ಬಿಗ್ಬಾಸ್ ಶೋಗೆ ಡೇಟ್ ಫಿಕ್ಸ್ - ಯಾರ್ಯಾರು ಸ್ಪರ್ಧಿಗಳು ಗೊತ್ತೇ ?

Updated: Tuesday, July 7, 2020, 21:03 [IST]

ಬಿಗ್ಬಾಸ್ ಶೋಗೆ ಡೇಟ್ ಫಿಕ್ಸ್ - ಯಾರ್ಯಾರು ಸ್ಪರ್ಧಿಗಳು ಗೊತ್ತೇ ?

ಬಿಗ್ಬಾಸ್ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ. ಮತ್ತು ಅಷ್ಟೇ ವಿವಾದಾತ್ಮಕ ಶೋ. ಸುಮಾರು 16 ಜನ ಸ್ಪರ್ಧಿಗಳು ಒಂದು ಮನೆಯಲ್ಲಿ 100 ದಿನಗಳವರೆಗೆ ಇರಲು ವಿವಿಧ ಟಾಸ್ಕ್ ನಲ್ಲಿ ಗೆಲ್ಲಬೇಕಾಗುತ್ತದೆ. ಯಾರು ಕೊನೆಯಲ್ಲಿ ಉಳಿದು ಗೆಲ್ಲುವರೋ ಅವರೇ ವಿನ್ ಆಗುತ್ತಾರೆ. ಬಿಗ್ಬಾಸ್ ಎಷ್ಟು ವಿವಾದದಿಂದ ಕೂಡಿದರೂ ಫ್ಯಾಮಿಲಿ ಜನ ಕೂತು ನೋಡದಂತೆ ಇದ್ದರೂ ಇದಕ್ಕೆ ವೀಕ್ಷಕರು ಹೆಚ್ಚು ಇರುವುದು ಸೋಜಿಗ !

      

Advertisement

ಈಗ ಕೋವಿಡ್ 19 ನಿಂದ ಸಿನಿಮಾ, ಕಿರುತೆರೆಯ ಶೋಗಳಿಗೆ ಹಿನ್ನೆಡೆ ಲಭಿಸಿದೆ. ಜನರು ಓಟಿಟಿ ವೇದಿಕೆಗಳತ್ತ ವಾಲುತ್ತಿದ್ದಾರೆ. ಇದನ್ನು ಮನಗಂಡಿರುವ ಟಿವಿ ಚಾನಲ್ ನವರು ಮತ್ತೆ ಜನರನ್ನು ಟಿವಿಯತ್ತ ವಾಲಿಸಲು ಅದೇ ಜನಪ್ರಿಯ ಬಿಗ್ಬಾಸ್ ನಂತಹ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದ್ದಾರೆ. ಈಗ ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಮತ್ತೆ ಶುರುವಾದಲಿದೆ.

      

ಅಕ್ಟೋಬರ್ ಕೊನೆಯ ಹೊತ್ತಿಗೆ ಬಿಗ್ಬಾಸ್ ಹಿಂದಿ ಸರಣಿ ಶುರುವಾಗಲಿದೆ. ಇದರಲ್ಲಿ 16 ಜನ ಸೆಲೆಬ್ರಿಟಿಗಳು, 3 ಜನ ಸಾಮಾನ್ಯ ಜನರು ಭಗವಹಿಸಲಿದ್ದಾರೆ. ಈಗಾಗಲೇ 30 ಜನ ಸ್ಪರ್ಧಿಗಳನ್ನು ಆನ್ಲೈನ್ ಮೂಲಕ ಆಯ್ಕೆ ಮಾಡಲಾಗಿದೆ. ಈ ಸಲ ಬಿಗ್ಬಾಸ್ ಮನೆ ವಿಶೇಷದಿಂದ ಕೂಡಿರುತ್ತದೆ. ದಟ್ಟ ಕಾಡಿನ ಸ್ಪರ್ಶ ಕೊಡಲಾಗಿದೆ. ಸ್ಪರ್ಧಿಗಳು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಬೇಕು.  ಮನೆಯ ಒಳಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

      

ಈ ಬಾರಿ ಸ್ಪರ್ಧಿಸುವ ಸಂಭಾವಿತರು - ನಾಗಿಣ್ -  4 ನಟಿ ಜಾಸ್ಮಿನ್ ಬಾಸಿನ್, ಆಕಾಂಕ್ಷಾ ಪುರಿ, ಅಕಿಷಾ ಪವರ್, ಆಂಚಲ್ ಕುರಾನಾ, ಮಾನಸಿ ಶ್ರೀ ವಾಸ್ತವ್, ಶಾಂತಿಪ್ರಿಯಾ ಮುಂತಾದ ಸೆಲೆಬ್ರಿಟಿಗಳು ಇರಲಿದ್ದಾರೆ.