಲ್ಲಾ ಸ್ಟೇಜ್ ಅನ್ನ ಚಿತ್ರ ಗೊಳಿಸಿ ಆನೆ ದೊಡ್ಡ ರಂಪಾಟವೇ ಮಾಡಿದೆ. ಬಳಿಕ ಮದುಮಗ ಅಲ್ಲಿಂದ ಓಡಿ ಹೋಗಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಕಂಡುಬಂದಿದ್ದು, ಆ ಆನೆಯನ್ನು ನಿಯಂತ್ರಿಸಲು, ತದನಂತರ ಫೋನ್ ಮಾಡಿ ಫಾರೆಸ್ಟ್ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದಾರೆ. ಈ ವಿಡಿಯೋ ನೋಡಿ ನಿಜಕ್ಕೂ ಮೈ ಜುಮ್ಮೆನ್ನುತ್ತದೆ. ಹಾಗೆ ಆನೆಯ ಆರ್ಭಟದ ಈ ವಿಡಿಯೋ ಇದೀಗ ಎಲ್ಲ ಕಡೆಯೂ ಸದ್ದು ಮಾಡುತ್ತಿದೆ. ವಿಡಿಯೋ ನೋಡಿ ಶೇರ್ ಮಾಡಿ ಧನ್ಯವಾದಗಳು..