ಗ್ಯಾಸ್ ಡಿಲೆವರಿ ಮಾಡಲು ಬಂದ ಯುವಕನಿಗೆ ಮಹಿಳೆ ಮಾಡಿದ್ದೇನು ಗೊತ್ತಾ

By Infoflick Correspondent

Updated:Friday, September 23, 2022, 20:05[IST]

ಗ್ಯಾಸ್ ಡಿಲೆವರಿ ಮಾಡಲು ಬಂದ ಯುವಕನಿಗೆ ಮಹಿಳೆ ಮಾಡಿದ್ದೇನು ಗೊತ್ತಾ

ಜಗತ್ತಿನಲ್ಲಿ ಯಾವ ಕೆಲಸವೂ ಶ್ರೇಷ್ಠವಾದ ಯಾವ ಕೆಲಸವೂ ಕೀಳಲ್ಲ .ಗ್ಯಾಸ್ ಡಿಲೆವರಿ ಮಾಡುವುದು ಸುಲಭವಾದ ಕೆಲಸವಲ್ಲ ಗ್ಯಾಸ್ ಡೆಲಿವರಿ ಮಾಡುವ ಕೆಲಸಗಾರರು ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತಾರೆ .ತಮಿಳುನಾಡಿನ ಮಹೇಶ್ ಗ್ಯಾಸ್ ಡಿಲೆವರಿ ಕೆಲಸಕ್ಕೆ ಸೇರಿಕೊಂಡಿದ್ದ,ಅವನಿಗೆ ಮದುವೆಯಾಗಿ 2 ಮಕ್ಕಳು ಕೂಡ ಇದ್ದರು . ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತಿದ್ದ ತಾನು ಡೆಲಿವರಿ ಕೊಡುವ ಗ್ಯಾಸ್ ಸಿಲಿಂಡರ್ ಗೆ 1₹ ಕೂಡ ಬಾಡಿಗೆಗೆಂದು ಕೇಳುತ್ತಿರಲಿಲ್ಲ .10-20 ಮಹಡಿಗಳು ಇದ್ದರೂ ಕೂಡ ಗ್ಯಾಸ್ ಅನ್ನು ಮನೆ ಬಾಗಿಲಿಗೆ ತಂದು ಕೊಡುತ್ತಿದ್ದ .1 ದಿನ ಮಹೇಶ್ ಬೆಳಿಗ್ಗೆ ತಡವಾಗಿ ಎದ್ದುಕೊಂಡ ಕಿಂಡಿಯನ್ನು ಮಾಡದೆ ಹಾಗೇ ಕೆಲಸಕ್ಕೆ ಹಾಜರಾದ .

ಮಹೇಶ್ ತಡವಾಗಿ ಹೋಗಿದ್ದರಿಂದ ತುಂಬಾ ಗ್ಯಾಸ್ ಗಳನ್ನು ಡೆಲಿವರಿ ಮಾಡಬೇಕಿತ್ತು .ಮೊದಲಿಗೆ ಸುಜಾತಾ ಎನ್ನುವರ ಮನೆಗೆ ಡೆಲಿವರಿ ಮಾಡಬೇಕಿತ್ತು ಆದರೆ ಸುಜಾತಾ ಅವರ ಮನೆ ಎಂಟನೇಯ ಮಹಡಿಯಲ್ಲಿತ್ತು . ಹೊಟ್ಟೆ ಹಸಿವಿನಿಂದ ಬ’ಳಲುತ್ತಿದ್ದ ಮಹೇಶ್ಗೆ ಎಂಟನೇ ಮಹಡಿ ಹತ್ತುವ ತನಕ ಜೀವವೇ ಬಾಯಿಗೆ ಬಂದಂತಾಯಿತು. ಆಯಾಸ ವಾಗಿದ್ದ ಮಹೇಶ್ ಸುಜಾತ ಅವರ ಬಳಿ ಅಮ್ಮ 1 ಲೋಟ ನೀರು ಕೊಡಿ ತುಂಬ ಆಯಾಸವಾಗಿದೆ ಎಂದು ಹೇಳಿದ ಆಗ ಸುಜಾತಾ ಕೋಪದಿಂದ ನೋಡಪ್ಪ ಈಗ ಕೊರೊ’ನಾ ಸಮಯ, ಇಂತಹ ಸಮಯದಲ್ಲಿ ನಿನಗೆ ನೀರು ಕೊಟ್ಟು ನಾವು ರೋಗ ತರಿಸಿಕೊಳ್ಳಬೇಕು . ನಿನಗೆ 1 ತೊಟ್ಟು ಕೂಡ ನೀರು ಸಿಗುವುದಿಲ್ಲ ಮೊದಲು ಇಲ್ಲಿಂದ ಜಾಗ ಖಾಲಿ ಮಾಡು ಎಂದು ರೇಗುತ್ತಾಳೆ .

ಮಹೇಶ್ ಗೆ ಅದೇ ಕಟ್ಟಡದ ನಾಲ್ಕನೇ ಮಹಡಿಯ ಸುಮಾ ಎನ್ನುವವರ ಮನೆಗೆ ಕೂಡ ಗ್ಯಾಸ್‌ ಡೆಲಿವರಿ ಮಾಡಬೇಕಿತ್ತು. ಹಾಗಾಗಿ ಮಹೇಶ್ ಗ್ಯಾಸ್ ತೆಗೆದುಕೊಂಡು ಸುಮಾ ಅವರ ಮನೆಗೆ ಸಿಲಿಂಡರ್ ತೆಗೆದುಕೊಂಡು ಹೋಗುತ್ತಾನೆ . ಅವನ ಆಯಾಸವಾದ ದೇಹವನ್ನು ನೋಡಿ ಸುಮಾ ಅವರು ಅವನಿಗೆ 1 ಲೋಟ ನೀರು ಕೊಟ್ಟು ,ಬಾಡಿಗೆಗೆ ಎಂದು ನೂರು ರೂಪಾಯಿಗಳನ್ನು ಕೊಡುತ್ತಾರೆ . ಇಂಥ ಕಷ್ಟಕಾಲದಲ್ಲಿ ಸಹಾಯವಾದ ಸುಮಾ ಅವರನ್ನು ನೋಡಿ ಮಹೇಶ್ಗೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ ಅವರ ಕಾಲಿಗೆ ಬಿದ್ದು ಧನ್ಯವಾದಗಳು ಹೇಳುತ್ತಾನೆ .

ಆಗ ಸುಮಾ ಅವರಲ್ಲಿ ಮಹೇಶ್ ಹೇಳುತ್ತಾನೆ ” ಎಂಟನೇ ಮಹಡಿಯ ಸುಜಾತ ಅವರಲ್ಲಿ ನೀರನ್ನು ಕೊಡಿ ಆಯಾಸವಾಗಿದೆ ಎಂದು ಕೇಳಿದರೂ ನನಗೆ 1 ತೊಟ್ಟು ನೀರು ಕೂಡ ಕೊಡದೆ ಕಳಿಸಿದ್ದಾರೆ ಅಂತಾದ್ರಲ್ಲಿ ನೀವು ನಾನು ನೀರನ್ನು ಕೇಳದಿದ್ದರೂ ನನಗೆ ಸಹಾಯ ಮಾಡಿದ್ದೀರಾ ನೀವು ನಿಜವಾಗಲು ದೇವತೆ ” ಎಂದು ಹೇಳುತ್ತಾನೆ . ಪ್ರತಿಯೊಬ್ಬರಿಗೂ ಜೀವವಿರುತ್ತದೆ, ಪ್ರತಿಯೊಬ್ಬರು ಮನುಷ್ಯರೇ .ಆದ್ದರಿಂದ ಕಷ್ಟಕಾಲದಲ್ಲಿ ನಾವು ಬೇರೆಯವರಿಗೆ ಸಹಾಯ ಮಾಡಿದರೆ ಅವರು ನಮ್ಮನ್ನು ದೇವರ ರೂಪದಲ್ಲಿ ಕಾಣುತ್ತಾರೆ .