ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮ್ನೋರು ಧಾರಾವಾಹಿ ನಟಿ ಹರ್ಷಿತಾ ವೆಂಕಟೇಶ್ ..!ಫೋಟೊ ಗ್ಯಾಲರಿ ನೋಡಿ..!

Updated: Wednesday, September 16, 2020, 09:05 [IST]

ಕಾರ್ತಿಕದೀಪ ,ಮಡದಿ,ಮೇಘಮಯೂರಿ, ಚಂದನದ ಗೊಂಬೆ, ಅಮ್ನೋರು ,ಮುಂತಾದ ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಹರ್ಷಿತಾ ವೆಂಕಟೇಶ್ ಅವರು ಬ್ಯಾಂಕ್ ಉದ್ಯೋಗಿಯಾಗಿರುವ ವಿನಯ್ ಅವರ ಜೊತೆ ಅರೇಂಜ್ ಮ್ಯಾರೇಜ್ ಆಗಿದ್ದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. 

Advertisement
..

ಮಾರ್ಚ್ 27ರಂದು ಮದುವೆ ಆಗಬೇಕೆಂದು ಎಲ್ಲಾ ತಯಾರಿ ನಡೆಸಿದ್ದು. 1800 ಮಂದಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸಡನ್ನಾಗಿ ರಾಷ್ಟ್ರದಲ್ಲಿ ಮಾಡಲಾದ ಲಾಕ್ಡೌನ್ ನಿಂದಾಗಿ ಅವರ ಮದುವೆ ಮುಂದೆ ಹಾಕಲಾಗಿತ್ತು.ಊಟ ತಿಂಡಿ ಮತ್ತು ಅಲಂಕಾರಿಕ ವಸ್ತುಗಳು ವೇಷ್ಟಾಗದಂತೆ ವಿನಯ್ ಮತ್ತು ಹರ್ಷಿತಾ ಅವರ ಕುಟುಂಬದವರು ಸದ್ಬಳಕೆ ಮಾಡಿಕೊಂಡಿದ್ದಾರೆ. 

ಆಗಸ್ಟ್ 14 ರಂದು 50 ಜನರ ನಡುವೆ ಮದುವೆ ಆಗಬೇಕಾಯಿತು. ಮದುವೆಗೆ ಯಾರನ್ನು ಕರೆಯಲಾಗಲಿಲ್ಲ ಎಂದು ಬೇಸರವಿದೆ. ಮದುವೆಯಾಗಿ 6 ದಿನ ಮಾತ್ರ ಮನೆಯಲ್ಲಿ ಇದ್ದೆ. ಸದ್ಯ ತೆಲುಗು ಭಾಷೆಯ 2 ಧಾರಾವಾಹಿಗಳಲ್ಲಿ ನಟಿಸುವುದಕ್ಕಾಗಿ ನನಗೆ ವೈಯಕ್ತಿಕ ಜೀವನ ಸಮಯ ಸಿಗುತ್ತಿಲ್ಲ.ಆದರೆ ನನ್ನ ಗಂಡ ಅತ್ತೆ ಮಾವ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹರ್ಷಿತಾ ವೆಂಕಟೇಶ್ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಗಳಲ್ಲಿ ತಿಳಿದು ಬಂದಿದೆ. ಮತ್ತು ಮದುವೆ ಫೋಟೋ ಗ್ಯಾಲರಿ ನೋಡಿ ಹೇಗಿದೆ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು..