ಹಿಂದಿ ಹೇರಿಕೆಗೆ ಕೋಪಗೊಂಡ ದುನಿಯಾ ವಿಜಯ್ ಹೇಳಿದ್ದೇನು ಗೊತ್ತಾ?

Updated: Wednesday, September 16, 2020, 11:09 [IST]

ಹೌದು ಹಿಂದಿ ಹೇರಿಕೆ ವಿಷಯ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ,ಕನ್ನಡಿಗರೆಲ್ಲರೂ ಹಿಂದಿ ಕಲಿಯಿರಿ ಎನ್ನುವ, ಮತ್ತು ಹಿಂದಿಯಲ್ಲಿ ಮಾತನಾಡಿ ಎನ್ನುವ, ವಿಚಾರ ಕೇಳಿ ಕೇಳಿ ಸಾಕಾಗಿ ಹೋಗಿದೆ ಜೊತೆಗೆ ಎಲ್ಲಾ ಕಡೆ ತಮ್ಮ ಹಿಂದಿಯೇ ಮೊದಲಿರಬೇಕು ಎನ್ನುವ ವಿಚಾರ ಕೇಳಿ ನೋಡಿ ಸಾಕಾಗಿದೆ. ನಮ್ಮ ಕನ್ನಡ ನಾಡಿನಲ್ಲಿ ನಮ್ಮ ಭಾಷೆಯೇ ನಮಗೆ ಮೇಲೂ ಯಾಕೆ ಹಿಂದಿ ಹೇರಿಕೆ ಮಾಡುತ್ತೀರಿ ಎಂದು ಸಾಕಷ್ಟು ಕನ್ನಡಿಗರು ಹೋರಾಟ ನಡೆಸಿಡಿದ್ದಾರೆ. ಮತ್ತು ಹಿಂದಿ ಹೇರಿಕೆ ವಿರುದ್ಧ ಸಾಕಷ್ಟು ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿವೆ..

ಜೊತೆಗೆ ಕನ್ನಡ ಸಿನಿಮಾರಂಗದ ಕೆಲ ನಾಯಕರು ಕೂಡ ಈ ಅಭಿಯಾನಕ್ಕೆ ದನಿಗೂಡಿಸಿ, ನಂಗೆ ಹಿಂದಿ ಬರಲ್ಲ ಹೋಗೋ ನನಗೆ ನನ್ನ ಕನ್ನಡ ಭಾಷೆಯೇ ನನ್ನ ರಾಷ್ಟ್ರಭಾಷೆ ಎಂದು ಹೇಳುತ್ತಿದ್ದಾರೆ. ನಟ ಧನಂಜಯ್, ಸತೀಶ್ ನೀನಾಸಂ ,ನಿಖಿಲ್, ಮತ್ತು ನಿನ್ನೆ ಅಷ್ಟೇ ನಮ್ಮ ಡಿ ಬಾಸ್ ದರ್ಶನ್ ಅವ್ರು ಕೂಡ, ಕನ್ನಡ ಭಾಷೆ ಬಗ್ಗೆ ಮಾತನಾಡಿ ಹಿಂದಿ ಹೇರಿಕೆ ವಿರುದ್ಧ ಗುಡುಗಿದ್ದರು. ಹಾಗೇನೇ ಈಗ ಬಂದಿರುವ ಮಾಹಿತಿ ಪ್ರಕಾರ ನಟ ದುನಿಯಾ ವಿಜಯ್ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಹೇರಿಕೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಕನ್ನಡ ಭಾಷೆ ತಮಗೆಲ್ಲ ಏನು ಕೊಟ್ಟಿದೆ, ಕನ್ನಡ ಭಾಷೆಯಿಂದಾಗಿ ತಾವು ಏನಾಗಿದ್ದೇವೆ , ಮತ್ತು ಹಿಂದಿ ಮಾತನಾಡಿ ಎನ್ನುವ ಜನರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ಕೇಳಿಬಂದಿದೆ..  

Advertisement

ಅಷ್ಟಕ್ಕೂ ದುನಿಯಾ ವಿಜಯ್ ಹೇಳಿದ್ದೇನು ಗೊತ್ತಾ ಮುಂದೆ ಓದಿ " ಹಿಂದಿ ದಿವಸ್‌ ಆಚರಿಸಲು ನಾವು ಹಿಂದಿ ಭಾಷಿಕರಲ್ಲ, ನಮ್ಮ ರಾಜ್ಯದಲ್ಲಿ ಆಡಳಿತ ಭಾಷೆ ಹಿಂದಿಯೂ ಅಲ್ಲ. ನನಗೆ ಹುಟ್ಟಿದಾಗಿನಿಂಲದೂ ಗೊತ್ತಿರುವುದು ಕನ್ನಡ ಒಂದೆ. ಆಗಿನಿಂದಲೂ ನಾನು ನಮ್ಮ ಕನ್ನಡದ ಮೇಲೆ ಬೇರೆ ಭಾಷೆಗಳ ಆಕ್ರಮಣ ನಮ್ಮ ಮೇಲೆ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ.ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮಾತೃಭಾಷೆ ಜೀವನ ಮಾಡುವ ಬಗೆ ಮತ್ತು ಜೀವನ ಶೈಲಿಯನ್ನು ಕಲಿಸುತ್ತದೆ.  ಹಾಗಂತ ನಾನು ಹಿಂದಿ ಕಲಿಯುವುದೇ ಇಲ್ಲ ಎಂದು ಹೇಳುತ್ತಿಲ್ಲ. ಕಲಿಯುತ್ತೇನೆ, ಅದರ ಅವಶ್ಯಕತೆ ನನಗೆ ಎಷ್ಟಿದಿಯೋ ಅಷ್ಟನ್ನು ಮಾತ್ರ. ಅದನ್ನು ಬಿಟ್ಟು ಸಂಪೂರ್ಣವಾಗಿ ನಮ್ಮ ಮೇಲೆ ಹೇರಲು ಬಂದರೆ ನಾವೆಂದು ಸುಮ್ಮನೆ ಕೂರುವುದಿಲ್ಲ. ಕನ್ನಡದ ಬಗೆಗಿನ ಶ್ರದ್ಧೆ ಇಂದು ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ.   

ಪ್ರತಿಯೊಬ್ಬ ಮನುಷ್ಯ ಜೀವನ ಪ್ರೀತಿಗಾಗಿ ಹಾತೋರೆಯುತ್ತಾನೆ. ಅದೇ ರೀತಿ ತನ್ನ ಆಸ್ಮಿತೆಗಾಗಿಯೂ ಆತ ಹಂಬಲಿಸುತ್ತಾನೆ. ನಾವು ಕನ್ನಡಿಗರು ಯಾವಾಗಲೂ ನಮ್ಮ ಕನ್ನಡತನದ ಅಸ್ಮಿತೆಗಾಗಿ ಹಂಬಲಿಸೋಣ. ನಮ್ಮ ಸಂವಿಧಾನದಂತೆ ನಾವು ಬದುಕುತ್ತಿದ್ದೇವೆ ಬದುಕಲು ಬಿಡಿ, ಹಿಂದಿ ಹೇರಿಕೆಯನ್ನು ಎಂದಿಗೂ ಸಹಿಸುವುದಿಲ್ಲ.ಜೈ ಕರ್ನಾಟಕ ಮಾತೆ. ..ದಿನವೂ ಕನ್ನಡ .. ಅನುದಿನವೂ ಕನ್ನಡ"  ಎಂದು ತಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿದ್ದಾರೆ ನಟ ದುನಿಯಾ ವಿಜಯ್. ದುನಿಯಾ ವಿಜಯ್ ಅವರ ಈ ಅಭಿಪ್ರಾಯಕ್ಕೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ಹಾಗೆ ತಪ್ಪದೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು....