ಮಾಸ್ಕ್ ಹಾಕಿ ಮಾರುವೇಷದಲ್ಲಿ ದಸರಾ ನೋಡಿದ ಕನ್ನಡದ ಖ್ಯಾತ ಸ್ಟಾರ್ ನಟ

Updated: Wednesday, October 28, 2020, 09:44 [IST]

ಮಾಸ್ಕ್ ಹಾಕಿ ಮಾರುವೇಷದಲ್ಲಿ ದಸರಾ ನೋಡಿದ ಕನ್ನಡದ ಖ್ಯಾತ ಸ್ಟಾರ್ ನಟ

  

 ಸ್ಟಾರ್ ನಟ ಎಂದರೆ ಸಾಮಾನ್ಯ ದಿನಗಳಲ್ಲೇ ಜನ ಮುಗಿ ಬೀಳುತ್ತಾರೆ. ಇನ್ನೂ ದಸರಾ ಸಂದರ್ಭದಲ್ಲಿ ಕೇಳ್ತೀರಾ ಇರುವೆ ತರ ಮುತ್ತಿಕೊಳ್ಳುತ್ತಾರೆ. ಇದರಿಂದಾಗಿಯೇ ಹಲವು ನಟ, ನಟಿಯರು ಮಾರುವೇಷದಲ್ಲಿ ಸುತ್ತಾಡುತ್ತಾರೆ. ಅದೇ ರೀತಿ ದಸರಾ ನೋಡಲು ನಟ ನೀನಾಸಂ ಸತೀಶ್ ಮಾರುವೇಷದಲ್ಲಿ ಮೈಸೂರು ಸುತ್ತಿದ್ದಾರೆ.

  

ದಸರಾ ಸಂದರ್ಭದಲ್ಲಿ ತಾವು ಮೈಸೂರಿನಲ್ಲಿ ಕಳೆದ ದಿನಗಳ ಕುರಿತು ನಿನಾಸಂ ಸತೀಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಪೆಟ್ರೊಮ್ಯಾಕ್ಸ್ ಸಿನಿಮಾದ ಶೂಟಿಂಗ್‍ಗಾಗಿ ನಿನಾಸಂ ಸತೀಶ್ ಮೈಸೂರಿನಲ್ಲಿಯೇ ಬೀಡು ಬಿಟ್ಟಿದ್ದು, ಇದೇ ವೇಳೆ ದಸರಾ ಸಹ ಆಗಮಿಸಿದೆ. ಹೀಗಾಗಿ ದಸರಾ ಸಮಯವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಹಗಲೆಲ್ಲ ಸಿನಿಮಾ ಶೂಟಿಂಗ್ ನಡೆಸಿದರೆ, ರಾತ್ರಿ ವೇಳೆ ತಮ್ಮ ಸ್ನೇಹಿತರೊಂದಿಗೆ ದಸರಾ ವೀಕ್ಷಿಸಿದ್ದಾರೆ. ಅರಮನೆ ಸೇರಿದಂತೆ ಮೈಸೂರಿನ ವಿವಿಧ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ, ಆನಂದಿಸಿದ್ದಾರೆ.

  

ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಮೊದಲು ವಿಡಿಯೋ ಪೋಸ್ಟ್ ಮಾಡಿ, ವಿಜಯದಶಮಿಯ ಶುಭಾಶಯಗಳು ಎಂದು ಬರೆದು ಮೈಸೂರಿನ ಲೈಟಿಂಗ್ ಸೊಬಗನ್ನು ತೋರಿಸಿದ್ದಾರೆ. ಅಲ್ಲದೆ ಸ್ನೇಹಿತರೊಂದಿಗೆ ನಡೆದು ಬಹುತೇಕ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿರುವುದನ್ನು ಸೆರೆ ಹಿಡಿದಿದ್ದಾರೆ. ಇಷ್ಟೆಲ್ಲ ಸುತ್ತಾಡಿದರೂ ಯಾರಿಗೂ ಸುಳಿವು ಸಿಕ್ಕಿಲ್ಲ. ಅಲ್ಲದೆ ಅವರ ಅಭಿಮಾನಿಗಳು ಕಮೆಂಟ್ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದು, ನಮ್ಮ ಮೈಸೂರಿಗೆ ಬಂದಿದ್ದಿರಾ? ಗೊತ್ತೇ ಆಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಮೈಸೂರಿನ ಪ್ರಸಿದ್ಧ ಜಯಚಾಮರಾಜೇಂದ್ರ ವೃತ್ತದ ಬಳಿ ನಿಂತಿರುವ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ಅವರು, ಇಂದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದಿನ. ನನ್ನ ಮೂರು ಚಿತ್ರಗಳ ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. ‘ಮ್ಯಾಟ್ನಿ’ ಮತ್ತು ‘ದಸರಾ’ ನಾನಿಲ್ಲದ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೆ ಮೈಸೂರಿನಲ್ಲಿ ‘ಪೆಟ್ರೊಮ್ಯಾಕ್ಸ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ. ದಸರಾ ಹಬ್ಬದ ಶುಭಾಶಯಗಳು. ಲವ್ ಯೂ ಆಲ್… ಎಂದು ಬರೆದುಕೊಂಡಿದ್ದಾರೆ.


ದೈವಜ್ಞ ಪ್ರಧಾನ್ ತಾಂತ್ರಿಕ ಜ್ಞಾನೇಶ್ವರ್ ರಾವ್ 8548998564 ವಿಶೇಷ ಸೂಚನೆ:- ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ  ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ