ಆ ಮಹಿಳೆ ಆ ನಟನಿಗೆ ಕೊಟ್ಟಿದ್ದು 10 ರೂಪಾಯಿ ಆ ನಟ ಕೊಟ್ಟಿದ್ದು 10 ಕೋಟಿ

Updated: Friday, October 23, 2020, 10:34 [IST]

ಆ ಮಹಿಳೆ ಆ ನಟನಿಗೆ ಕೊಟ್ಟಿದ್ದು 10 ರೂಪಾಯಿ
ಆ ನಟ ಕೊಟ್ಟಿದ್ದು 10 ಕೋಟಿ

 

Advertisement

ಟಾಪ್ ನಟರು ಎಲ್ಲರಂತೆ ಕೂಡ ಸಾಮನ್ಯರಲ್ಲಿ ಸಾಮನ್ಯರಾಗಿ ಇರುವುದಿಲ್ಲ. ಕೆಲವರ ವರ್ತನೆಗಳು ನಮಗೆ ಇರಿಟೇಟ್ ಮಾಡುತ್ತವೆ. ಅವರಿಗೆ ತಾವು ನಡೆದು ಬಂದ ಹಾದಿ ನೆನಪಿಗೆ ಇರುವುದಿಲ್ಲ. 

 

Advertisement

ಆದರೆ ಇನ್ನೂ ಕೆಲವು ನಟರು ತಾವು ನಡೆದು ಬಂದ, ಸವೆಸಿದ ದಾರಿಯನ್ನು ಮರೆಯುವುದಿಲ್ಲ. ತಮ್ಮನ್ನು ಸಹಾಯ ಮಾಡಿದ ಜನರನ್ನು ಮರೆಯುವುದಿಲ್ಲ. ಇದಕ್ಕೆ ಒಳ್ಳೆಯ ಉದಾಹರಣೆ ಭಾರತದ ನಂಬರ್ ಒನ್ ನಟ ರಜನಿಕಾಂತ್. ಇವರು ಕೋಟಿಗಟ್ಟೆಲೆ ದುಡ್ಡು ಹೊಂದಿದ್ದರೂ ಅತ್ಯಂತ ಸರಳವಾಗಿ ಜೀವನ ನಡೆಸುತ್ತಾರೆ. ಅವರಿಗೆ ದುಡ್ಡಿನ ಮೇಲೆ ವ್ಯಾಮೋಹ ಇಲ್ಲ.

 

Advertisement

ವರ್ಷಕ್ಕೊಮ್ಮೆ ಹಿಮಾಲಯಕ್ಕೆ ಹೊರಡುತ್ತಾರೆ. ತಮ್ಮ ಸ್ನೇಹಿತರ ಜೊತೆ ಸೇರಿ ದೇವಸ್ಥಾನಕ್ಕೆ ಹೋಗುತ್ತಾರೆ. ಒಮ್ಮೊಮ್ಮೆ ಹಳೆಯ ವಸ್ತ್ರ ಧರಿಸಿ, ಕಾಲಿಗೆ ಹಾವಯ್ ಚಪ್ಪಲಿ ಧರಿಸಿ ಸಾಮಾನ್ಯ ಮನುಷ್ಯರ ಹಾಗೆ ಇರುತ್ತಾರೆ. ಬೀದಿ ಬದಿಯ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಾರೆ.

ರಜನಿಕಾಂತ್ ಒಮ್ಮೆ ಬೆಂಗಳೂರಿನ ದೇವಸ್ಥಾನಕ್ಕೆ ಹೋಗಬೇಕಿತ್ತು. ಅಲ್ಲಿ ಹೋದರೆ ಜನ ಗುರುತು ಹಿಡಿದು ಟ್ರಾಫಿಕ್ ಸಮಸ್ಯೆ, ದೇವಸ್ಥಾನದವರಿಗೂ ತೊಂದರೆ ಆಗುತ್ತದೆ ಎಂದು ತುಂಬಾ ಹಳೆಯ ಬಟ್ಟೆ ಧರಿಸಿ ಹೋದರು. ಆಗ ಅಲ್ಲಿ ಒಬ್ಬ ಮಹಿಳೆ ಇವರನ್ನು ನೋಡಿ ಬಿಕ್ಷುಕ ಎಂದು ತಿಳಿದು ಅವರಿಗೆ ಹತ್ತು ರೂಪಾಯಿ ನೋಟು ಕೊಡುತ್ತಾರೆ. ರಜನಿ ಯಾವುದೇ ಭಾವನೆ ತೋರಿಸದೆ ಆ ಹತ್ತು ರೂಪಾಯಿಯನ್ನು ತೆಗೆದುಕೊಳ್ಳುತ್ತಾರೆ.

ನಂತರ ರಜನಿ ಆ ದೇವಸ್ಥಾನದ ಹುಂಡಿಗೆ ಬಹಳ ಹಣ ಹಾಕುತ್ತಾರೆ. ಅದನ್ನು ಆ ಮಹಿಳೆ ನೋಡಿ ಶಾಕ್ ಆಗುತ್ತಾರೆ. ನಂತರ ಆಕೆಗೆ ಗೊತ್ತಾಗುತ್ತದೆ ಅವರು ಭಾರತದ ಶ್ರೇಷ್ಠ ನಟ ರಜನಿಕಾಂತ್ ಎಂದು. ನಂತರ ಆ ಮಹಿಳೆ ರಜನಿಕಾಂತ್ ಜೊತೆ ಕ್ಷಮೆ ಕೇಳಿ ಆ ಹತ್ತು ರೂಪಾಯಿ ವಾಪಾಸು ಕೊಡಿ ತಪ್ಪಾಯಿತು ಎಂದು ಕೇಳುತ್ತಾಳೆ.

ಆದರೆ ರಜನಿ ಇಲ್ಲ ಅಮ್ಮ. ನನಗೆ ನೀವು ಕಣ್ತೆರೆಸಿದ್ದೀರಿ. ನಿಮ್ಮದು ತಪ್ಪೇನಿಲ್ಲ ಎಂದು ಹೊರಡುತ್ತಾರೆ. ನಂತರ ಆ ಹತ್ತು ರೂಪಾಯಿ ಸೇರಿಸಿ ಸುಮಾರು ಹತ್ತು ಕೋಟಿಗೂ ಹೆಚ್ಚು ಹಣವನ್ನು ವಿವಿಧ ಅನಾಥಾಶ್ರಮಗಳಿಗೆ ದಾನ ಮಾಡುತ್ತಾರೆ ‌.‌