ನೀವು ಸುಂದರವಾಗಿ ಕಾಣಲು ಈ ಮನೆ ಮದ್ದು ಉಪಯೋಗಿಸಿ

Updated: Saturday, October 17, 2020, 09:27 [IST]

ಪ್ರತಿಯೊಬ್ಬ ವ್ಯಕ್ತಿಗೂ ತಾನು ಸುಂದರವಾಗಿ ಕಾಣಲು ಆಸೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಕೇಳೋದೇಬೇಡ.‌ಸುಂದರವಾಗಿ ಕಾಣಲು ಅವರು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆ ಕ್ರೀಮು,ಈ ಕ್ರೀಮು ಎಂದು ಸುಮ್ಮನೆ ದುಡ್ಡು ಹಾಳು ಮಾಡಿಕೊಳ್ಳುತ್ತಾರೆ.‌ನಾವು ಹೇಳಿದಂತೆ ನೀವು ಮಾಡಿದರೆ ಸುಂದರವಾಗಿ ಕಾಣಬಹುದು.

   

Advertisement

ಮುಖ ಸುಂದರವಾಗಿ ಹಾಗೂ ಹೊಳಪಾಗಿ ಕಾಣಲು ಮುಖಕ್ಕೆ ಫೇಸ್ ಪ್ಯಾಕ್ ಅಂದ್ರೆ ಲೇಪನಗಳನ್ನು ಹಚ್ಕೊಬೇಕಾಗುತ್ತೆ. ಆ ಲೇಪನವನ್ನು ಹೇಗೆ ತಯಾರಿಸಿಕೊಳ್ಳಬೇಕು , ಆ ಲೇಪನಕ್ಕೆ ಏನೇನು ಬೇಕು ಹಾಗೂ ಲೇಪನವನ್ನು ಯಾವಾಗ ಹೇಗೆ ಹಚ್ಚಿಕೊಳ್ಳಬೇಕು ಅಂತ ಈ ಲೇಖನದಲ್ಲಿ ತಿಳಿಯೋಣ.

   

Advertisement

ಹೊರಗಡೆ ಸಿಗುವ ದುಬಾರಿ ಸೌಂದರ್ಯ ವರ್ಧಕಗಳಿಗಿಂತ ನಾವು ನಮ್ಮ ಮನೆಯಲ್ಲೇ ಸಿಗುವ ವಸ್ತುಗಳಿಂದ ಲೇಪನ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು , ಮುಖದ ಸೌಂದರ್ಯಕ್ಕೂ ಒಳ್ಳೆಯದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ.

ನಾಲ್ಕು ಚಮಚ ಕಡ್ಲೆ ಹಿಟ್ಟು , ಎರಡು ಚಮಚ ಹಸಿ ಹಾಲು ಹಾಕಿ ಮಿಶ್ರಣ ಮಾಡಬೇಕು. ಈ ಹಾಲಿಗೆ ಸ್ವಲ್ಪ ಕೆನೆ ಇದ್ದರೆ ಚೆನ್ನ. ಈ ಮಿಶ್ರಣಕ್ಕೆ ಚುಟುಕೆಯಷ್ಟು ಅರಿಸಿಣ ಹಾಕಬೇಕು.ಇದನ್ನು ಫೆಸ್ ಪ್ಯಾಕ್ ತರಹ ಮುಖಕ್ಕೆ ಹಚ್ಚಿಕೊಳ್ಳಬೇಕು. ಮುಖವನ್ನು ಮೊದಲು ಕ್ಲೀನಾಗಿ ತೊಳೆದಿರಬೇಕು. ಮುಖಕ್ಕೆ ರಾತ್ರಿ ಹಚ್ಚಿಕೊಂಡು ರಾತ್ರಿ ಇಡಿ ಹಾಗೇ ಇಡಬೇಕು. ಬೆಳಿಗ್ಗೆ ತಣ್ಣೀರಿಂದ ತೊಳೆದುಕೊಳ್ಳಬೇಕು.

ನಾಲ್ಕಾರು ಸ್ಟ್ರಾಬೆರಿ ಹಣ್ಣುಗಳ ತಿರುಳನ್ನು ಸ್ವಲ್ಪ ಹಾಲಿನೊಂದಿಗೆ ಮಿಶ್ರಣ ಮಾಡಿ ಮಿಕ್ಸಿಗೆ ಹಾಕಿ ಅರೆಯಿರಿ. ಇದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ರಾತ್ರಿ ಮುಖ ತೊಳೆದು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ರಾತ್ರಿ ಇಡೀ ಹಾಗೇ ಇರಲು ಬಿಡಿ. ನಂತರ ಬೆಳಿಗ್ಗೆ ಎದ್ದು ತಣ್ಣೀರಿನಿಂದ ತೊಳೆದುಕೊಳ್ಳಬೇಕು. 

ಇನ್ನು ಮೂರನೆಯ ಫೆಸ್ ಪ್ಯಾಕ್ ಹೇಳ್ತೀವಿ ಕೇಳಿ. ಸ್ವಲ್ಪ ಓಡ್ಸ್ ರವೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.ಇದಕ್ಕೆ ಕೊಂಚ ಮೊಸರನ್ನು ಹಾಕಿ ,ಚಿಟಿಕೆ ಅರಿಸಿಣ, ಅರ್ದ ಚಮಚ ಜೇನನ್ನು ಹಾಕಿ ಮಿಶ್ರಣ ಮಾಡಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ರಾತ್ರಿ ಮುಖಕ್ಕೆ ಹಚ್ಚಿಕೊಳ್ಳಬೇಕು . ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು.

ಈ ರೀತಿಯಲ್ಲಿ ಮಾಡಿದರೆ ಮುಖ ಚೆಂದ ಕಾಣುವುದಲ್ಲದೇ ಹೊಳೆಯುವ ಕಾಂತಿಯುತ ಚರ್ಮದಿಂದ ನೀವು ಚೆನ್ನಾಗಿ ಕಾಣುತ್ತೀರ.