ಮದುವೆ ಮುಂಚೆ ನಿಮ್ಮ ಹುಡುಗಿ ಮಾತಾಡ್ತಿಲ್ಲ ಅಂದ್ರೆ, ಬೇರೆಯವರ ಜೊತೆ ದೈಹಿಕ ಸಂಪರ್ಕ ಇದೆ ಅಂತ ಅಲ್ಲ..!

Updated: Saturday, June 12, 2021, 12:07 [IST]

    

ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಹೀಗೊಂದು ಪ್ರಶ್ನೆ ಒಬ್ಬ ಮದುವೆಯಾಗುವ ಯುವಕನಿಗೆ ಎದ್ದಿದ್ದು, ಆತ ಕೇಳಿದ ಪ್ರಶ್ನೆ ಹೀಗಿದೆ. ಪ್ರಶ್ನೆ; ನನಗೆ ಇದೀಗ 30ವರ್ಷ ಇತ್ತೀಚಿಗೆ ನಮ್ಮ ತಂದೆ ತಾಯಿ ನನಗೆ ಮದುವೆ ಮಾಡಲು ಒಂದು ಹೆಣ್ಣನ್ನು ನೋಡಿದರು. ಅದೇ ರೀತಿ ನಾನು ಕೂಡ ಮದುವೆಗೆ ಒಪ್ಪಿಕೊಂಡೆ, ಮದುವೆ ನಿಶ್ಚಯ ಆದಮೇಲೆ ಹುಡುಗಿ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿಲ್ಲ, ಒಂದು ವೇಳೆ ಹೆಚ್ಚಾಗಿ ಕ್ಲೋಸ್ ಆಗಿ ಮಾತನಾಡಿದರೆ ದೂರ ಹೋಗುತ್ತಾಳೆ, ನನ್ನನ್ನು ದೂಷಣೆ ಮಾಡುತ್ತಾಳೆ. ಹೀಗಾಗಿ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಕಾಡುತ್ತಿದೆ, ನಾನು ಮದುವೆಯಾಗುವ ಹುಡುಗಿ, ಈಗಾಗಲೇ ಯಾರ ಜೊತೆಯಾದರೂ ಸಂಪರ್ಕ ಹೊಂದಿದ್ದಾಳ,

ಅಥವಾ ಯಾರನ್ನಾದರೂ ಇಷ್ಟಪಟ್ಟಿದ್ದಾಳ, ಇನ್ನೊಬ್ಬರಿಗೆ ದೇಹ ನೀಡಿ ಅವರ ತಂದೆ-ತಾಯಿ ಒತ್ತಾಯಕ್ಕೆ ನನ್ನ ಮದುವೆ ಆಗುತ್ತಿದ್ದಾಳ, ಅಥವಾ ದೈಹಿಕ ಸುಖ ಅನುಭವಿಸಿ ಈಗ ನನ್ನ ಜೊತೆ ಮದುವೆಯಾಗುತ್ತಿದ್ದಾಳ, ನಾನೇನು ಪಾಪ ಮಾಡಿರುವ ಹುಡುಗಿ ಈ ರೀತಿ ವರ್ತಿಸುತ್ತಾರಲ್ಲ ಎಂದು ಪ್ರಶ್ನೆಗಳು ನನ್ನಲ್ಲಿ ಕಾಡುತ್ತಿವೆ.   

ಉತ್ತರ; ಪ್ರತಿಯೊಬ್ಬ ಗಂಡು-ಹೆಣ್ಣು ಮದುವೆಯಾಗುವ ಮುನ್ನ ಎಲ್ಲರಲ್ಲೂ ಬರುವ ಅನುಮಾನಗಳು ನಿಮ್ಮಲ್ಲಿ ಸಹ ಬಂದಿವೆ ಅದರಲ್ಲಿ ತಪ್ಪೇನಿಲ್ಲ, ನೀವು ಮದುವೆ ಆಗುತ್ತಿರುವ ನಿಮ್ಮ ಹುಡುಗಿ ನಿಮ್ಮ ಜೊತೆ ಜಾಸ್ತಿ ಮಾತನಾಡುತ್ತಿಲ್ಲ ಎಂದರೆ ಆಕೆ ತುಂಬಾ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಿರಬೇಕು, ಅಥವಾ ಮದುವೆಗೂ ಮುನ್ನ ಪರಪುರುಷನ ಜೊತೆ ಮಾತನಾಡಿದರೆ ಅದೊಂದು ಅಪರಾಧದ ರೀತಿ ಆಕೆಯ ಮನೋಭಾವ ಅಂತಹ ಮನಸ್ಥಿತಿ ಇಂದಲೇ ತನ್ನ ಕುಟುಂಬದಲ್ಲಿ ಬೆಳೆದಿರಬೇಕು, ಹುಡುಗ-ಹುಡುಗಿಯರು ಮದುವೆ ಮುನ್ನ ಹೊಂದಿಕೊಳ್ಳುವುದು ತುಂಬಾ ವಿರಳ, ಅರೆಂಜ್ ಮ್ಯಾರೇಜ್ ಆಗುವವರು ಮದುವೆಯಾದ ಮೇಲೆ ಹೊಂದಿಕೊಂಡು ಹೋಗುತ್ತಾರೆ,

ಹುಡುಗಿ ಸ್ವಲ್ಪ ಓಪನ್ ಆದಕೂಡಲೆ ನೀವು ಹೆಚ್ಚು ಕ್ಲೋಸ್ ಆಗಿ ಎಂದಿಗೂ ಮಾತನಾಡದಿರಿ, ಕಾರಣ ಇವನು ನನ್ನಿಂದ ಕೇವಲ ದೇಹ ಸುಖವನ್ನು ಎದುರುನೋಡುತ್ತಿದ್ದಾನೆ ಎಂದು ಆಕೆಗೆ ಆಲೋಚನೆಗಳು ಬರುತ್ತವೆ.

ಹೌದು ಆಕೆಗೆ ಆದಷ್ಟು ಸಮಯ ಕೊಡಿ ಸ್ನೇಹದಿಂದ ಮಾತನಾಡಿಸಿ, ಅವರೇ ನಿಮ್ಮನ್ನು ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗುತ್ತಾರೆ, ಕೇವಲ ಮದುವೆಯಾಗುವುದು ಎರಡು ದೇಹಗಳ ಸುಖಕ್ಕಾಗಿ ಅಲ್ಲ, ಜೀವನ ಸಾಗಿಸುವುದಕ್ಕೆ ಮತ್ತು ಜೀವನ ಬಿಡಿ ನಿಮ್ಮ ಜೊತೆ ನಿಮ್ಮ ಸಂಸಾರಕ್ಕಾಗಿ ಆಕೆ ನಿಮ್ಮ ಮನೆಗೆ ಬಂದು ನಿಮ್ಮ ಕುಟುಂಬವನ್ನು ಬೆಳಗುವ ಹೆಣ್ಣು ಮಗಳು ಆಗಿರುತ್ತಾಳೆ. ನಿಮಗೆ ಉತ್ತರ ಸಿಕ್ಕಂತಾಗಿದೆ ಎಂದು ಭಾವಿಸಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿದ ಬಳಿಕ ತಪ್ಪದೇ ಶೇರ್ ಮಾಡಿ ಧನ್ಯವಾದಗಳು..