ಗಂಡನಿಲ್ಲದ ಮಹಿಳೆಯ ಹೋಟೆಲ್ ನಲ್ಲಿ ಫ್ರೀ ಆಗಿ ಊಟ ಮಾಡುತ್ತಿದ್ದ ಪೋಲಿಸ್ ಮಾಡಿದ ಕೆಲಸವೇನು ಗೊತ್ತಾ?

Updated: Wednesday, January 13, 2021, 19:23 [IST]

ಇದೊಂದು ನೈಜ ಘಟನೆ. ಇದರ ಬಗ್ಗೆ ಕೇಳಿದರೆ ನಿಜಕ್ಕೂ ನೀವು ಭಾವುಕರಾಗುತ್ತಿರ. ಸುಲೋಚನ ಮತ್ತು ನಾಗೇರೆಡ್ಡಿ ದಂಪತಿಗಳಾದ ಇವರು ಆಂದ್ರಪ್ರದೇಶದಲ್ಲಿ ವಾಸ ಮಾಡುತ್ತಿದ್ದರು. ಇವರಿಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಇನ್ನೂ ಈ ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಡಬೇಕೆಂಬುದು ಸುಲೋಚನ, ನಾಗೇರೆಡ್ಡಿಯ ಕನಸಾಗಿತ್ತು. ಆದರೆ ಒಂದು ದಿನ ನಾಗೇರೆಡ್ಡಿಯವರು ಕೂಲಿ ಕೆಲಸಕ್ಕೆ ಹೋಗಿ ಬರುವಾಗ ಹೃದಯಾಘಾ’ತ ಸಂಭವಿಸಿ ಇಹಲೋಕವನ್ನು ತ್ಯಜಿಸುತ್ತಾರೆ. ಗಂಡನನ್ನು ಕಳೆದುಕೊಂಡ ಸುಲೋಚನ ಅವರು ದಿನನಿತ್ಯ  ಹೆಣ್ಣುಮಕ್ಕಳ ಜೀವನದ ಬಗ್ಗೆ ಯೋಚಿಸುತ್ತಾ ಕಣ್ಣೀರು ಹಾಕುತ್ತಿರುತ್ತಾರೆ.   

ಕೆಲವು ದಿನಗಳು ಕಳೆದಂತೆ ನಾನು ದಿನನಿತ್ಯ ಹೀಗೆ ಯೋಚನೆ ಮಾಡುತ್ತಾ ಕೂತರೆ ಜೀವನ ನಡೆಯಲು ಹೇಗೆ ಸಾಧ್ಯ ಎಂದು ಅರ್ಥಮಾಡಿಕೊಂಡ ಸುಲೋಚನ ಅವರು ರಸ್ತೆಯ ಬದಿ ಹೋಟೆಲ್ ಮಾಡೋಣ ಎಂದು ಯೋಚಿಸುತ್ತಾರೆ. ನಂತರ ತನ್ನ ಒಡವೆಗಳನ್ನು ಮಾರಿ ಒಂದು ತಳ್ಳುವ ಗಾಡಿಯನ್ನು ಖರೀದಿ ಮಾಡಿ ಊಟವನ್ನು ತಯಾರಿಸಿ ರಸ್ತೆಯ ಬದಿಯಲ್ಲಿ ಮಾರಲು ಶುರುಮಾಡುತ್ತಾರೆ. ದಿನದಿಂದ ದಿನಕ್ಕೆ ವ್ಯಾಪಾರವೂ ಕೂಡ ಸ್ವಲ್ಪಮಟ್ಟಿಗೆ ಚೆನ್ನಾಗಿ ಆಗುತ್ತದೆ. ಇನ್ನೂ ಒಂದು ದಿನ ರಾತ್ರಿ ಸುಮಾರು 10.30 ರಲ್ಲಿ ಸುಲೋಚನ ಅವರ ಹೊಟೇಲ್ ಗೆ ದಿಡೀರ್ ಎಂದು ಪೊಲಿಸ್ ವ್ಯಕ್ತಿ ಒಬ್ಬರು ಬಂದು ಅವಾಜ್ ಹಾಕಲು ಶುರುಮಾಡುತ್ತಾನೆ.     

ಹೌದು ರಾತ್ರಿ 10.30 ಆದರೂ ಇನ್ನೂ ವ್ಯಾಪಾರ ಮಾಡುತ್ತಿದ್ದೀಯಾ ಯಾರು ‌ನಿನಗೆ ಪರಮೀಷನ್ ಕೊಟ್ಟಿದ್ದು ಎಂದು ರೇಗಾಡುತ್ತಾ ಅಲ್ಲಿದ್ದ ಜನಗಳೆಲ್ಲ ನಿಂತು ನೋಡುವ ಹಾಗೆ ಜಗಳ ಮಾಡಿ  ಹೋಟೆಲ್ ಅನ್ನು ಕ್ಲೋಸ್ ಮಾಡಿ ಎಂದು ಹೇಳುತ್ತಾನೆ. ಆಗ ಸುಲೋಚನ ಅವರು ಸರ್ ಆಯಿತು ಕ್ಲೋಸ್ ಮಾಡುತ್ತೇನೆ ಊಟ ಮಾಡಿ ಬನ್ನಿ ಎಂದು ಇಡ್ಲಿಯನ್ನು ಕೊಡುತ್ತಾರೆ. ಗರಂ ಆಗಿದ್ದ ಪೋಲಿಸ್ ವ್ಯಕ್ತಿ  ಸುಮ್ಮನೆ ಇಡ್ಲಿಯನ್ನು ತಿಂದು ಮನೆಗೂ ಸಹ ಉಚಿತವಾಗಿ ಪಾರ್ಸಲ್ ತೆಗೆದುಕೊಂಡು ಹೋಗುತ್ತಾನೆ. ಆನಂತರ ಪ್ರತಿದಿನವೂ ಕೂಡ ಪೋಲಿಸ್ ವ್ಯಕ್ತಿ ಸುಲೋಚನ ಹೊಟೆಲ್ ಗೆ ಬಂದು ಉಚಿತವಾಗಿ ಊಟ ಮಾಡಿ ಹೊಗುತ್ತಿರುತ್ತಾನೆ.. 

ಸುಲೋಚನ ಅವರು ಕೂಡ ಎಲ್ಲಿ ಹೋಟೆಲ್ ಅನ್ನು ಕ್ಲೋಸ್ ಮಾಡಿಬಿಡುತ್ತಾರೋ ಅನ್ನುವ ಕಾರಣಕ್ಕೆ ಏನು ಮಾತಾಡದೇ ಪೋಲಿಸ್ ವ್ಯಕ್ತಿಗೆ ಉಚಿತವಾಗಿ ಊಟವನ್ನು ಕೊಡುತ್ತಿದ್ದರು. ಇನ್ನೂ ರಾತ್ರಿ ಸಮಯದಲ್ಲಿ ಸಿಟಿಗಳಲ್ಲಿ ಹೋಟೆಲ್ ಗಳು ಕ್ಲೋಸ್ ಆದಮೇಲೆ ತಳ್ಳುವ ಬಂಡಿಗಳಿಗೆ ವ್ಯಾಪಾರ. ಇದರ ಜೊತೆಗೆ ಪೋಲಿಸ್ ವ್ಯಕ್ತಿಯ ಕಾ’ಟ.. ಜೀವನ ನಡೆಸಲು ಮುಂದೆ ಏನು ಮಾಡುವುದು ಎಂದು ಯೋಚನೆ ಮಾಡಿದ ಸುಲೋಚನ ಅವರು ಕೆಲವು ತಿಂಗಳ ಬಳಿಕ ಲೈಸೆನ್ಸ್ ಪಡೆದು ಸಾಲ ಮಾಡಿ ಒಂದು ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ಹೊಟೇಲ್ ಅನ್ನು ಶುರುಮಾಡುತ್ತಾರೆ. ಸುಲೋಚನ ಅವರು ಹೊಸದಾಗಿ ಓಪನ್ ಮಾಡಿದ್ದ ಹೋಟೆಲ್ ಗೆ ಹೀಗೆ ಒಂದು ದಿನ ಉಚಿತವಾಗಿ ಉಟ ಮಾಡುತ್ತಿದ್ದ ಪೋಲಿಸ್ ವ್ಯಕ್ತಿ ಬರುತ್ತಾನೆ.

ಆದರೆ ಈ ಪೋಲಿಸ್ ವ್ಯಕ್ತಿ ಊಟ ಮಾಡಲು ಬಂದಿರಲಿಲ್ಲ ಬದಲಾಗಿ ಒಂದು ಕವರ್ ಅನ್ನು ಸುಲೋಚನ ಅವರಿಗೆ ಕೊಡುತ್ತಾರೆ. ಆ ಕವರ್ ನಲ್ಲಿ ಬರೀ ದುಡ್ಡೇ ತುಂಬಿರುತ್ತದೆ. ಅದನ್ನು ಲೆಕ್ಕ ಹಾಕಿ ನೋಡಿದರೆ ಸುಮಾರು ಎರಡು ಲಕ್ಷದ ಎಪ್ಪತ್ತು ಸಾವಿರ ರುಪಾಯಿ ಆ ಕವರ್ ನಲ್ಲಿ ಇರುತ್ತದೆ‌. ಇದನ್ನು ನೋಡಿ ಶಾಕ್ ಆದ ಸುಲೋಚನ ಅವರು ಪೋಲಿಸ್ ವ್ಯಕ್ತಿಗೆ ಇಷ್ಟೊಂದು ದುಡ್ಡು ನನಗೆ ಯಾಕೆ ಕೊಟ್ಟಿದ್ದೀರಾ ಎಂದು ಕೇಳುತ್ತಾಳೆ..   

ಆಗ ಪೋಲಿಸ್ ವ್ಯಕ್ತಿ ಇಷ್ಟು ವರ್ಷಗಳ ಕಾಲ ನಿಮ್ಮ ಹತ್ತಿರ ಉಚಿತವಾಗಿ ತಿಂದಿದ್ದ ಊಟದ ಬಿಲ್ ಇದು.. ನಿಮ್ಮ ಪತಿ ನನಗೆ ಆತ್ಮೀಯ ಸ್ನೇಹಿತ. ನನ್ನ ಬಗ್ಗೆ ನಿಮಗೆ ಪರಿಚಯವಿಲ್ಲ. ಆದರೆ ಯಾಕೆ ನಾನು ಪುಟಪಾತ್ ಮೇಲೆ ಬಂದು ಉಚಿತವಾಗಿ ಊಟ ಮಾಡುತ್ತಿದ್ದೆ ಅಂದರೆ ಎಲ್ಲಾ ನಿಮ್ಮ ಸುರಕ್ಷಿತಕ್ಕಾಗಿ. 

ನಿನ್ನ ಈ ವಿಧವೆ ತನವನ್ನು ದುರುಪಯೋಗ ಪಡೆದುಕೊಳ್ಳಲು ನೋಡುತ್ತಿರುತ್ತಾರೆ. ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಅಷ್ಟೇ ಅಲ್ಲದೇ ನಿಮ್ಮ ಬಳಿ ನಾನು ನಗುತ್ತಾ ಮಾತನಾಡಿದರೆ ನಮ್ಮಿಬ್ಬರ ನಡುವೆ ಸಂಬಂಧವನ್ನು ಕಲ್ಪಿಸಿ ಬಿಡುತ್ತಾರೆ. ಹೀಗಾಗಿ ನಿಮ್ಮ ಸುರಕ್ಷಿತಕ್ಕಾಗಿ ಮತ್ತು ನಮ್ಮಿಬ್ಬರ ಬಗ್ಗೆ ಯಾರು ಕೂಡ ಕೆಟ್ಟದಾಗಿ ಮಾತನಾಡಬಾರದು ಎಂಬ ಉದ್ದೇಶಕ್ಕಾಗಿ  ನಾನು ಊಟ ಮಾಡಲು ಬಂದಾಗ ನಿಮಗೆ ಬೈಯ್ಯುತ್ತಿದ್ದೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಪೋಲಿಸ್ ವ್ಯಕ್ತಿ ಎಲ್ಲಾ ನಿಜವನ್ನು ಸುಲೋಚನ ಅವರ ಬಳಿ ಹೇಳುತ್ತಾರೆ.   

ಪೋಲಿಸ್ ವ್ಯಕ್ತಿ ಹೇಳಿದ ಮಾತನ್ನು ಕೇಳಿದ ಸುಲೋಚನ ಅವರಿಗೆ ಕಣ್ಣೀರು ಹಾಕುತ್ತಾರೆ. ನಂತರ ಅಣ್ಣ ತುಂಬಾ ಧನ್ಯವಾದ ಒಳಗೆ ಬನ್ನಿ ಎಂದು ಚೇರ್ ಹಾಕಿ ಖುಷಿಯಿಂದ ಊಟವನ್ನು ಕೊಡುತ್ತಾರೆ. ಹಾಗೆ ಸುಲೋಚನ ಅವರು ಅಣ್ಣ ನೀವು ನನ್ನ ಪಾಲಿನ ದೇವರು. ನೀವು ಕೊಟ್ಟ ಈ ಎರಡು  ಮುಕ್ಕಾಲು ಲಕ್ಷದಿಂದ ನನ್ನ ಹೆಣ್ಣು ಮಕ್ಕಳ ಭವಿಷ್ಯ ಬೆಳಗುತ್ತದೆ ಎಂದು ಕೈ ಮುಗಿದು ಧನ್ಯವಾದ ತಿಳಿಸುತ್ತಾರೆ.