ಇತ್ತೀಚೆಗಷ್ಟೇ ನಟಿ ಅಭಿನಯಾ ಗೆ ಹೈ ಕೋರ್ಟ್ ವರದಕ್ಷಿಣೆ ಕಿರುಕಳ ಆರೋಪದ ಮೇಲೆ ಎರಡು ವರ್ಷದ ಜೈಲ್ ಶಿಕ್ಷೆ ವಿಧಿಸಿದೆ . ಈ ಸಂಬಂಧ ಅವರ ಅತ್ತಿಗೆ ಲಕ್ಷ್ಮೀದೇವಿ ಅವರು ಅಭಿನಯ ಮೇಲೆ ಗಂಭೀರವಾದ ಆರೋಪ ಹೊರಿಸಿದ್ದಾರೆ .ತೀರ್ಪು ಪ್ರಕಟವಾದ ಬಳಿಕ ಲಕ್ಷ್ಮಿದೇವಿಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಅಭಿನಯಾ ಕುಟುಂಬದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ನನ್ನನ್ನು ಕೂಡ ಅದರಲ್ಲಿ ತಳ್ಳಲು ಅವರು ಪ್ರಯತ್ನಿಸಿದ್ದರು’ ಎಂದು ಲಕ್ಷ್ಮಿದೇವಿ ಗಂಭೀರ ಆರೋಪ ಮಾಡಿದ್ದಾರೆ.
ಲಕ್ಷ್ಮೀದೇವಿ ಅತ್ತಿಗೆ ಆರೋಪದ ಬಗ್ಗೆನಟಿ ಅಭಿನಯ ಮಾಧ್ಯಮದ ಮುಂದೆ ಬಂದು ಏನೆಂದು ಹೇಳಿದ್ದಾರೆ ಇಲ್ಲಿ ನೋಡಿ ನನ್ನ ಅತ್ತಿಗೆ ಹೇಳ್ತಿರೋದೆಲ್ಲಾ ಅಷ್ಟು ಸುಳ್ಳು, ನಾವು ಯಾವ್ದೇ ತಪ್ಪು ಮಾಡಿಲ್ಲ, ನಾವು ಅಷ್ಟು ಕಿರುಕುಳ ಕೊಟ್ಟಿದ್ದರೆ ಧರ್ಮಸ್ಥಳಕ್ಕೆ ಬಂದು ಅಪ್ಪನ ಮೇಲೆ ಆಣೆ ಮಾಡಲಿ. ಇವರು ಈ ತರ ಮಾಡತ್ತಿದ್ದರು ಅಂತಾ ಹಣೆ ಮಾಡಲಿ. ನಾವು ಅಷ್ಟು ಅನುಕೂಲವಾಗಿರೋರು ಒಂದು ಬಕೆಟ್ ನೀರು ಕೊಟ್ಟು, ರೊಟ್ಟಿ ಕೊಡತ್ತೀವಾ, ಅದರಿಂದ ನಮಗೆ ಏನು ಬರುತ್ತೇ, ನಾನು ಒಂದು ಹೆಣ್ಣುಮಗಳಾಗಿದ್ದೀನಿ ಎಂದಿದ್ಧಾರೆ.
ನಾನೂ ಮನೆಯಲ್ಲೇ ಇರಲಿಲ್ಲ ಕಿರುಕುಳ ಹೇಗೆ ಕೊಡೋಕೆ ಸಾಧ್ಯ? ನ್ಯಾಯಕ್ಕಾಗಿ ನಾವು ಕಾಯ್ತಿದ್ದೇವೆ ಎಂದಿದ್ದಾರೆ. ನಾನು ಒಬ್ಬ ಹೆಣ್ಣುಮಗಳು.. ನಾನು ಈ ತರ ಆಗಿದ್ರೆ ಇಂಡಸ್ಟ್ರಿಯಲ್ಲಿ ಇರ್ತಾನೆ ಇರಲಿಲ್ಲ, ನಾನು ಮದುವೆ ಆಗಿ ಬಂದಮೇಲೆ ನನಗೆ ಕೆಲವೊಂದು ವಿಷಯಗಳು ನನಗೆ ಗೋತ್ತಿಲ್ಲ.35 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ನಾವೇನೂ ಪ್ರಭಾವಿಗಳಲ್ಲ , ಅಂತ ಪ್ರಭಾವಿಗಳಾಗಿದ್ರೆ ಕೇಸ್ನ್ನೇ ಮುಚ್ಚಿ ಹಾಕತ್ತಿದ್ದೀವಿ. ಆದ್ರೆ ಕೇಸ್ ನಡೆಯಲಿ, ನ್ಯಾಯ ಹೊರಬರಲಿ ಅಂತ ಕೇಸ್ ನಡೆಸುತ್ತಿದ್ದೀವಿ. ಅಷ್ಟು ಕೀಳು ಮಟ್ಟಕ್ಕೆ ನಾವು ಇಳಿದಿಲ್ಲ ಎಂದು ಹೇಳಿದ್ದಾರೆ. ( video credit : btv news kannada )