ಬ್ರೇಕಿಂಗ್ ನ್ಯೂಸ್ : ಪೊಗರು ರಿಲೀಸ್ ಡೇಟ್ ಫಿಕ್ಸ್ - ಯಾವಾಗ ಗೊತ್ತೇ?

Updated: Monday, January 18, 2021, 20:27 [IST]

ಬ್ರೇಕಿಂಗ್ ನ್ಯೂಸ್ : ಪೊಗರು ರಿಲೀಸ್ ಡೇಟ್ ಫಿಕ್ಸ್ - ಯಾವಾಗ ಗೊತ್ತೇ?

  

ಧ್ರುವ ಸರ್ಜಾ ಕನ್ನಡದ ಖ್ಯಾತ ನಟ ಅರ್ಜುನ್ ಸರ್ಜಾರ ಅಳಿಯನಾಗಿದ್ದು ಅವರಂತೆಯೇ ಸ್ಟಂಟ್ , ಡಾನ್ಸ್'ನಲ್ಲಿ ಮಿಂಚುತ್ತಿದ್ದಾರೆ. ಮೊದಲು ಅದ್ದೂರಿ ಎಂಬ ಚಿತ್ರದಲ್ಲಿ ನಟಿಸಿದರು. ಅದರಲ್ಲಿ ನಾಯಕಿಯಾಗಿ ರಾಕಿಂಗ್ ಸ್ಟಾರ್ ಯಶ್'ರ ಹೆಂಡತಿ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದಾರೆ. ಎ ಪಿ ಅರ್ಜುನ್ ಕತೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದರು. ಕತೆ ಹೊಸತನದಿಂದ ಕೂಡಿದ್ದು ಹಾಡುಗಳು ಹಿಟ್ ಆಗಿದ್ದವು. ಚಿತ್ರ ನೂರು ದಿನದ ಪ್ರದರ್ಶನ ಕಂಡಿತು. ನಂತರ ಎರಡನೇ ಚಿತ್ರ ಬಹದ್ದೂರ್ ಮಾಡಿದರು. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇದೂ ಕೂಡ ಯಶಸ್ಸು ಗಳಿಸಿದ್ದು ನಂತರ ಮೂರನೇ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನದಲ್ಲೇ ಮೂಡಿತು. ಇದಕ್ಕೆ ಭರ್ಜರಿ ಎಂದು ಹೆಸರಿಟ್ಟರು. ಇದೂ ಕೂಡ ಯಶಸ್ವಿಯಾಗಿ ಪ್ರದರ್ಶನ ಕಂಡು ಧ್ರುವ ಸರ್ಜಾ ಹ್ಯಾಟ್ರಿಕ್ ಹಿಟ್ ಕೊಟ್ಟರು. ಈಗ ಪೊಗರು ತೆರೆಗೆ ಬರಲಿದ್ದು ಅದರ ಮೇಲೆ ಭಾರೀ ನಿರೀಕ್ಷೆ ಇದೆ.

  

ಧ್ರುವ ಸರ್ಜಾ ರ ಭಾರೀ ನಿರೀಕ್ಷಿತ ಚಿತ್ರ ಪೊಗರು ಫೆಬ್ರವರಿ 19 ಕ್ಕೆ ಬಿಡುಗಡೆ ಆಗಲಿದೆ. ಈ ಕುರಿತು ವಿಷಯ ಹಂಚಿಕೊಂಡಿರುವ ಧ್ರುವ ಸರ್ಜಾ ಪೊಗರು ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಂದು ನೋಡಿ ಹರಸಿ ಎಂದಿದ್ದಾರೆ.ಇದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿ ಬಂದಿದೆ.