ಆ ದೇವಸ್ಥಾನದಲ್ಲಿ ಮಧ್ಯರಾತ್ರಿ ಭಕ್ತರು ಪೂಜೆ ಮಾಡಲು ಕಾರಣ ಏನು ಗೊತ್ತಾ..?

Updated: Friday, June 18, 2021, 14:58 [IST]

    

ಹಿಂದೂ ಧರ್ಮದಲ್ಲಿ ಹೆಣ್ಣು ದೇವತೆಗೆ ತುಂಬಾ ಗೌರವವಿದೆ. ಇಡೀ ಭಾರತದಲ್ಲಿ ನಾನಾ ಬಗೆಯ ಶಕ್ತಿ ದೇವತೆಗಳಿವೆ. ಆರತಿಯೊಂದು ಊರುಗಳಲ್ಲೂ ಒಂದೊಂದು ಹೆಣ್ಣು ದೇವರು ಇದ್ದೇ ಇರುತ್ತಾರೆ. ಹೆಣ್ಣು ದೇವತೆಗೆ ಜನ ಹೆದರುತ್ತಾರೆ. ಆಕೆಯ ಮೇಲೆ ಅಪಾರವಾದ ಪ್ರೀತಿ, ಗೌರವವೂ ಇದೆ. 

ಇನ್ನು ಇಲ್ಲೊಂದು ದೇವಿ ದೇವಾಲಯವಿದೆ. ಅಲ್ಲಿ ಪೂಜಾರಿಯೇ ಇಲ್ಲವಂತೆ. ಭಕ್ತರೇ ಹೋಗಿ ದೇವಿಗೆ ಪೂಜೆ ಮಾಡಿ ನೈವೇದ್ಯ ಮಾಡಬೇಕಂತೆ. ಆ ದೇವಿಗೆ ಮಾಂಗಲ್ಯವೊಂದು ಬಿಟ್ಟು ಬೇರೆ ಯಾವ ಒಡವೆಯೂ ಇಲ್ಲವಂತೆ. ಆ ದೇವಿಗೆ ಮಾಂಸ ಎಂದರೆ ಪ್ರಿಯವಂತೆ ಆಕೆಗೆ ಮಾಂಸದಡುಗೆ ಮಾಡಿ ನೈವೇದ್ಯ ಮಾಡಲಾಗುತ್ತಂತೆ. ಕುರಿ, ಕೋಳಿಗಿಂತ ಆ ದೇವಿಗೆನ ಹಂದಿ ಎಂದರೆ ಬಹಳ ಪ್ರಿಯವಂತೆ.   

ಅಷ್ಟಕ್ಕೂ ದೇವಿಯ ಹೆಸರು ಪುರದಮ್ಮ ಎಂದು. ಈ ದೇವಿ ಇರುವ ಸ್ಥಳ ಹಾಸನ ಜಿಲ್ಲೆಯ ಸೊಪ್ಪಿನಹಳ್ಳಿಯಲ್ಲಿ. ಈ ದೇವಿಗೆ ಈ ಮೊದಲು ದೇವಾಲಯವೇ ಇರಲಿಲ್ಲವಂತೆ. ಇತ್ತೀಚೆಗೆ ದೇವಿಯ ಅಪ್ಪಣೆ ಕೇಳಿ ದೇವಸ್ಥಾನ ಕಟ್ಟಿದ್ದಾರೆ. ಇಲ್ಲಿ ಬಂದು ಪ್ರಾಣಿ ಬಲಿ ಕೊಟ್ಟು ಇಲ್ಲೇ ಮಾಂಸದೂಟ ತಯಾರಿಸಿ ದೇವರಿಗೆ ನೈವೇದ್ಯ ಇಡಬೇಕಂತೆ. ನಂತರ ಇಲ್ಲೆ ಸ್ವಲ್ಪ ಪ್ರಸಾದಂತೆ ಮಾಂಸವನ್ನು ಭಕ್ತರಿಗೂ ಹಂಚಿ ತಾವೂ ಸೇವಿಸಿ ಹೋಗಬೇಕಂತೆ. 

ಮತ್ತೊಂದು ವಿಶೇಷವೆಂದರೆ ಈ ದೇವಸ್ಥಾನಕ್ಕೆ ಪೂಜಾರಿಯೇ ಇಲ್ಲವಂತೆ. ಅದರಲ್ಲೂ ಮಧ್ಯರಾತ್ರಿ ಈ ದೇವಿಗೆ ಶಕ್ತಿ ಹೆಚ್ಚಾಗುವುದರಿಂದ ಜನ ಹೆಚ್ಚಾಗಿ ರಾತ್ರಿ ಹೊತ್ತು ಬಂದು ಪೂಜೆ ಮಾಡುತ್ತಾರಂತೆ. ಈ ದೇವಾಲಯ 365 ದಿನ 24 ಗಂಟೆಗಳ ಕಾಲವೂ ತೆರೆದೇ ಇರುತ್ತದಂತೆ. ದೇವರಿಗೆ ಹರಕೆ ಹೊತ್ತುಕೊಂಡರೆ ಇಷ್ಟಾರ್ಥ ಪೂರೈಕೆಯಾಗುತ್ತದೆ ಎಂದು ಭಕ್ತರು ಹರಕೆ ತೀರಿಸಲು ಪ್ರಾಣಿ ಬಲಿ ಕೊಡುತ್ತಾರೆ.