ಸಕತ್ ವೈರಲ್ ಆಗ್ತಿರುವ ಈ ಹುಡುಗಿಯ ವಿಡಿಯೋ ನೋಡಿದ್ರಾ..? ನೋಡಿಲ್ಲ ಅಂದ್ರೆ ಈಗ್ಲೆ ನೋಡಿ

Updated: Wednesday, May 5, 2021, 09:19 [IST]

ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶಾದ್ಯಂತ ಈ ಕರೋನವೈರಸ್ ಹಾವಳಿ ಹೆಚ್ಚಾಗುತ್ತಿದೆ, ಹಾಗೇನೇ ದಿನೇದಿನೇ ಸೋಂಕಿತರು ಹೆಚ್ಚಾಗುತ್ತಲೇ ಇದ್ದು, ಸಾವಿನ ಸಂಖ್ಯೆ ಏರಿಕೆಯಲ್ಲಿ ನಡೆದಿದೆಯೆಂದು ದಿನೇದಿನೇ ವರದಿ ಸಹ ಆಗುತ್ತಿದೆ. ಹೌದು ಈ ಕೋವಿಡ್ ಕುರಿತಾಗಿ ಮತ್ತು ರಾಜ್ಯ ಸರ್ಕಾರ ಈ ಕರೋನವೈರಸ್ ತಡೆಯುವಲ್ಲಿ ಎಂತಹ ಕ್ರಮಗಳನ್ನು ಜಾರಿಗೊಳಿಸಿದೆ, ಮತ್ತು ಅದೇನು ಕೆಲಸ ಮಾಡುತ್ತಿದ್ದೀರಾ, ಎಂದು ಬಿಜೆಪಿ ಸರ್ಕಾರಕ್ಕೆ ಮತ್ತು ಯಡಿಯೂರಪ್ಪನವರಿಗೆ ಈ ಹುಡುಗಿ ತುಂಬಾ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ಧಾರೆ.   

ಹೌದು ತುಂಬಾ ಸಿಂಪಲ್ಲಾಗಿಯೇ ಈ ಹುಡುಗಿ ಈಗಿನ ಮೆಡಿಕಲ್ ಮಾಫಿಯಾದ ಬಗ್ಗೆ ವಿವರಣೆ ನೀಡಿದ್ದು, ಯಡಿಯೂರಪ್ಪನವರಿಗೆ ಮೊನ್ನೆ ಕೊರೋನಾ ಬಂತು ಬಂದ ಮೂರೇ ದಿನಕ್ಕೆ ಹೋಯಿತು, ಅಷ್ಟೊಂದು ಇಮ್ಮುಣಿಟಿ ಪವರ್ ನಿಮ್ಮ ಹತ್ತಿರ ಇದೆಯಾ ಸರ್ ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ. ಬಡವರು ದಿನ ಈ ಕೊರೊನಾ ಬಂದು ಸಾಯುತ್ತಿದ್ದಾರೆ. ಹೌದು ಲಕ್ಷ ಲಕ್ಷ ಹಣವನ್ನು ಕಟ್ಟುತ್ತಿದ್ದೇವೆ ಆದರೆ ನಮಗೆ ಹೆಣಗಳು ಮಾತ್ರ ಸಿಗುತ್ತಿವೆ ನಿಮ್ಮ ಸರ್ಕಾರ ಏನು ಮಾಡುತ್ತಿದೆ ಎನ್ನುವ ನಿಟ್ಟಿನಲ್ಲಿ ಪ್ರಶ್ನೆ ಮಾಡಿದ್ದಾಳೆ.

19, 20 ವರ್ಷದ ಯುವಕರು ಸಹ ಸಾಯುತ್ತಿದ್ದಾರೆ, ಇದು ಸಾಯುವ ವಯಸ್ಸಾ ಎಂದು ಹುಡುಗಿ ತನ್ನಲ್ಲಿರುವ ಆಕ್ರೋಶವನ್ನು ಹೊರಹಾಕಿದ್ದಾರೆ.ಅಷ್ಟಕ್ಕೂ ಯುವತಿಯ ಈ ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದ್ದು, ನೀವಿನ್ನು ನೋಡಿಲ್ಲ ಎಂದರೆ ಈಗಲೇ ಈ ಹುಡುಗಿಯ ವಿಡಿಯೋ ನೋಡಿ, ಈಕೆ ಮಾತು ಕೇಳಿ ನಿಜ ಎನ್ನಿಸಿದರೆ ಶೇರ್ ಮಾಡಿ, ತುಂಬಾನೇ ವೈರಲ್ ಮಾಡಿ...