ಸೋನುಸೂದ್ ಟೇಲರಿಂಗ್ ವೀಡಿಯೋ ವೈರಲ್

Updated: Saturday, January 16, 2021, 18:46 [IST]

 ಸೋನುಸೂದ್ ಟೇಲರಿಂಗ್ ವೀಡಿಯೋ ವೈರಲ್

  

ಸಂಕಷ್ಟದಲ್ಲಿದ್ದವರಿಹೆ ಸಹಾಯ ಮಾಡುವ ಮೂಲಕ ಒಂದಲ್ಲ ಒಂದು ರೀತಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇಂದು ಸೋನು ಸೂದ್ ಅವರು ಸ್ವತಃ ತಮ್ಮ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ವೀಡಿಯೋದಲ್ಲಿ ಶೀಘ್ರವೇ ಟೈಲರ್ ಅಂಗಡಿಯನ್ನು ತೆರೆಯುವುದಾಗಿ ಘೋಷಿಸಿದ್ದಾರೆ.

ಸೋನು ಸೂದ್ ಶನಿವಾರ ಹೊಲಿಗೆ ಯಂತ್ರದಲ್ಲಿ ಕುಳಿತು ಬಟ್ಟೆ ಹೊಲಿಯುತ್ತಾ, ನನ್ನ ಅಂಗಡಿಯಲ್ಲಿ ಎಲ್ಲರಿಗೂ ಉಚಿತವಾಗಿ ಬಟ್ಟೆಯನ್ನು ಹೊಲಿದು ಕೊಡಲಾಗುತ್ತದೆ. ಆದರೆ ತನ್ನ ಕೌಶಲ್ಯಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇಲ್ಲ ಎಂದು ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಗೇಲಿ ಮಾಡಿದ್ದಾರೆ.

  

ಅಲ್ಲದೆ ಈ ವೀಡಿಯೋವನ್ನು ಸ್ವತಃ ಸೋನು ಸೂದ್ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೋನು ಸೂದ್ ಈ ವೀಡಿಯೋದಲ್ಲಿ ಪ್ಯಾಂಟ್ ಹೊಲಿಯುತ್ತಿರುವಂತೆ ಕಾಣಿಸುತ್ತದೆ.ನಟನ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಇಲ್ಲಿಯವರೆಗೂ 10.4 ಸಾವಿರ ವ್ಯೂವ್ಸ್ ಮತ್ತು 6.1 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಮಾನಿಯೊಬ್ಬ ನನ್ನ ಬಟ್ಟೆಗಳನ್ನು ಇಲ್ಲಿ ಹೊಲಿಯುವುದಕ್ಕೆ ಕೊಡಲು ಏನು ಮಾಡಬೇಕು? ನಾನು ವೈಯಕ್ತಿಕವಾಗಿ ಟೈಲರ್ ಬಳಿಯೇ ವಿಚಾರಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾನೆ.