ನಟ ರಮೇಶ್ ಪುತ್ರಿ ರಿಸೆಪ್ಷನ್ಗೆ ಯಾರೆಲ್ಲ ಬಂದಿದ್ದರು ಗೊತ್ತಾ..? ಸುದೀಪ್ ಯಶ್ ಸಕತ್ ಡ್ಯಾನ್ಸ್ : ವಿಡಿಯೋ ನೋಡಿ

Updated: Monday, January 18, 2021, 13:43 [IST]

ಹೌದು ನಮ್ಮ ಸ್ಯಾಂಡಲ್ವುಡ್ನ ಮೋಸ್ಟ್ ಹ್ಯಾಂಡ್ಸಮ್ ಮತ್ತು ಇಂದಿಗೂ ಚಿರಯುವಕರಂತೆ ಕಾಣುವ ನಟ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ಮತ್ತುಅಕ್ಷಯ್ ಅವರ ಮದುವೆ ಇತ್ತೀಚಿಗಷ್ಟೇ ತುಂಬಾ ಗ್ರಾಂಡ್ ಆಗಿ ನಡೆದಿತ್ತು. ರಮೇಶ್ ಪುತ್ರಿ ಮದುವೆಗೆ ಸಾಕಷ್ಟು ಗಣ್ಯರು ಕೂಡ ಬಂದಿದ್ದು, ಶುಭಕೋರಿ ಹಾರೈಸಿದರು. ಹೌದು ಇತ್ತೀಚಿಗಷ್ಟೇ ವಿವಾಹವಾಗಿದ್ದ ಈ ಜೋಡಿ ನಿನ್ನೆಯಷ್ಟೇ ಭರ್ಜರಿ ರಿಸೆಪ್ಶನ್ ಕೂಡ ಮಾಡಿಕೊಂಡಿತು.   

ಅನೇಕ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ರಿಸೆಪ್ಷನ್ ಒಂದನ್ನು ಆಯೋಜಿಸಿದ ನಟ ರಮೇಶ್ ಅರವಿಂದ್, ಮಗಳು ನಿಹಾರಿಕಾ ಮತ್ತು ಆಕಾಶ್ ಮದುವೆಗೆ ಮತ್ತೊಮ್ಮೆ ಸಾಕ್ಷಿಯಾದರು. ಹೌದು ಚಿತ್ರರಂಗದ ಅನೇಕ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಬಂದಿದ್ದು, ನಟ ರವಿಚಂದ್ರನ್, ಉಪೇಂದ್ರ, ಡಾಕ್ಟರ್ ಶಿವರಾಜಕುಮಾರ್ ಶ್ರೀಮುರುಳಿ, ಪಬ್ಲಿಕ್ ಟಿವಿ ರಂಗಣ್ಣ, ರಾಜಕೀಯದವರು ಕೂಡ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ರಿಸೆಪ್ಷನ್ ತುಂಬಾ ಸಕತ್ತಾಗಿ ನಡೆಯಿತು.   

ಇದರ ಜೊತೆ ಕಿಚ್ಚ ಸುದೀಪ್ ಹಾಗೂ ಯಶ್ ಅವರ ಡ್ಯಾನ್ಸ್ ಜುಗಲ್ಬಂದಿ ಕೂಡ ತುಂಬಾ ಸೊಗಸಾಗಿ ಕಂಡಿತು. ಅಷ್ಟಕ್ಕೂ ರಿಸೆಪ್ಶನ್ ಹೇಗಿತ್ತು ಎಂಬುದು ನಿಮಗೂ ತಿಳಿಯಬೇಕಾದಲ್ಲಿ ಇಲ್ಲಿರುವ ವಿಡಿಯೋ ನೋಡಿ, ಹಾಗೆ ನಟ ಸುದೀಪ್ ಹಾಗೂ ಯಶ್ ಡ್ಯಾನ್ಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ, ಜೊತೆಗೆ ಈ ವಿಡಿಯೋ ಇಷ್ಟವಾದಲ್ಲಿ, ತಪ್ಪದೇ ಶೇರ್ ಕೂಡ ಮಾಡಿ ಧನ್ಯವಾದಗಳು...