ಜನ್ಮ ದಿನಕ್ಕೆ ಶುಭಾಶಯ ಕೋರಿದ ಅಭಿಮಾನಿಗಳಿಗೆ ಪರಿಮಳ ಜಗ್ಗೇಶ್ ಹೇಳಿದ್ದೇನು ಗೊತ್ತಾ..?

Updated: Tuesday, October 27, 2020, 17:12 [IST]

ಇಂದು ನಮ್ಮ ಕನ್ನಡ ಸಿನಿಮಾರಂಗದ ನವರಸನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್ ಅವರ ಹುಟ್ಟು ಹಬ್ಬದ ದಿನ. ಹಾಗಾಗಿ ಇಡೀ ಜಗ್ಗೇಶ್ ಕುಟುಂಬ ಮತ್ತು ಅಭಿಮಾನಿಗಳು ನಟ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಅವರಿಗೆ ಹುಟ್ಟು ಹಬ್ಬದ ವಿಶೇಷ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿಮಳ ಜಗ್ಗೇಶ್ ಅವರ ಸಾಧನೆಗಳನ್ನು ಮೆಲುಕು ಹಾಕಿ, ಸಂಬಂಧಿಕರು ಕೂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ಗಣ್ಯ ವ್ಯಕ್ತಿಗಳು ಕೂಡ ಜಗ್ಗೇಶ್ ಪತ್ನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆನ್ನಲಾಗಿದೆ. 

Advertisement

ಇದರ ನಡುವೆ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಅವರು, ತಮ್ಮ 52ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು ವಿಡಿಯೋ ಮೂಲಕ ಟ್ವಿಟ್ಟರ್ನಲ್ಲಿ ಅಭಿಮಾನಿಗಳಿಗೆ ಮತ್ತು ತಮ್ಮ ಕುಟುಂಬದವರಿಗೆ ಮತ್ತು ಸಮಾಜಕ್ಕೆ ಒಂದೆರಡು ಒಳ್ಳೆಯ ಮಾತುಗಳನ್ನು ಆಡಿ, ತಮ್ಮ ಹುಟ್ಟಿದ ದಿನಕ್ಕೆ ಶುಭಾಶಯ ತಿಳಿಸಿದವರಿಗೆ, ಧನ್ಯವಾದಗಳನ್ನು ತಹೇಳಿದ್ದಾರೆ. ಹೌದು ಪರಿಮಳಾ ಜಗ್ಗೇಶ್ ಅವರು ಹೇಳಿದ ಹಾಗೆ ವಿಡಿಯೋದಲ್ಲಿ, ಒಂದು, 'ಜೀವನದಲ್ಲಿ ಸಂತೋಷವಾಗಿರುವದು' ಎರಡು, 'ಇನ್ನೊಬ್ಬರಿಗೆ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡುವುದು' ಮೂರನೆಯದು 'ಜಾಸ್ತಿ ನೋವಿಲ್ಲದೆ ಸಾಯುವುದು' ಎಂಬ ಮಾತುಗಳನ್ನು ಹೇಳಿ ತಮ್ಮ ಜೀವನದ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ. 

Advertisement

ಮನೆಯಲ್ಲಿ ತಮ್ಮ ಕುಟುಂಬದ ಪರಿವಾರದವರಿಗೆ, ಜೊತೆಗೆ ಅಭಿಮಾನಿಗಳಿಗೂ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೌದು ಪರಿಮಳ ಜಗ್ಗೇಶ್ ಅವರ ಧನ್ಯವಾದ ತಿಳಿಸಿರುವ ಈ ವಿಡಿಯೋ ಟ್ವಿಟರ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಹೌದು ನೀವು ಒಮ್ಮೆ ಪರಿಮಳ ಅವರ ವಿಡಿಯೋ ನೋಡಿ, ಬಳಿಕ ಪರಿಮಳ ಜಗ್ಗೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು'...

ಬಣ್ಣದಲ್ಲಿ ಕುಂಛದಲ್ಲಿ ಕಲೆ ಅನಾವರಣ ನೋಡಿದ್ದೆವು! ಹಸಿರಿನ ಎಲೆಯಮೇಲೆ ನಿಮ್ಮ ಪ್ರತಿಭೆಗೆ ಧನ್ಯವಾದ..ಅದ್ಭುತ..