ದೆವ್ವದ ಮೇಲೆ ದೂರು ನೀಡಿದ ಮಹಿಳೆ.? ಕಾರಣ ಕೇಳಿದರೆ ಬಿದ್ದು-ಬಿದ್ದು ನಗ್ತೀರಾ.!

Updated: Thursday, October 1, 2020, 22:15 [IST]

ದೆವ್ವದ ಮೇಲೆ ದೂರು ನೀಡಿದ ಮಹಿಳೆ.? ಕಾರಣ ಕೇಳಿದರೆ ಬಿದ್ದು-ಬಿದ್ದು ನಗ್ತೀರಾ.!

ಇದೊಂದು ವಿಚಿತ್ರ ಪ್ರಕರಣ.ಪ್ರಪಂಚದಲ್ಲಿ ಎಂತೆಂಥ ಹುಚ್ವರಿರುತ್ತಾರೆಂದರೆ ಅಯ್ಯೋ ರಾಮ! 

 

Advertisement

ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಪ್ರಪಂಚವನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ದೇವರ ವಿರುದ್ದ ದಾವೆ ಹೂಡಿದ್ದ.ಅದು ಕೂಡ ನಮ್ಮ ಕೋರ್ಟ್ ಒಪ್ಪಿಕೊಂಡು ನಂತರ ಆ ಅರ್ಜಿಯನ್ನು ತಿರಸ್ಕರಿಸಿತ್ತು.

ಈಗ ಮೊನ್ನೆ ಗೈಡೇವಾಲಿ ಸಡಕ್ ಪ್ರದೇಶದ ಮಮತ ಎಂಬ ಮಹಿಳೆ ದೆವ್ವಗಳ ವಿರುದ್ದ ದೂರು ನೀಡಿದ್ದಾಳೆ.ದೆವ್ವಗಳು ನಾವು ಮಲಗಿದ್ದಾಗ ಬಂದು ರೂಮಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತವೆ. ಮತ್ತು ಟಿ.ವಿ.ನೋಡುವಾಗ ಟಿ.ವಿ.ಯಲ್ಲಿ ಬರುವ  ಪಾತ್ರಧಾರಿಗಳೇ ದೆವ್ವವಾಗಿ ಎದುರಿಗೆ ಬರುತ್ತವೆ ಎಂದು ಕಂಪ್ಲೇಟ್ ಮಾಡಿದ್ದಾಳೆ.

 

Advertisement

 ಇದಕ್ಕೆಲ್ಲ ನೆರೆಮನೆಯವರೇ ಎಂದೂ ದೂರಿದ್ದಾಳೆ. ಈ ಕಂಪ್ಲೇಂಟ್ ಪಡೆದ ಪೋಲಿಸರ ಸ್ಥಿತಿ ಹೇಗಾಗಿರಬೇಡ. ದೆವ್ವ ಹಿಡಿಯಲು ಹೋದರೆ ಜ್ವರ ಬಂದು ಕೆಲಸಕ್ಕೇ ರಾಜೀನಾಮೆ ಕೊಡಬೇಕಾಗಿ ಬರಬಹುದು. ಮಹಿಳಾ ಸಂಘಗಳೆಲ್ಲ ,ಮತ್ತು ವಿರೋಧ ಪಕ್ಷಗಳು ದೆವ್ವ ಗಳನ್ನು ಹಿಡಿಯದ ಸರಕಾರ ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದಾವು. 

ಅದಕ್ಕೇ ಹೇಳುವುದು ವಿಜ್ಞಾನ ಬೆಳೆದಂತೆಲ್ಲಾ ಜನ ಮೂಢರಾಗುತ್ತಿದ್ದಾರೆ ಎಂದು.