ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ; ಇಬ್ಬರ ದುರ್ಮರಣ

Updated: Saturday, November 21, 2020, 11:09 [IST]

ಹುಬ್ಬಳ್ಳಿ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಬಂಡಿವಾಡ ಗ್ರಾಮದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿದ್ದ ಬಲೆನೋ ಕಾರು, ಗದಗದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಇನ್ನೋವಾ ಕಾರು ಮುಖಾಮುಖಿ ಡಿಕ್ಕಿ ಹೊಡೆದಿವೆ.

ಘಟನೆಯಲ್ಲಿ ಧಾರವಾಡ ಮೂಲದ ಸ್ಮಿತಾ ಕಟ್ಟಿ ಹಾಗೂ ಇನ್ನೊಬ್ಬ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿದ್ದ ಕಾರು, ಗದಗನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿಯಾಗಿವೆ. 

Advertisement

ಬಳ್ಳಾರಿಗೆ ಹೊರಟ್ಟಿದ್ದವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದು, ಗಾಯಾಳು ಮತ್ತು ಮೃತರ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ. ಇನ್ನು ಇನ್ನೋವಾ ಕಾರು ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ಸೇರಿದ ಕಾರು ಆಗಿದೆ. ಆದರೆ ಘಟನೆ ವೇಳೆ ಉಮಾಶ್ರೀ ಇರಲಿಲ್ಲ ಎಂದು ತಿಳಿದುಬಂದಿದೆ.  

Advertisement

ವಂಶಪಾರಂಪರಿತ ಜ್ಯೋತಿಷ್ಯ ಪ್ರವೀಣಾ   ಶ್ರೀ ಜ್ಞಾನೇಶ್ವರ್ ರಾವ್ ದೈವಜ್ಞ ಪಂಡಿತ್ ಸಮಸ್ಯೆಗಳೇನಿದ್ದರೂ ಸವಾಲಾಗಿ ಸ್ವೀಕಾರ, ದಿಟ್ಟಉತ್ತರ ನೇರ ಪರಿಹಾರ, ಪಂಚಭೂತ-ದೈವದೇವರುಗಳ ಸಾಕ್ಷಿಯಾಗಿ ಕೇವಲ ಮೂರು ದಿನಗಳಲ್ಲಿ 100%ಚಾಲೆಂಜ್ನೊಂದಿಗೆ ಶಾಶ್ವತ ಪರಿಹಾರ ನೀಡಲಾಗುವುದು ಪೋನ್ ನಂ:- 8548998564