ಬಿಗ್ ನ್ಯೂಸ್ : ರಾಕಿಂಗ್ ಸ್ಟಾರ್ ಯಶ್ ಗೆ ನೋಟಿಸ್ - ಯಾಕೆ ಗೊತ್ತೇ?

Updated: Wednesday, January 13, 2021, 09:38 [IST]

ರಾಕಿಂಗ್ ಸ್ಟಾರ್ ಯಶ್ ಗೆ ನೋಟಿಸ್ - ಯಾಕೆ ಗೊತ್ತೇ?

 

ಕೆಜಿಎಫ್2 ಚಿತ್ರದ ಟೀಸರ್ ಬಿಡುಗಡೆ ಆಗಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ. ಒಟ್ಟು 2 ನಿಮಿಷ 16 ಸೆಕೆಂಡ್‌ ವಿಡಿಯೋ ಇದ್ದು ಇದರರಲ್ಲಿ ರಾಕಿ ಬಾಯ್‌ ಯಶ್‌, ಅಧೀರ ಸಂಜಯ್‌ ದತ್‌, ರಮೀಕಾ ಸೇನ್‌ ರವೀನಾ ಟಂಡನ್‌, ರೀನಾ ದೇಸಾಯಿ ಶ್ರೀನಿಧಿ ಶೆಟ್ಟಿ ಪಾತ್ರವನ್ನು ತೋರಿಸಲಾಗಿದೆ. ವಿಶೇಷವಾಗಿ ರಾಕಿ ಬಾಯ್‌ ಮಿಷನ್‌ ಗನ್‌ನಿಂದ ಜೀಪುಗಳ ಮೇಲೆ ಫೈರ್‌ ಮಾಡಿದ್ದು ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್‌ ಮಾಡಿದ ಕೆಂಪಾದ ಗನ್‌ನಿಂದ ರಾಕಿ‌ ಸಿಗರೇಟ್‌ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.

 
 ಈಗಾಗಲೇ  130 ಮಿಲಿಯನ್ ವೀವ್ಸ್ ದಾಟಿ ಪ್ರಪಂಚಾದ್ಯಂತ ಸುದ್ದಿ ಮಾಡಿದೆ. ಈಗ ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ ಯಶ್ ಗೆ ನೋಟೀಸ್ ಜಾರಿ ಮಾಡಲಾಗಿದೆ. ಯಶ್ ಈ ಟೀಸರ್ ನಲ್ಲಿ ಸಿಗರೆಟ್ ಸೇದುವ ದೃಶ್ಯವಿದೆ. ನಿಯಮದ ಪ್ರಕಾರ ಸಿಗರೆಟ್ ಸೇದುವ ದೃಶ್ಯವಿದ್ದರೆ ಕೆಳಗೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಹಾಕಬೇಕು. ಆದರೆ ಟೀಸರ್ ನಲ್ಲಿ ಹಾಕಿಲ್ಲ.


ಇದು ಧೂಮಪಾನ ಪ್ರಚೋದಿಸುತ್ತಿದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹಾಗಾಗಿ ಈ ದೃಶ್ಯವನ್ನು ತೆಗೆದು ಹಾಕುವಂತೆ ಹೇಳಿದೆ.

ಯಶ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ. ಸಿನಿಮಾದಲ್ಲಿ ಸಿಗರೇಟ್ ಸೇದುವ ದೃಶ್ಯದಿಂದ ಅಭಿಮಾನಿಗಳು, ಯುವ ಜನತೆ ಅದನ್ನೇ ಅನುಸರಿಸುವ ಅಪಾಯವಿದೆ. ಇದನ್ನು ತೆಗೆದು ಹಾಕಿ ಎಂದು ಇಲಾಖೆ ಹೇಳಿದೆ.