26 ವರ್ಷಗಳ ಬಳಿಕ ಕನ್ನಡದ ಕೆಜಿಎಫ್ -2 ಚಿತ್ರಕ್ಕೆ ಕಾಲಿಟ್ಟ ಈ ತಮಿಳು ನಟಿ..! ಯಾರು ಗೊತ್ತಾ ? ಚರ್ಚೆಯಲ್ಲಿ ಈಕೆಯ ಪಾತ್ರ

Updated: Saturday, January 16, 2021, 11:25 [IST]

ಇತ್ತೀಚಿಗಷ್ಟೇ ಸ್ಯಾಂಡಲ್ವುಡ್ನ ಹೆಮ್ಮೆಯ ಚಿತ್ರ ಕೆಜಿಎಫ್ 2 ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಈ ಮುಂಚೆ ಇದ್ದಿದ್ದ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದೆ. ಹೌದು ಕೆಜಿಎಫ್ ಟೀಸರ್ ನಲ್ಲಿ ತಮಿಳು ನಟಿ ಒಬ್ಬರು ಕಾಣಿಸಿಕೊಂಡಿದ್ದು, ಇದೀಗ ಈ ತಮಿಳು ನಟಿಯ ಪಾತ್ರದ ಬಗ್ಗೆಯೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಆ ತಮಿಳು ನಟಿ ಯಾರು ಗೊತ್ತಾ? ಅವರೇ ಈಶ್ವರಿ ರಾವ್. ಹೌದು ಈಶ್ವರಿ ರಾವ್ ಈ ಹಿಂದೆ ಕನ್ನಡದಲ್ಲಿ ತೆರೆ ಕಂಡ 'ಮೇಘಮಾಲೆ' ಎನ್ನುವ ಚಿತ್ರದಲ್ಲಿ 1994ರಲ್ಲಿ ಅಭಿನಯಿಸಿದ್ದರು. 

ಇದೀಗ ಮತ್ತೊಮ್ಮೆ ಕನ್ನಡ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ ಈಶ್ವರಿ ರಾವ್ ಅವರ ಪಾತ್ರ ಕೆಜಿಎಫ್ ಟೀಸರ್ ನಲ್ಲಿ ಚರ್ಚೆ ಹುಟ್ಟು ಹಾಕಿದೆ. ಅಷ್ಟಕ್ಕೂ ಚಿತ್ರದಲಿ ಇವರು ಯಶ್ ತಾಯಿನಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕೆಲವು ಕಡೆ ಮೊದಲನೇ ಕೆಜಿಎಫ್ ಭಾಗದಲ್ಲಿ ನಟ ಯಶ್ ಅವರ ತಾಯಿ ಮೃತಪಟ್ಟಿದ್ದು,ಕೆಜಿಎಫ್ ಎರಡನೇ ಭಾಗದಲ್ಲಿ ಹೇಗೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಟ ಯಶ್ ಅಭಿಮಾನಿಗಳು 'ಈಶ್ವರಿ ರಾವ್' ಅವರ ಪಾತ್ರ ಬೇರೆಯ ಪವರ್ಫುಲ್ ಪಾತ್ರವಾಗಿರಲಿದೆ ಎಂದು ಹೇಳುತ್ತಿದ್ದಾರೆ. 

ಹೌದು 48 ವರ್ಷದ ಈ ತಮಿಳು ನಟಿ ಈಶ್ವರಿ ರಾವ್ , ಮಲಯಾಳಂ, ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಹೆಚ್ಚು ನಟನೆ ಮಾಡಿದ್ದು, ಕೆಜಿಎಫ್ 2ನಲ್ಲಿ ಅಭಿನಯ ಮಾಡುತ್ತಿರುವುದು ಇದೀಗ ಖಾತ್ರಿಯಾಗಿದೆ. ಕೆಜಿಎಫ್ 2 ಚಿತ್ರದಲ್ಲಿ ಈಶ್ವರಿ ರಾವ್ ಅವರ ಪಾತ್ರ ಏನಿರಬಹುದು, ಹೇಗಿರಬಹುದು ಎಂದು ನಿಮಗೆ ಗೊತ್ತಿದ್ದರೆ,ನಿಮ್ಮ ನಿಮ್ಮ  ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು..