ಎಲ್ಲಾ ದಾಖಲೆ ಬ್ರೇಕ್ ಮಾಡಿದ ಕೆಜಿಎಫ್2 ಟೀಸರ್, ಅಷ್ಟಕ್ಕೂ ಗಳಿಸಿದ ಹಣವೆಷ್ಟು ಗೊತ್ತಾ..?

Updated: Tuesday, January 12, 2021, 22:17 [IST]

ಕೆಜಿಎಫ್ ಟೀಸರ್ ಈಗಾಗಲೇ ಕರ್ನಾಟಕ ಮಾತ್ರವಲ್ಲದೆ, ಇಂಡಿಯಾ ಮಾತ್ರವಲ್ಲದೆ, ಹಾಲಿವುಡ್ ಇಂಡಸ್ಟ್ರಿಯ ನಟರು ಬೆಚ್ಚಿಬೀಳುವಂತೆ ಮೂಡಿಬಂದಿದ್ದು, ಸಾಕಷ್ಟು ಸಿನಿ ಪ್ರಿಯರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಹಾಗೆ ನಮ್ಮ ಕನ್ನಡ ಇಂಡಸ್ಟ್ರಿಯ ತಾಕತ್ ಏನು ಅಂತ ಇಡೀ ಜಗತ್ತಿಗೆ ತೋರಿಸುತ್ತಿದೆ. ಅಂದಹಾಗೆ ಯೂಟ್ಯೂಬ್ ನಲ್ಲಿಯ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡುತ್ತಿರುವ ಕೆಜಿಎಫ್ ಸಿನಿಮಾದ ಚಾಪ್ಟರ್ 2 ಟೀಸರ್ ಈಗಾಗಲೇ ಸಾಕಷ್ಟು ಜನರು ಕೆಜಿಎಫ್ ನ ಮೇಕಿಂಗ್ ಮತ್ತು ವಿಸ್ಯುಯಲ್ ಎಫೆಕ್ಟ್ಸ್ ಗೆ ದಂಗಾಗಿದ್ದಾರೆ. ಮತ್ತು ಯಾರು ಊಹೆ ಮಾಡದ ರೀತಿ ಕೆಜಿಎಫ್ ಈ ಮಟ್ಟದಲ್ಲಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.  

ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಟೀಸರ್ ಮೂಲಕ, ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಂಬರ್ ಒನ್ನಲ್ಲಿ ಮುಂದುವರೆದಿದ್ದಾರೆ.ಹಾಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕ ಸಿನಿಮಾದಲ್ಲಿ ಯಾವ ರೀತಿ ಮೂಡಿ ಬರಬಹುದು ಎಂದು ಈಗಾಗಲೇ ಎಲ್ಲರೂ ಚರ್ಚೆ ಕೂಡ ಆರಂಭಿಸಿದ್ದಾರೆ. ಅಂದಹಾಗೆ ಕೇವಲ ಟೀಸರ್ ನಿಂದ ಕೆಜಿಎಫ್ ತಂಡವು ಯೂಟ್ಯೂಬ್ ಮೂಲಕ ಗಳಿಸಿಕೊಂಡಿರುವ ಹಣವೆಷ್ಟು ಎಂಬುದು ಇದೀಗ ತಿಳಿದುಬಂದಿದ್ದು, ಒಂದು ಮಿಲಿಯನ್ ವೀಕ್ಷಣೆ ಪ್ರಕಾರ 45 ಸಾವಿರದಿಂದ ಐವತ್ತು ಸಾವಿರ ಹಣ ಬಂದಿರಬಹುದು ಎನ್ನಲಾಗಿದೆ.  

ಒಂದು ನೂರು ಮಿಲಿಯನ್ ವೀಕ್ಷಣೆಗೆ ನಲವತ್ತೈದರಿಂದ ಐವತ್ತು ಲಕ್ಷ ಹಣ ಬಂದಿರಬಹುದು ಎಂದು ಇದೀಗ ಯುಟ್ಯೂಬ್ ಚಾನೆಲ್ ವರದಿ ಮಾಡಿದೆ. ಒಂದು 140 ಮಿಲಿಯನ್ ಗೆ ಸರಿಸುಮಾರು ಎಂದರೆ 65 ರಿಂದ 70 ಲಕ್ಷ ಕೆಜಿಎಫ್ ತಂಡಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ. ಹಾಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ ವಿಡಿಯೋವನ್ನು ನೋಡಿ, ಹಾಗೆ ವಿಡಿಯೋ ನೋಡಿದ ಮೇಲೆ ಕನ್ನಡಿಗರು ಹೆಮ್ಮೆಯಿಂದ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ, ಶೇರ್ ಮಾಡಿ, ಧನ್ಯವಾದಗಳು...