ಇನ್ಮೇಲೆ ಕಾರು ಮಾರುವವರಿಗೆ ಬಂತು ಹೊಸ ರೂಲ್ಸ್. !! ಕೇಂದ್ರದ ಆದೇಶ

ಇನ್ಮೇಲೆ ಕಾರು ಮಾರುವವರಿಗೆ ಬಂತು ಹೊಸ ರೂಲ್ಸ್. !! ಕೇಂದ್ರದ ಆದೇಶ

ನಮ್ಮ ದೇಶದ ಎಲ್ಲಾ ನಾಲ್ಕು ಚಕ್ರದ ವಾಹನಗಳಿಗಾಗಿ ಹೆದ್ದಾರಿಯಲ್ಲಿ ಟೋಲ್ ತೆರಿಗೆ ಪಾವತಿ ಕಡ್ಡಾಯವಾಗಿದೆ. ಆದರೆ ಕೆಲವರು ಈ ನಿಯಮ ಪಾಲನೆ ಮಾಡದೆ ಟೋಲ್ ತೆರಿಗೆ ಬಾಕಿಯಾಗಿಟ್ಟಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಈಗ ಟೋಲ್ ಕಟ್ಟಾಳುಗಳನ್ನು ತಡೆಗಟ್ಟಲು ಹೊಸ ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತಂದಿದೆ.

ಈ ಹೊಸ ನಿಯಮದ ಪ್ರಕಾರ, ನಿಮ್ಮ ವಾಹನದ ಮೇಲಾದ ಯಾವುದೇ ಟೋಲ್ ಬಾಕಿ ಇದ್ದರೆ, ನೀವು ಆ ವಾಹನವನ್ನು ಮಾರಾಟ ಮಾಡುವಂತಿಲ್ಲ. ಇನ್ನೂ ಹೆಚ್ಚಾಗಿ, ಈ ವಾಹನವನ್ನು ಬೇರೊಬ್ಬರ ಹೆಸರಿಗೆ ವರ್ಗಾವಣೆ ಮಾಡಲು ಕೂಡ ಸಾಧ್ಯವಿಲ್ಲ. ಟೋಲ್ ಬಾಕಿ ತೆರಿಗೆ ಪಾವತಿಸಿದ ನಂತರ ಮಾತ್ರ RC (Registration Certificate) ವರ್ಗಾವಣೆ ಅಥವಾ ಮಾರಾಟ ಪ್ರಕ್ರಿಯೆ ಮುಂದುವರೆಯಬಹುದು. ಸಾರಿಗೆ ಇಲಾಖೆಯು ಈ ಎಲ್ಲಾ ಬಾಕಿ ಮೊತ್ತಗಳ ಪರಿಶೀಲನೆ ಮಾಡಲಿದೆ.

ಅದೇ ರೀತಿಯಲ್ಲಿ, ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಬಾಕಿ ಮೊತ್ತವಿದ್ದರೆ, RC ವರ್ಗಾವಣೆ ಅರ್ಧಕ್ಕೆ ನಿಲ್ಲಿಸಲಾಗುತ್ತದೆ. ಈ ಕ್ರಮದಿಂದ ಟೋಲ್ ತೆರಿಗೆ ವಂಚನೆಯನ್ನ ತಡೆಗಟ್ಟಿ, ಎಲ್ಲಾ ವಾಹನಗಳು ನಿಯಮಬದ್ಧವಾಗಿ ಟೋಲ್ ಪಾವತಿ ಮಾಡುವಂತೆ ಮಾಡಲು ಯೋಜನೆ ರೂಪಿಸಲಾಗಿದೆ. ಟೋಲ್ ಬಾಕಿ ಹೊಂದಿರುವ ವಾಹನಗಳಿಗೆ 30 ದಿನಗಳೊಳಗೆ ಎಲೆಕ್ಟ್ರಾನಿಕ್ ಚಾನೆಲ್ ಮೂಲಕ ಪಾವತಿ ಮಾಡುವ ಅವಕಾಶ ನೀಡಲಾಗಿದೆ.

ನೀವು ಟೋಲ್ ತೆರಿಗೆ ಪಾವತಿ ಮಾಡದೇ ಇದ್ದರೆ, ವಾಹನಕ್ಕೆ NOC (No Objection Certificate) ಸಿಗುವುದಿಲ್ಲ. RC ಅಪ್ಡೇಟ್ ಅಥವಾ ಹೊಸ ದಾಖಲೆಗಳಂತು ನೀಡಲಾಗದು. ಸಾರಿಗೆ ವಲಯದಲ್ಲಿ ಪಾರದರ್ಶಕತೆ ಮತ್ತು ಶಿಸ್ತು ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಜಾರಿಗೆ ತರಲಾಗಿದೆ.

ನೀವು ಕೂಡ ಟೋಲ್ ಬಾಕಿ ಹಣವನ್ನು ಬಾಕಿಯಾಗಿಟ್ಟಿದ್ದರೆ, ತಕ್ಷಣ ಪಾವತಿ ಮಾಡಿ — ಇಲ್ಲದಿದ್ದರೆ, ವಾಹನ ಸಂಬಂಧಿತ ಎಲ್ಲಾ ಪ್ರಕ್ರಿಯೆಗಳಲ್ಲಿ ಅಡಚಣೆ ಬರುತ್ತೆ. ವಾಹನ ಮಾಲೀಕರಿಗೆ ಇದು ಎಚ್ಚರಿಕೆ ಆಗಲಿ!