ಪಾರಿವಾಳಗಳು ಮರದ ಮೇಲೆ ಗೂಡು ಕಟ್ಟುವುದಿಲ್ಲ.ಏಕೆ ಗೊತ್ತೇ?

Updated: Saturday, October 24, 2020, 10:39 [IST]

ಪಾರಿವಾಳಗಳು ಗೂಡು ಕಟ್ಟುವುದನ್ನು ನೀವು ಎಂದಾದರೂ ನೋಡಿದ್ದೀರಾ ? ಇಲ್ಲವೇ ? ಸಾಧಾರಣವಾಗಿ ಪಕ್ಷಿಗಳು ಮರದ ಮೇಲೆ ಗೂಡು ಕಟ್ಟುತ್ತವೆ. ಆದರೆ ಪಾರಿವಾಳಗಳು ಮರದ ಮೇಲೆ ಗೂಡು ಕಟ್ಟುವುದಿಲ್ಲ. ಇದರ ಬಗ್ಗೆ ನಾವು ವಿವರವಾಗಿ ತಿಳಿಯೋಣ.

 

Advertisement

ಪುರಾತನ ಕಾಲದಲ್ಲಿ ರಾಜರು ತಮ್ಮ ಸಂದೇಶವನ್ನು ಬೇರೆ ರಾಜ್ಯಗಳ ರಾಜರಿಗೆ ತಿಳಿಸಲು ಪಾರಿವಾಳಗಳನ್ನು ಬಳಸಿಕೊಳ್ಳುತ್ತಿದ್ದರು. ಪಾರಿವಾಳಗಳು ತಮ್ಮ ಕಾಲಿಗೆ ಸಂದೇಶವನ್ನು ಕಟ್ಟಿಕೊಂಡು ಅದನ್ನು ಬೇರೆ ರಾಜ್ಯದ ರಾಜರಿಗೆ ತಲುಪಿಸುತ್ತಿದ್ದವು. ರಾಜರಿಗೆ ಶತೃಗಳು ಜಾಸ್ತಿ ಇದ್ದರೆ ಅಡವಿ ಮಧ್ಯದಲ್ಲಿ ಆ ಪಾರಿವಾಳನ್ನು ಹಿಡಿದು ಆ ಸಂದೇಶವನ್ನು ಓದುವ ಸಾಧ್ಯತೆ ಇರುತ್ತಿತ್ತು. ಆದ್ದರಿಂದ ಪಾರಿವಾಳಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮರದ ಬದಲು ಮನೆಯ ಬಳಿ ತಮ್ಮ ಗೂಡುಗಳನ್ನು ಕಟ್ಟುತ್ತವೆ.

 

Advertisement

ಈಗ ನೀವು ಮರಗಳ ಮೇಲೆ ಪಾರಿವಾಳಗಳು ಇರುವುದನ್ನು ನೋಡಿರಬಹುದು. ಏಕೆಂದರೆ ಅವು ಮನೆಗಳ ಮೇಲೆ ಇರದೆ ಜಾಸ್ತಿ ಮರಗಳು ಇರುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಏಕೆಂದರೆ ಅವುಗಳಿಗೆ ಮರದ ಮೇಲೆ ಇರಲು ಯಾವುದೇ ಭಯ ಇರುವುದಿಲ್ಲ.ನಾವು ಅವುಗಳನ್ನು ಪಾರಿವಾಳಗಳು ಎನ್ನುತ್ತೇವೆ. ಆದರೆ ಅವುಗಳ ಹೆಸರು ಬ್ಯಾಂಡ್ ಟೈಲ್ಡ್. ಇವು ಹೆಚ್ಚಾಗಿ ದಟ್ಟ ಅರಣ್ಯ ಪ್ರದೇಶದಲ್ಲಿ ಇರುತ್ತವೆ.

ನಗರಗಳಲ್ಲಿ ನಾವು ನೋಡುವ ಪಾರಿವಾಳಗಳ ಹೆಸರು ರಾಕ್ ಡವ್. ಅಸಲಿಗೆ ರಾಕ್ ಡವ್ ಯೂರೋಪಿನಿಂದ ಬಂದವು. ಇವು ನಗರಕ್ಕೆ ಸಮೀಪ ಇರುವ ಕಟ್ಟಡಗಳು, ಕಿಟಕಿಗಳು, ಸೇತುವೆಗಳು, ಬೆಟ್ಟಗಳ ಬಳಿ ಇರುತ್ತವೆ. ಉತ್ತರ ಅಮೇರಿಕಾದಂತಹ ದೇಶಗಳಲ್ಲಿ ಪಾರಿವಾಳಗಳಿಹೆ ಸರಿಯಾದ ಆಹಾರ ದೊರಕುವುದಿಲ್ಲ.ಆದ್ದರಿಂದ ಇವು ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತವೆ. ಇವು ಮೊದಲು ಇಂಗ್ಲೆಂಡ್ ನ ಸಮುದ್ರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದವು. ನಂತರ ನಿಧಾನವಾಗಿ ಇತರೆಡೆಗೆ ವಲಸೆ ಹೋದವು. ಮನೆಗಳ ಬಳಿ ಇವು ಇರುತ್ತವಾದರೂ ಯಾರಿಗೂ ತೊಂದರೆ ಕೊಡುವುದಿಲ್ಲ. ಜನರಿಗೂ ಇವು ಹೆದರುವುದಿಲ್ಲ.

ಮಂಗನಿಂದ ಮಾನವ ಆದ ಅಂತಾರೆ. ಆದರೆ ಮಂಗನ ಲಕ್ಷಣಗಳು ಮನುಷ್ಯನಲ್ಲಿ ಇಲ್ಲ. ಉದಾಹರಣೆಗೆ ಮರಗಳನ್ನು ಹತ್ತುವುದು, ನೇತಾಡುವುದು .ಮನುಷ್ಯನಾಗುವ ಮೊದಲು ಮಂಗಗಳು ಮರದಿಂದ ಮರಕ್ಕೆ ಹಾರುತ್ತಿದ್ದವು. ಆದರೆ ಮನುಷ್ಯನಾದ ಮೇಲೆ ಈ ಹಾರುವ ಕೆಲಸ ಮಾಡಲು ಮರೆತನು. ಅಂತೆಯೇ ಕಾಡಿನಲ್ಲಿ ವಾಸಿಸುತ್ತಿದ್ದ ಪಾರಿವಾಳಗಳು ಕಾಲ ಕ್ರಮೇಣ ತಮ್ಮ ಸ್ನಾಯು ಶಕ್ತಿ ಕಳೆದುಕೊಂಡವು. ನಗರಗಳಲ್ಲಿ ವಾಸಿಸುವ ಅಭ್ಯಾಸ ಬೆಳೆಸಿಕೊಂಡವು. ಇದಕ್ಕೆ ಪಾರಿವಾಳಗಳು ಮರದ ಮೇಲೆ ಗೂಡು ಕಟ್ಟುವುದಿಲ್ಲ.

ಮರಗಳ ಮೇಲೆ ಪಾರಿವಾಳಗಳು ಇಲ್ಲದಿರುವುದಕ್ಕೆ ಇವೇ ಕಾರಣಗಳು.