ಮತ್ತೊಮ್ಮೆ ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ ಸ್ವಾಮಿಗಳು ; ಏನದು ನೋಡಿ ?
ಇನ್ನೂ ನಮ್ಮ ಜಾಗತಿಕ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಾವು ಊಹಿಸಲೂ ಸಾಧ್ಯವಿಲ್ಲ ಹಾಗೂ ಆ ಸತ್ಯವನ್ನು ಕೂಡ ಒಪ್ಪಲು ಸಾದ್ಯವಾಗುತ್ತಿಲ್ಲ. ಆದರೆ ಈ ಬದಲಾವಣೆಗಳನ್ನು ನೋಡಿದರೆ ಒಮ್ಮೆ ಕೊಡಿ ಮಠದ ಸ್ವಾಮೀಜಿ ಅವರು ಹೇಳುತ್ತಿರುವ ಭವಿಷ್ಯದ ಕಡೆಗೆ ನಾವು ನಮ್ಮ ದಿಕ್ಕನ್ನು ಬದಲಾಯಿಸಿಕೊಂಡಿದ್ದೇವೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಇನ್ನೂ ಈ ಹಿಂದೆ ಕೂಡ ಕೊಡಿ ಮಠದ ಸ್ವಾಮೀಜಿ ಒಂದು ಸಾಂಕ್ರಾಮಿಕ ರೋಗದಿಂದ ಇಡೀ ದೇಶವೇ ಸ್ತಬ್ಧ ಆಗಲಿದೆ ಇನ್ನೂ ಆ ಕಾರಣದಿಂದಲೇ ಹೆಚ್ಚು ಸಾವು ನೋವು ಉಂಟಾಗಿ ಅದೆಷ್ಟೋ ಜನ ಕೆಲಸ ಕುಟುಂಬ ಎಲ್ಲವನ್ನೂ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು. ಇನ್ನೂ ಅವರು ಹೇಳಿದಂತೆ ಕರೋನ ಎಂಬ ವೈರಸ್ ಇಡೀ ದೇಶದ ಎಲ್ಲೆಡೆ ಹರಡಿ ನಮ್ಮ ದೇಶದ ಸ್ಥಿತಿ ಗತಿಯನ್ನೇ ಬದಲಾವಣೆ ಮಾಡಿದೆ.
ಇದರಿಂದ ಇವರ ಭವಿಷ್ಯದ ಮೇಲೆ ನಮ್ಮ ಜನಗಳಿಗೆ ಮತ್ತಷ್ಟು ನಂಬಿಕೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು . ಇನ್ನೂ ನಾವು ಕರೋನ ಸಮಸ್ಯೆಯಿಂದ ಚೇತರಿಸಿಕೊಂಡಿಲ್ಲ ಅಷ್ಟ್ರಲ್ಲಿ ಕೊಡಿ ಮಠದ ಸ್ವಾಮೀಜಿ ಅವರು ಮತ್ತೊಂದು ಎಚ್ಚರಿಕೆಯ ಘಂಟೆಯನ್ನು ಬಾರಿಸಿದ್ದಾರೆ. ಇನ್ನೂ ಇವರು ಹೇಳುವ ಪ್ರಕಾರ ತಂಪಿನ ಜಾಗ ಬಿಸಿ ಆಗಿ ಬಿಸಿಯಾದ ಜಾಗ ಎಲ್ಲವು ತಂಪಾಗುತ್ತದೆ ಎಂದು ಹೇಳಿದ್ದಾರೆ. ಅಂದರೆ ಹೆಚ್ಚಾಗಿ ಮಳೆ ಪಡೆಯುವ ಜಾಗಗಳು ಬಿಸಿಲಿನಲ್ಲಿ ಒಣಗಿ ಬರದಾಗುವುದು. ಹಾಗೂ ಹೆಚ್ಚಾಗಿ ಮಳೆ ಇಲ್ಲದ ಜಾಗಗಳು ಮಳೆಯ ಪ್ರಮಾಣದಿಂದ ಪ್ರವಾಹಕ್ಕೆ ತುತ್ತಾಗುವುದು ಎಂದು ಭವಿಷ್ಯ ನುಡಿದಿದ್ದಾರೆ.
ಇದೀಗ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆಯ ಮೇಲೂ ಕೊಡ ಭವಿಷ್ಯದ ಎಚ್ಚರಿಕೆಯ ಘಂಟೆ ಭಾರಿಸಲಾಗಿದೆ.
ಇನ್ನೂ ಇವರು ರಾಜಕೀಯದ ಭವಿಷ್ಯದಲ್ಲಿ ಒಬ್ಬ ಮಹಿಳೆಯ ಇಡೀ ದೇಶದ ಅಧಿಕಾರವನ್ನು ಕೈಗೆತ್ತು ಕೊಳ್ಳುತ್ತಾಳೆ. ಇನ್ನೂ ಆ ಅಧಿಕಾರದಿಂದ ರಾಜಕಾರಣಿಯ ರಂಗ ಯುದ್ದ ಭೂಮಿ ಆಗಲಿದೆ ಎಂದಿದ್ದಾರೆ. ಇನ್ನೂ ಪಾರ್ಲಿಮೆಂಟ್ ಎಲೆಕ್ಷನ್ ಆಗುವ ವರೆಗೂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುತ್ತಾರೆ. ಇನ್ನೂ ಪಾರ್ಲಿಮೆಂಟ್ ಎಲೆಕ್ಷನ್ ಆದ ಬಳಿಕ ಅವರ ಅಧಿಕಾರದ ಮುಂದುವರೆಕೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇನ್ನೂ ಮುಂದಿನ ವರ್ಷದಲ್ಲಿ ಪ್ರಕೃತಿಯಿಂದಲೂ ಹಾನಿ ಉಂಟಾಗಲಿದೆ,ಅದ್ರಲ್ಲೂ ಶ್ರಾವಣದಲ್ಲೇ ಹೆಚ್ಚಿನ ಮಳೆಯ ಬಗ್ಗೆ ಎಲ್ಲರಿಗೂ ಅದರ ಪ್ರಭಾವ ಅರಿವಾಗುತ್ತದೆ. ಇನ್ನು ಶ್ರಾವಣದ ಮಧ್ಯಭಾಗದಲ್ಲಿ ಕಾರ್ತಿಕದವರೆಗೂ ಮಳೆಯ ಪ್ರಭಾವ ಹೆಚ್ಚಾಗಿರುತ್ತದೆ. ಈ ಭಾರಿಯಮಳೆಯಿಂದ ಅಪಾಯ ಆಗುವ ಎಲ್ಲಾ ಲಕ್ಷಣಗಳಿದೆ ಎಂದು ಕೊಡಿ ಮಠದ ಭವಿಷ್ಯ ನುಡಿದಿದ್ದಾರೆ. ( video credit : yoyo tv kannada )




