'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಮೊದಲ ದಿನದ ಶೂಟಿಂಗ್ ನಲ್ಲಿ ಪುಟ್ಟಗೌರಿ ಖ್ಯಾತಿಯ ರಂಜನಿ..!

Updated: Saturday, November 21, 2020, 12:59 [IST]

ಹೌದು ಪುಟ್ಟಗೌರಿ ಮದುವೆ ಖ್ಯಾತಿಯ ಕಿರುತೆರಯ ನಟಿ ರಂಜನಿ ರಾಘವನ್ ಅವರು ಈಗಾಗಲೇ ಈ ಮುಂಚೆ ಒಂದು ಸಿನಿಮಾದಲ್ಲಿ ಅಭಿನಯ ಮಾಡಿ, ಅಲ್ಲಿಯೂ ಸೈ ಎನಿಸಿಕೊಂಡು ಇದೀಗ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಮಿಂಚಲು ರೆಡಿ ಆಗಿದ್ದಾರೆ. ಹೌದು ದೂದ್ ಪೆಡ ದಿಗಂತ್ ಅವರ ಜೊತೆಯಲ್ಲಿ ಇದೆ ಮೊದಲ ಬಾರಿಗೆ ನಟಿ ರಂಜನಿ ಅವರು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದು,  

Advertisement

ತುಂಬಾ ಉತ್ಸುಹಕರಾಗಿದ್ದಾರೆ. ಮತ್ತು ಇಂದು ಮೊದಲ ದಿನದ ಮೊದಲ ಶೂಟಿಂಗ್ ಗಾಗಿ, ಚಿತ್ರತಂಡದ ಜೊತೆ ಪೂಜೆ ಸಲ್ಲಿಸಿದ್ದಾರೆ. ಅಶ್ಟಕ್ಕೂ ಯಾವ ಚಿತ್ರದಲ್ಲಿ ನಟಿ ರಂಜನಿ ಅಭಿನಯ ಮಾಡುತ್ತಿದ್ದಾರೆ ಗೊತ್ತಾ. 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಇಂದು ನಗರದ ಒಂದು ದೇವಸ್ಥಾನದಲ್ಲಿ ಪೂಜೆ ಮಾಡಿದ್ದು, ಚಿತ್ರೀಕರಣಕ್ಕೆ ಮುದಾಗಿದ್ದಾರೆ.  

Advertisement

ಜೊತೆಗೆ ನಟಿ ರಂಜನಿ ಅವರು, ನಟ ದಿಗಂತ್ ಜೊತೆ ನಟಿಸುವ ಈ ಚಿತ್ರದ ಹಿನ್ನೆಲೆಯಲ್ಲಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಒಂದು ಫೋಟೊ ಶೇರ್ ಮಾಡಿಕೊಂಡು ಮೊದಲ ದಿನ ಮೊದಲ ಶೂಟ್ ಎಂಬುದಾಗಿ ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೋಡಿ, ನಟಿ ರಂಜನಿಗೆ ಈ ಚಿತ್ರದ ಮೂಲಕ ಇನ್ನಷ್ಟು ಯಶಸ್ಸು ಸಿಗಲಿ ಎಂದು ಶುಭಾಶಯ ತಿಳಿಸಿದ್ದಾರೆ. ನೀವೂ ಕೂಡ ನಟಿ ರಂಜನಿಗೆ ಶುಭಾಶಯ ತಿಳಿಸಿ, ಹೆಚ್ಚಿನ ಮಟ್ಟದಲ್ಲಿ ಶೇರ್ ಮಾಡಿ ಧನ್ಯವಾದಗಳು..