ಕಿಚ್ಚ ಸುದೀಪ್ ನನ್ನ ಆಪ್ತ ಸ್ನೇಹಿತ ಎಂದ ದರ್ಶನ್ : ಕ್ರಾಂತಿ ಪ್ರಮೋಷನ್ ಗೆ ಕಿಚ್ಚ ಸುದೀಪ್ ಯಾವಾಗ ಬರುತ್ತಾರೆ ಇಲ್ಲಿ ನೋಡಿ ?

ಕಿಚ್ಚ ಸುದೀಪ್ ನನ್ನ ಆಪ್ತ ಸ್ನೇಹಿತ ಎಂದ ದರ್ಶನ್ : ಕ್ರಾಂತಿ ಪ್ರಮೋಷನ್ ಗೆ ಕಿಚ್ಚ ಸುದೀಪ್ ಯಾವಾಗ ಬರುತ್ತಾರೆ ಇಲ್ಲಿ ನೋಡಿ ?

ಹೌದು ಗೆಳೆಯರೇ ಸುಮಾರು ದಿವಸಗಳಿಂದ ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದಾಗ ಬೇಕೆಂದು ಅವರ ಎಲ್ಲ ಅಭಿಮಾನಿಗಳು ಬಯಸುತ್ತಿದ್ದರು . ಈಗ ಅದಕ್ಕೆ ಕಾಲ ಕೂಡಿ ಬಂದಿದೆ ಅಂತ ಅನಿಸುತ್ತೆ . ಒಂದು ಕಾಲದಲ್ಲಿ ಇವರಿಬ್ಬರು ಎರಡು ಜೇವ ಒಂದೇ ದೇಹ ಅಂತೇ ತುಂಬಾ ಕ್ಲೋಸ್ ಫ್ರೆಂಡ್ ಆಗಿದ್ದರು . 

''ನನಗೆ 'ಮೆಜೆಸ್ಟಿಕ್' ಸಿನಿಮಾ ಸಿಗಲು ಕಾರಣ ರಾಮಮೂರ್ತಿ, ಪಿ.ಎನ್.ಸತ್ಯ ಹಾಗೂ ರಮೇಶ್'' ಎಂದು ಹೇಳಿ ಸುದೀಪ್ ನೀಡಿದ್ದ ಸಂದರ್ಶನದ ಲಿಂಕ್ಅನ್ನು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸುದೀಪ್ ನೀಡಿರುವ ಸಂದರ್ಶನವನ್ನು ಉಲ್ಲೇಖಿಸಿ, ''ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ ನನಗೆ ಅವಕಾಶ ಸಿಗಲು ಸುದೀಪ್ ತಾವೇ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. 

ಮಾಡದಿರುವ ಕೆಲಸವನ್ನು ಮಾಡಿದ್ದೀನಿ ಎಂದು ಹೇಳುವುದು ಎಷ್ಟು ಸರಿ?'' ಎಂದು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಗುಡುಗಿದ್ದರು. ''ಇದೇ ಮೊದಲ ಬಾರಿಗೆ ಈ ವಿಡಿಯೋ ನೋಡಿದಾಗ ನನ್ನ ಮನಸ್ಸಿಗೆ ನೋವಾಗಿದ್ದಂತೂ ನಿಜ. ಈ ಹೇಳಿಕೆ ನೀಡಿದ್ದೇಕೆ? ಸುದೀಪ್ ರವರು ಕ್ಲಾರಿಟಿ ನೀಡಲಿ'' ಅಂತಲೂ ದರ್ಶನ್ ಬರೆದುಕೊಂಡಿದ್ದರು. ಸಂದರ್ಶನವೊಂದರಲ್ಲಿ ದರ್ಶನ್‌ಗೆ ಸಿಕ್ಕ ಮೊದಲ ಚಾನ್ಸ್ ಕುರಿತು ಸುದೀಪ್ ನೀಡಿದ್ದ ಹೇಳಿಕೆ ದರ್ಶನ್‌ರನ್ನ ಕೆರಳಿಸಿತ್ತು. ಇದರಿಂದ ಇಬ್ಬರ ಮಧ್ಯೆ ಕಂದಕ ಸೃಷ್ಟಿಯಾಗಿತ್ತು. ಅಲ್ಲಿಂದ ಇಬ್ಬರ ನಡುವೆ ವೈಮನಸ್ಯ ಶುರುವಾಗಿತ್ತು. ಆದ್ರೆ ಇದೀಗ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಸಂದರ್ಶನದಲ್ಲಿ ಸುದೀಪ್ ಜೊತೆ ಒಂದಾಗಲು ಮನಸ್ಸಿದೆ ಎನ್ನುವ ಕುರಿತಾಗಿ ಮಾತನಾಡಿದ್ದಾರೆ.ಇನ್ನು ಮುಂದಾದರೂ ಇಬ್ಬರೂ ಒಂದಾದರೆ ಅಭಿಮಾನಿಗಳಿಗೆ ಮಾತ್ರವಲ್ಲ.. ಕನ್ನಡ ಚಿತ್ರರಂಗಕ್ಕೂ ಸಂತೋಷವೇ..!

ಇನ್ನು ಸುದೀಪ್ ಅವರು ಕ್ರಾಂತಿ ಪ್ರಮೋಷನ್ ಗೆ ದರ್ಶನ ಜೊತೆ ಕಾಣಿಸಕೊಳ್ಳಬಹುದು  ಎಂದು ಗಾಳಿ ಸುದ್ದಿ ಹರಡಿದೆ . ಇದು ನಿಜವಾದರೆ ಅವರಿಬ್ಬರ ಅಭಿಮಾನಿಗಳಿಗೆ ತುಂಬಾ ಸಂತೋಷವಾಗುತ್ತದೆ . ನಾವೆಲ್ಲರೂ ದರ್ಶನ ಮತ್ತು ಸುದೀಪ್ ಮತ್ತೆ ಒಂದಾಗಲಿ ಎಂದು ಬಯೋಸೋಣ (video credit :ss tv news )